ಜಲಸಾರಿಗೆ ಜಾಲವಾಗಲಿದೆ ಗುರುಪುರ, ಹಂಗಾರಕಟ್ಟೆ: ಸಾಗರಮಾಲಾದಡಿ 168 ಕೋ.ರೂ. ಮಂಜೂರು

ಸಾಗರಮಾಲಾದಡಿ ರಾಜ್ಯದ 6 ತಾಣ ಅಭಿವೃದ್ಧಿಗೆ ಅನುಮೋದನೆ; ಜಲ ಪ್ರವಾಸೋದ್ಯಮ, ಜಲಸಾರಿಗೆಯಡಿ ಆರ್ಥಿಕತೆಗೆ ಪೂರಕ

Team Udayavani, Apr 26, 2022, 10:35 AM IST

ಜಲಸಾರಿಗೆ ಜಾಲವಾಗಲಿದೆ ಗುರುಪುರ, ಹಂಗಾರಕಟ್ಟೆ: ಸಾಗರಮಾಲಾದಡಿ 168 ಕೋ.ರೂ. ಮಂಜೂರು

ಕುಂದಾಪುರ: ಸಾಗರಮಾಲಾ ಯೋಜನೆಯಡಿ ರಾಜ್ಯದ 6 ತಾಣಗಳ ಅಭಿವೃದ್ಧಿಗೆ ಕೇಂದ್ರ ಸರಕಾರ 168 ಕೋ.ರೂ. ಬಿಡುಗಡೆಗೆ ಅನುಮೋದನೆ ನೀಡಿದ್ದು, ಇದರಲ್ಲಿ ಉಡುಪಿ ಮತ್ತು ದಕ್ಷಿಣ ಕನಡ ಜಿಲ್ಲೆಯ 3 ತಾಣಗಳೂ ಸೇರಿವೆ.

ದೇಶದ ನದಿಗಳನ್ನು ಜಲಸಾರಿಗೆಯ ಮಾರ್ಗ ಗಳಾಗಿ ಪರಿವರ್ತಿಸಲು ಕೇಂದ್ರ ಸರಕಾರ ಈ ಯೋಜನೆಯನ್ನು ರೂಪಿಸಿದೆ. ಇದರಡಿ ನದಿ, ಬಂದರುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಗರ ಚಟುವಟಿಕೆಗಳಿಗೆ ಸಂಬಂಧಿಸಿದ ಆರ್ಥಿಕತೆ (ಬ್ಲೂ ಎಕಾನಮಿ)ಯನ್ನು ಬಲಪಡಿಸುವ ಉದ್ದೇಶವಿದೆ. ಸಾಗರ ಮಾರ್ಗಗಳ ಭದ್ರತೆ ಹೆಚ್ಚಳವೂ ಸೇರಿದೆ.

ಎಲ್ಲೆಲ್ಲಿ?: ದ.ಕ. ಜಿಲ್ಲೆಯ ಗುರುಪುರ ನದಿಯ ಹಿನ್ನೀರಿನ ನಡುಗಡ್ಡೆಗಳ ಅಭಿವೃದ್ಧಿಗೆ 9 ಕೋ.ರೂ., ಗುರುಪುರ ನದಿಯಲ್ಲಿ ಜಲಮಾರ್ಗ ಅಭಿವೃದ್ಧಿಗೆ 30 ಕೋ.ರೂ. ಮತ್ತು ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಪ್ರದೇಶದ ಅಭಿವೃದ್ಧಿಗೆ 78 ಕೋ.ರೂ. ಒದಗಲಿದೆ. ಕಾರವಾರ ಬಂದರು ಪ್ರದೇಶ ಅಭಿವೃದ್ಧಿಗೆ 19 ಕೋ.ರೂ., ತದಡಿ ಅಘನಾಶಿನಿ ನದಿ ಜಲಮಾರ್ಗ ಅಭಿವೃದ್ಧಿಗೆ 20 ಕೋ.ರೂ. ಮತ್ತು ಬಾಗಲಕೋಟೆಯ ಆಲಮಟ್ಟಿ ನದಿ ಜಲಮಾರ್ಗದ ಅಭಿವೃದ್ಧಿಗೂ 12 ಕೋ.ರೂ. ಮಂಜೂರಾಗಿದೆ. ಈ 6 ತಾಣಗಳು ರಾಜ್ಯದ ಒಳನಾಡು ಜಲಸಾರಿಗೆ ಜಾಲವಾಗಿ ರೂಪುಗೊಂಡರೆ ವ್ಯಾಪಾರ ವಹಿವಾಟು ಹಾಗೂ ಪ್ರವಾಸೋದ್ಯಮಕ್ಕೆ ಪೂಕರವಾಗಲಿವೆ.

