Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
Team Udayavani, Nov 18, 2024, 3:41 PM IST
ಸಾಗರ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಯರಾಂ ಸೂರನಗದ್ದೆ ಅವರ ಮನೆ ಮೇಲೆ ದಾಳಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡ ಸೂರನಗದ್ದೆ ಗ್ರಾಮದಲ್ಲಿ ವಾಸವಿರುವ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಯರಾಮ್ ಮನೆ ಮೇಲೆ ದಾಳಿ ಮಾಡಿದಾಗ ಜಿಂಕೆ ಬೇಟಿಯಾಡಿ ಮಾಂಸವನ್ನು ಸಾಂಬಾರು ಮಾಡಿ ಊಟ ಮಾಡುತ್ತಿದ್ದರು. ಜಿಂಕೆಯನ್ನು ಬೇಟೆಯಾಡಿ ಕೆಲವರು ಮಾಂಸವನ್ನು ಹಂಚಿಕೊಂಡಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಜಿಂಕೆಯ ಚರ್ಮಕ್ಕಾಗಿ ಶೋಧ ನಡೆದಿದೆ. ದಾಳಿಯ ಮಾಹಿತಿ ತಿಳಿದ ಜಯರಾಮ್ ಪರಾರಿಯಾಗಿದ್ದಾರೆ. ಆರೋಪಿ ಪತ್ತೆಗೆ ಪ್ರಯತ್ನ ನಡೆಸಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ಅಣ್ಣಪ್ಪ ತಿಳಿಸಿದ್ದಾರೆ. ಜಯರಾಮ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ಅರಣ್ಯಪಾಲಕರಾದ ಯಶವಂತ್, ಸುಮಿತಾ, ವೇದನಾಯ್ಕ್, ಉಮೇಶ್, ಶಿವನಗೌಡ ಇನ್ನಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.