ರಷ್ಯಾ ಶೆಲ್ ದಾಳಿಗೆ 7 ಸಾವು; ಖಾಕೀವ್‌ನಲ್ಲಿ ಮಂಗಳವಾರ, ಬುಧವಾರ ಸತತ ದಾಳಿ
Team Udayavani, Apr 14, 2022, 7:20 AM IST
ಕೀವ್: ಉಕ್ರೇನ್ ಮೇಲೆ ನಡೆಸಲಾಗುತ್ತಿರುವ ರಷ್ಯಾದ ದಾಳಿಗಳು ಮುಂದುವರಿದಿವೆ. ಉಕ್ರೇನ್‌ನ ಖಾಕೀವ್‌ನಲ್ಲಿ ಬುಧವಾರದಂದು ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಗೆ ಏಳು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಪ್ರಾಂತೀಯ ಗವರ್ನರ್ ತಿಳಿಸಿದ್ದಾರೆ.
ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ 22 ಮಂದಿ ಗಾಯಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಇದೇ ನಗರದಲ್ಲಿ ನಡೆದಿದ್ದ ಶೆಲ್ ದಾಳಿಯ ಸಂದರ್ಭದಲ್ಲಿ ಗಾಯಗೊಂಡಿದ್ದ ಬಾಲಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಗವರ್ನರ್ ತಿಳಿಸಿದ್ದಾರೆ. ಇದೇ ವೇಳೆ, ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದಾಗಿನಿಂದ ಇಲ್ಲಿಯವರೆಗೆ ಉಕ್ರೇನ್‌ನ ಬಂದರು ನಗರವಾದ ಮರಿಯುಪೋಲ್‌ನಲ್ಲಿ 21 ಸಾವಿರ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮರಿಯುಪೋಲ್ ಮೇಯರ್ ವಾಡಿಮ್ ಬಾಯೆcನ್ಕೋ ತಿಳಿಸಿದ್ದಾರೆ.
“ಯೋಧರ ತಾಯಂದಿರೇ ಬರಲಿ’: ಉಕ್ರೇನ್‌ನ ವಿವಿಧ ಆಸ್ಪತ್ರೆಗಳಲ್ಲಿರುವ ಶವಾಗಾರಗಳಲ್ಲಿ ಒಟ್ಟು 1,500 ರಷ್ಯಾ ಯೋಧರ ಶವಗಳಿದ್ದು ರಷ್ಯಾವು ಆ ಶವಗಳನ್ನು ವಶಪಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಉಕ್ರೇನ್‌ನ ಡಿನಿಪ್ರೋ ನಗರದ ಮೇಯರ್ ಮಿಖಾಯಿಲ್ ಲಿಸೆನ್ಕೋ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, “”ಉಕ್ರೇನ್ ಮೇಲಿನ ಯುದ್ಧದ ವೇಳೆ ಮೃತರಾದ 1,500 ಯೋಧರ ಶವಗಳು ಇಲ್ಲಿನ ನಾನಾ ಆಸ್ಪತ್ರೆಗಳಿವೆ. ರಷ್ಯಾ ಸರಕಾರ ವಂತೂ ತನ್ನ ಸೈನಿಕರ ಶವಗಳನ್ನು ತಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ಹಾಗಾಗಿ, ಸೈನಿಕರ ತಾಯಂದಿರೇ ಬಂದು ತಮ್ಮ ಮಕ್ಕಳ ಶವಗಳನ್ನು ತೆಗೆದುಕೊಂಡು ಹೋಗಬೇಕು” ಎಂದು ಹೇಳಿದ್ದಾರೆ. ಇದೇ ವೇಳೆ, ಲುಹಾನ್‌ಸ್ಕ್ ನಗರ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿನ ಆಸ್ಪತ್ರೆಗಳ ಶವಾಗಾರಗಳಲ್ಲಿ ರಷ್ಯಾ ಸೈನಿಕರ
ಶವಗಳು ತುಂಬಿವೆ ಎಂದು ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದಿಂದ ಹೊಸ ಉಗ್ರವಾದ: “ಉಕ್ರೇನ್ ಮೇಲೆ ಹೊಸ ಹೊಸ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸುವ ಮೂಲಕ ರಷ್ಯಾ ದೇಶ, ಹೊಸ ಮಾದರಿಯ ಉಗ್ರವಾದವನ್ನು ಹುಟ್ಟುಹಾಕಿದೆ” ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ದೀರ್ಘಕಾಲದಲ್ಲಿ ಜನರಿಗೆ ಮಾರಕವಾಗಿ ಪರಿಗಣಿಸಬಹುದಾದ ರಾಸಾಯನಿಕಗಳನ್ನು ನಾಗರಿಕರು ವಾಸಿಸುವ ಸ್ಥಳಗಳಲ್ಲಿ ಪ್ರಯೋಗಿಸಲಾಗಿದೆ. ಈ ರೀತಿಯ ಮಂದ ವಿಷ ಎನ್ನಬಹುದಾದ ಅಸ್ತ್ರಗಳನ್ನು ಬಳಸುವ ಮೂಲಕ ರಷ್ಯಾ ಹೊಸ ರೀತಿಯ ಉಗ್ರವಾದ ದಾಳಿಯನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.
