ರಷ್ಯಾ, ಪಾಕಿಸ್ಥಾನದಲ್ಲಿ ಸೋಂಕು ಹೆಚ್ಚಳ
Team Udayavani, May 4, 2020, 3:14 PM IST
ಮಣಿಪಾಲ: ಪಶ್ಚಿಮ ಯುರೋಪ್ ರಾಷ್ಟ್ರಗಳಲ್ಲಿ ಕೋವಿಡ್-19 ಲಾಕ್‌ಡೌನ್ ನಿಧಾನವಾಗಿ ತೆರವಾಗುತ್ತಿದೆ. ಈ ಹಿನ್ನೆಲೆ ಯುರೋಪ್ ರಾಷ್ಟ್ರ ಸ್ಪೇನ್‌ನಲ್ಲಿ ಜನ ಬೀದಿಗಿಳಿದು ವಸಂತ ಋತುವಿನ ಆಹ್ಲಾದ ಅನುಭವಿಸುವ ದೃಶ್ಯ ಕಂಡು ಬಂದಿದ್ದು, ಸುಮಾರು ಏಳು ವಾರಗಳ ಕಟ್ಟುನಿಟ್ಟಿನ ಲಾಕ್‌ಡೌನ್ ಅನಂತರ ಸ್ಪೇನ್ ಜನ ಪ್ರಥಮ ಬಾರಿಗೆ ಮನೆಯಿಂದ ಹೊರಬಂದು ಆನಂದಿಸುತ್ತಿದ್ದಾರೆ. ಜರ್ಮನಿಯಲ್ಲೂ ಮಕ್ಕಳು ಮೈದಾನದಲ್ಲಿ ಓಡಾಡಿ ಖುಷಿಪಟ್ಟ ದೃಶ್ಯಗಳು ಸೆರೆಯಾಗಿವೆ.
ಆದರೆ ರಷ್ಯಾ ಹಾಗೂ ಪಾಕಿಸ್ಥಾನಗಳಲ್ಲಿ ದಾಖಲೆ ಸಂಖ್ಯೆಯ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುತ್ತಲೇ ಇವೆ ಎಂದು ಎಂಎಸ್‌ಎನ್ ವರದಿ ಮಾಡಿದೆ.
9ಸಾವಿರಕ್ಕೂ ಹೆಚ್ಚು
ರಷ್ಯಾದಲ್ಲಿ ಶನಿವಾರ ಒಂದೇ ದಿನ ಗರಿಷ್ಠ 10,633 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕು ಪ್ರಸರಣ ಮಟ್ಟ ಶೇ.20ರಷ್ಟು ಏರಿಕೆಯಾಗಿದೆ ಎನ್ನಲಾಗುತ್ತಿದೆ. ಪರಿಣಾಮ ಮಾಸ್ಕೋದ ಜನ ಆತಂಕಗೊಂಡಿದ್ದು, ನಗರದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಕಾಡುವ ಭೀತಿ ಎದುರಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದ್ದರೆ ಸೋಂಕಿತರ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ರಷ್ಯಾದಲ್ಲಿ ಒಟ್ಟು 1,34,687 ಪ್ರಕರಣಗಳು ವರದಿ ಆಗಿದ್ದು, ವಾಸ್ತವದಲ್ಲಿ ಅಂಕಿಅಂಶ
ಇನ್ನಷ್ಟು ಹೆಚ್ಚಿದೆ ಎನ್ನಲಾಗುತ್ತಿದೆ.
ಪಾಕಿಸ್ಥಾನದಲ್ಲಿಯೂ 1,297 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಿದೆ.
ಸ್ಪೇನ್‌ನಲ್ಲಿ ಸುಮಾರು 2,47,000 ಸಾವಿರ ಜನರಿಗೆ ಸೋಂಕು ತಗುಲಿ, 25 ಸಾವಿರ ಜನ ಮೃತಪಟ್ಟಿದ್ದರು. ಸದ್ಯ ವೈರಸ್ ನಿಯಂತ್ರಣಕ್ಕೆ ಬರುತ್ತಿರುವುದರಿಂದ ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದೆ. ಯುರೋಪ್ ಹಾಗೂ ಅಮೆರಿಕದ ಹಲವು ಭಾಗಗಳಲ್ಲಿ ಸೋಂಕು ನಿಯಂತ್ರಣಕ್ಕೆ ಪ್ರಯತ್ನ ಮುಂದುವರಿದಿದೆ. ಕೆಲವೆಡೆ ವ್ಯಾಪಾರ ವಹಿವಾಟುಗಳು ಮತ್ತೆ ಗರಿಗೆದರುತ್ತಿವೆ. 28 ಸಾವಿರಕ್ಕೂ ಅಧಿಕ ಕೊರೊನಾ ಸಾವು ಕಂಡ ಇಟಲಿಗೆ ಇನ್ನೂ ಸಂಪೂರ್ಣ ಬಿಡುಗಡೆ ಸಿಕ್ಕಿದಂತಿಲ್ಲ. 6,800 ಕ್ಕೂ ಅಧಿಕ ಸಾವುಗಳನ್ನು ಕಂಡ ಜರ್ಮನಿಯಲ್ಲಿ ಸಂಪೂರ್ಣ ಲಾಕ್‌ಡೌನ್‌ವಿಧಿಸಲಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.