ನೈಸರ್ಗಿಕ ವಿಕೋಪ : 3.22 ಕೋ.ರೂ. ಪರಿಹಾರ ವಿತರಣೆ
Team Udayavani, Mar 16, 2022, 6:25 AM IST
ಬೆಂಗಳೂರು: ನೈಸರ್ಗಿಕ ವಿಕೋಪದಿಂದ ಮೀನುಗಾರರ ಸಾವು, ದೋಣಿ/ಬಲೆ ಹಾನಿ ಹಾಗೂ ವೈದ್ಯಕೀಯ ವೆಚ್ಚ ಸೇರಿದಂತೆ ಮತ್ತಿತರ ಪ್ರಕರಣಗಳಲ್ಲಿ ಕಳೆದ ಸಾಲಿನಲ್ಲಿ ಸಂತ್ರಸ್ತರಿಗೆ 3.22 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ತಿಳಿಸಿದ್ದಾರೆ.
ಶೂನ್ಯವೇಳೆಯಲ್ಲಿ ಬಿಜೆಪಿಯ ಗಣಪತಿ ದುಮ್ಮಾ ಉಳ್ವೇಕರ್ ಪ್ರಸ್ತಾವಿಸಿದ ವಿಷಯಕ್ಕೆ ಸಂಬಂಧಿಸಿಲಿಖಿತ ಉತ್ತರ ನೀಡಿದ ಸಚಿವರು, ಮೀನುಗಾರಿಕೆಯಲ್ಲಿ ತೊಡಗಿರುವಾಗ ನೀರಿನಲ್ಲಿ ಮುಳುಗಿ ಮರಣ ಹೊಂದಿದ ಪ್ರಕರಣಗಳಿಗೆ ಸರಕಾರ 6 ಲಕ್ಷ ರೂ. ಪರಿಹಾರ ನೀಡುತ್ತದೆ. ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾಗ ಹೊರತುಪಡಿಸಿ, ಉಳಿದ ಸಂದರ್ಭ ಅಂದರೆ ಧಕ್ಕೆಯಲ್ಲಿ/ಬಂದರಿನ ಒಳಗೆ/ಅಧಿಕೃತ ಇಳಿದಾಣ ಕೇಂದ್ರ/ನದಿ ದಡದಲ್ಲಿ ಮರಣ ಹೊಂದಿದ ಪ್ರಕರಣಗಳು ಹಾಗೂ ಮೀನುಗಾರಿಕೆಯಲ್ಲಿ ತೊಡಗಿದಾಗ ಅನಾರೋಗ್ಯದಿಂದ ಮೃತಪಟ್ಟ ಪ್ರಕರಣಗಳಿಗೆ ಆ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
83 ಪ್ರಕರಣಗಳು ವರದಿ
ಅದೇ ರೀತಿ, ಪ್ರಾಕೃತಿಕ ವಿಕೋಪದಿಂದ ನಾಡದೋಣಿ/ ಮೋಟರೀಕೃತ ದೋಣಿಗಳ ಹಾನಿ ಮತ್ತು ಬಲೆ ಮತ್ತಿತರ ಸೊತ್ತು ಹಾನಿಗೆ ಸವಕಳಿ ಕಳೆದು ಗರಿಷ್ಠ ಒಂದು ಲಕ್ಷ ರೂ. ಅಥವಾ ಖರೀದಿ/ದುರಸ್ತಿಯ ಶೇ. 50ರಷ್ಟು ಮೌಲ್ಯವನ್ನು ಪರಿಹಾರವಾಗಿ ನೀಡಲಾಗುವುದು. 2020-21ರಲ್ಲಿ ಮರಣ, ದೋಣಿ/ಬಲೆ ಹಾನಿ ಹಾಗೂ ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದ 83 ಪ್ರಕರಣಗಳು ವರದಿಯಾಗಿದ್ದು, 3.22 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದರು.
ಇದನ್ನೂ ಓದಿ:ಸಬ್ ಕಾ ವಿಶ್ವಾಸ್ ಸೇ ಕಾಂಗ್ರೆಸ್ ಸರ್ವನಾಶ್: ಬೋಪಯ್ಯ
ಹೆಚ್ಚುವರಿ ಪರಿಹಾರ
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸé ಸಂಪದ ಯೋಜನೆಯ ಉಪ ಯೋಜನೆಯಾದ ಜನತಾ ಸಾಮೂಹಿಕ ಅಪಘಾತ ವಿಮಾ ಯೋಜನೆಯಡಿ ಮೃತ ಮೀನುಗಾರರ ಕುಟುಂಬಕ್ಕೆ ಹೆಚ್ಚುವರಿಯಾಗಿ 5 ಲಕ್ಷ ರೂ. ಪರಿಹಾರ ಲಭ್ಯವಾಗುವುದು. ಹಾಗೂ ಶಾಶ್ವತ ಅಂಗವಿಕಲರಾದವರಿಗೆ 2.50 ಲಕ್ಷ ರೂ. ಪರಿಹಾರ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
49 ಕೋಟಿ ರೂ. ಮನ್ನಾ
2017-18 ಮತ್ತು 2018-19ರಲ್ಲಿ ಶೇ. 2ರ ಬಡ್ಡಿದರದಲ್ಲಿ ಮೀನುಗಾರಿಕೆ ಚಟುವಟಿಕೆಗಳಿಗೆ ಸಾಲ ಪಡೆದ 20,066 ಮೀನುಗಾರರ ಹೊರಬಾಕಿ ಸಾಲ 49 ಕೋಟಿ ರೂ. ಮನ್ನಾ ಮಾಡಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.