ಸಾಗರ : ವಿದ್ಯುತ್ ತಂತಿ ತಗುಲಿ ತೆಂಗಿನ ಮರಕ್ಕೆ ಬೆಂಕಿ
Team Udayavani, Mar 12, 2022, 8:33 PM IST
ಸೊರಬ: ಗ್ರಾಮದ ಮಧ್ಯದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ತಗುಲಿ ತೆಂಗಿನ ಮರಕ್ಕೆ ಬೆಂಕಿ ತಗುಲಿದ ಘಟನೆ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ನಡೆದಿದೆ.
ನಿರಂತರ ವಿದ್ಯುತ್ ಯೋಜನೆಯ 11 ಕೆವಿ ವಿದ್ಯುತ್ ತಂತಿ ಗ್ರಾಮದಲ್ಲಿ ಹಾದುಹೋಗಿದೆ. ಗ್ರಾಮದ ರಾಮಪ್ಪ ಹುಚ್ಚಪ್ಪ ಎಂಬುವರ ಮನೆಯ ಮುಂಭಾಗದಲ್ಲಿರುವ ತೆಂಗಿನ ಮರದ ಒಣಗಿದ ಗರಿಗಳಿಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಗ್ರಾಮದಲ್ಲಿ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯ 11 ಕೆವಿ ವಿದ್ಯುತ್ ಮಾರ್ಗವು ಹಾದು ಹೋಗಿದ್ದು, ವಿದ್ಯುತ್ ತಂತಿಯ ಮೇಲ್ಬಾಗದಲ್ಲಿಯೇ ಅನೇಕ ತೆಂಗಿನ ಮರದ ಗರಿಗಳು ಚಾಚಿಕೊಂಡಿವೆ. ಗ್ರಾಮದಲ್ಲಿ ಆತಂಕ ನಿರ್ಮಾಣವಾಗಿದ್ದು, ಈಗಾಗಲೇ ಸುಮಾರು 5 ಮರಗಳು ವಿದ್ಯುತ್‍ಗೆ ಬಲಿಯಾಗಿವೆ. ಇನ್ನೂ ತೆಂಗಿನ ಮರದಲ್ಲಿನ ಕಾಯಿಗಳನ್ನು ತೆಗೆಯಲು ಸಹ ಭಯದ ವಾತಾವರಣವಿದೆ. ಯಾವ ಕ್ಷಣದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎನ್ನುವ ಆತಂಕ ಗ್ರಾಮಸ್ಥರದ್ದಾಗಿದ್ದು, ಕೂಡಲೇ ಗ್ರಾಮದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‍ನ್ನು ಕೇಬಲ್ ಲೈನ್ ಆಗಿ ಪರಿವರ್ತಿಸಬೇಕು ಎಂದು ಗ್ರಾಮಸ್ಥರಾದ ಪರಮೇಶ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಘೋಷಣೆ, ಸಿದ್ದಾಂತಗಳಿಂದ ಸರ್ಕಾರಗಳು ಜನರನ್ನು ಮರಳು ಮಾಡಲು ಸಾಧ್ಯವಿಲ್ಲ: ಆನಂದ್ ಸಿಂಗ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.