ಏನೆಲ್ಲ ಅಭಿವೃದ್ಧಿ?
ಈ ಅನುದಾನದಲ್ಲಿ ಗುರುಪುರದ 3 ದ್ವೀಪಗಳಲ್ಲಿ 5 ಫ್ಲೋಟಿಂಗ್‌ ಜೆಟ್ಟಿಗಳು ನಿರ್ಮಾಣವಾಗಲಿವೆ. ಹಂಗಾರಕಟ್ಟೆ ಬಂದರು ಪ್ರದೇಶಕ್ಕೆ ಸ್ವರ್ಣಾ-ಸೀತಾನದಿಯಡಿ ಜಲಮಾರ್ಗ ನಿರ್ಮಾಣವಾಗಲಿದೆ. ಸಣ್ಣ ಹಡಗು, ಬೋಟು, ಬಾರ್ಜ್‌ಗಳು ಸಂಚರಿ ಸಲು ನೆರವಾಗುವಂತೆ ಸಮಾನ ಆಳದಲ್ಲಿ ಡ್ರೆಜ್ಜಿಂಗ್‌ ನಡೆಯಲಿದೆ. ಅಲ್ಲಲ್ಲಿ ಫ್ಲೋಟಿಂಗ್‌ ಜೆಟ್ಟಿಗಳು ನಿರ್ಮಾಣವಾಗಲಿವೆ. ವ್ಯಾಪಾರ ವಹಿವಾಟಿನ ಸಲುವಾಗಿ ಹಡಗುಗಳಿಂದ ಸರಕುಗಳನ್ನು ತುಂಬಲು ಮತ್ತು ಇಳಿಸಲು ಕ್ರೇನ್‌ಗಳ ವ್ಯವಸ್ಥೆಯೂ ಇರಲಿದೆ.

ಕರಾವಳಿಯಲ್ಲಿ ಸಾಗರ ಜಲಮಾರ್ಗದ ಜತೆಗೆ ಒಳನಾಡು ಜಲಸಾರಿಗೆ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದರೂ ಈವರೆಗೆ ಸಾಕಾರಗೊಂಡಿರಲಿಲ್ಲ. ಈಗ ಈ ಯೋಜನೆಯಡಿ ನಿರೀಕ್ಷೆ ಈಡೇರುವ ಸಾಧ್ಯತೆ ಇದೆ. ಕಾಲಮಿತಿಯೊಳಗೆ ಈ ಯೋಜನೆಗಳು ಜಾರಿಗೊಳ್ಳುವವೋ ಕಾದು ನೋಡಬೇಕಿದೆ.

ಹಿನ್ನೀರು ಪ್ರವಾಸೋದ್ಯಮಕ್ಕೆ ವಿಫ‌ುಲ ಅವಕಾಶ
ದ.ಕ., ಉಡುಪಿ ಮತ್ತು ಉ.ಕ. ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಸಾಗರ ಮತ್ತು ನದಿಯ ಮೂಲಕ ಜಲ ಪ್ರವಾಸೋದ್ಯಮ ಇದರಲ್ಲಿ ಪ್ರಮುಖ ವಾದುದು. ಸಾಗರತೀರ ಪ್ರವಾಸೋದ್ಯಮ ಒಂದು ಪ್ರಮುಖ ಆದಾಯ ತರುವ ಕ್ಷೇತ್ರ. ಮಂಗಳೂರು, ಮಲ್ಪೆ, ಗಂಗೊಳ್ಳಿ ಬಂದರು, ದ.ಕ.ದ ನೇತ್ರಾವತಿ, ಫಲ್ಗುಣಿ, ಉಡುಪಿಯ ಸ್ವರ್ಣಾ, ಸೀತಾನದಿ, ಸೌಪರ್ಣಿಕಾ, ಪಂಚಗಂಗಾವಳಿ, ಉತ್ತರ ಕನ್ನಡದ ಕಾಳಿ ನದಿಗಳ ಇಕ್ಕೆಲಗಳ ಹಿನ್ನೀರಿನಲ್ಲಿ ಸುಂದರ ಪ್ರಕೃತಿ ತಾಣಗಳಿವೆ. ಬೋಟು ಹೌಸ್‌ಗಳನ್ನು ಒಳಗೊಂಡ ಪ್ರವಾಸೋದ್ಯಮ ತಾಣಗಳನ್ನಾಗಿ ಅಭಿವೃದ್ಧಿಪಡಿಸಬಹುದು.

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

2

Kundapura: ಒಂದು ಕರೆಗಾಗಿ 3-4 ಕಿ.ಮೀ. ನಡೆಯಬೇಕು!

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.