“ಈ ವ್ಯಕ್ತಿ ಬೇಕಾದರೆ ನಮ್ಮ ಯುವತಿಯರನ್ನು ಬಿಡಿ’
ರಷ್ಯಾದ ಪ್ರಭಾವಿ ರಾಜಕಾರಣಿಗಳಲ್ಲೊಬ್ಬರಾದ ವಿಕ್ಟರ್ ಮೆಡ್ವೆಡ್‌ಚುಕ್ ಎಂಬವರನ್ನು ತಾನು ಬಂಧಿಸಿರುವು ದಾಗಿ ಉಕ್ರೇನ್ ಹೇಳಿಕೊಂಡಿದೆ. ಇದರ ಫೋಟೋವನ್ನು ಪ್ರಕಟಿ ಸಿರುವ ಉಕ್ರೇನ್‌ನ ಅಧಿಕಾ ರಿ ಗಳು, “ಈ ಫೋಟೋದಲ್ಲಿರುವ ವ್ಯಕ್ತಿಯು ಬೇಕೆಂದರೆ, ಅದಕ್ಕೆ ಪ್ರತಿರೂಪವಾಗಿ ನೀವು ಹಿಡಿದಿ ಟ್ಟು ಕೊಂಡಿರುವ ಉಕ್ರೇನ್‌ನ ಯೋಧರು, ಯುವತಿಯರನ್ನು ಬಿಡುಗಡೆ ಮಾಡ ಬೇಕು ಎಂದು ಉಕ್ರೇನ್ ರಷ್ಯಾಕ್ಕೆ ತಾಕೀತು ಮಾಡಿದೆ. ಆದರೆ, ಈ ಫೋಟೋದ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾ, ಈ ಫೋಟೋದಲ್ಲಿರುವ ವ್ಯಕ್ತಿ ವಿಕ್ಟರ್ ಎಂಬುದು ಮನದಟ್ಟಾಗಿದೆ. ಆದರೆ, ಅವರು ಉಕ್ರೇನ್‌ನ ಬಂಧನದಲ್ಲಿ ರುವ ಬಗ್ಗೆ ಖಚಿತತೆ ಇಲ್ಲ ಎಂದಿದೆ.
ಪುತಿನ್‌ಗೆ ವಿವೇಚನೆ ಇಲ್ಲ: ಬರಾಕ್ ಒಬಾಮಾ
ಉಕ್ರೇನ್‌ನ ಮೇಲೆ ದಾಳಿ ನಡೆಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಒಬ್ಬ ವಿವೇಚನೆ ಹಾಗೂ ಮುಂದಾಲೋಚನೆ ಇಲ್ಲದ ನಾಯಕ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಟೀಕಿಸಿದ್ದಾರೆ. ಅಮೆರಿಕದ ಎನ್‌ಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “”ಪುತಿನ್ ತನ್ನ ರಷ್ಯಾ ಪ್ರಜೆಗಳ ಬಗ್ಗೆಯೇ ನಿರ್ದಯೆಯಿಂದ ನಡೆದುಕೊಳ್ಳುವಂಥವರು. ದ್ವಂದ್ವ ನಿಲುವುಗಳು, ಆಲೋಚನೆಗಳಲ್ಲಿ ಕುಂದು ಕೊರತೆಯಿರುವಂಥ ವ್ಯಕ್ತಿ. ಇವನ್ನು ಮರೆಮಾಚಲು ಅವರು ರಾಷ್ಟ್ರೀಯತೆ, ಧರ್ಮ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದ ಕಾರ್ಯಾಚರಣೆಗಳನ್ನು ಅನುಸರಿಸುತ್ತಲೇ ಇರುತ್ತಾರೆ” ಎಂದು ಅವರು ತಿಳಿಸಿದ್ದಾರೆ.
ಶಾಂತಿ ಮಾತುಕತೆ ಮುಗಿದ ಅಧ್ಯಾಯ
ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸಲು ಅಮೆರಿಕ, ನ್ಯಾಟೋ ಸದಸ್ಯ ರಾಷ್ಟ್ರಗಳು ಹಾಗೂ ಜಗತ್ತಿನ ನಾನಾ ದೇಶಗಳು ನಡೆಸುತ್ತಿದ್ದ ಶಾಂತಿ ಮಾತುಕತೆಯ ಪ್ರಯತ್ನ ಒಂದು ಮುಗಿದ ಅಧ್ಯಾಯ ಎಂದು ರಷ್ಯಾದ ಅಧ್ಯಕ್ಷ ಪುತಿನ್ ತಿಳಿಸಿದ್ದಾರೆ. ಶಾಂತಿ ಮಾತುಕತೆಗಳು ರಷ್ಯಾದ ಹಿತಾಸಕ್ತಿಗೆ ಪೂರಕವಾಗಿಲ್ಲ. ಹಾಗಾಗಿ, ನಾವು ನಮ್ಮ ದಾಳಿಯನ್ನು ಮುಂದುವರಿಸುತ್ತೇವೆ. ಉಕ್ರೇನ್ ಮೇಲೆ ದಾಳಿ ನಡೆಸುವ ವಿಚಾರದಲ್ಲಿ ಪೂರ್ವಯೋಜಿತವಾಗಿ ಕಾರ್ಯತಂತ್ರಗಳನ್ನು ರೂಪಿಸಿದೆಯೋ ಅವೆಲ್ಲವನ್ನೂ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.