Indian Navy: ನೌಕಾಪಡೆಗೆ ಸೇರಲಿದೆ “ಸಾಗರದಾಳದ ಸಾರೋಟು”?
- ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮಧ್ಯಮಗಾತ್ರದ ಜಲಾಂತರ್ಗಾಮಿಗಳು
Team Udayavani, Dec 10, 2023, 9:32 PM IST
ನವದೆಹಲಿ: ಸದ್ಯದಲ್ಲೇ ದೇಶದ ನೌಕಾಪಡೆಗೆ “ಸಾಗರದಾಳದ ಸಾರೋಟು” ಎಂದು ಕರೆಯಲ್ಪಡುವ ಮಧ್ಯಮ ಗಾತ್ರದ ಜಲಾಂತರ್ಗಾಮಿಗಳು (ಮಿಡ್‌ಜೆಟ್ ಸಬ್‌ಮರೀನ್) ಸೇರ್ಪಡೆಯಾಗಲಿದೆ. ಸಮುದ್ರದಾಳದ ವಿಶೇಷ ಕಾರ್ಯಾಚರಣೆಗೆ ನೌಕಾ ಕಮಾಂಡೋ (ಮಾರ್ಕೋಸ್)ಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಅವರಿಗೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಕಲ್ಪಿಸುವ ಉದ್ದೇಶದಿಂದ ನೌಕಾಪಡೆಯು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮಧ್ಯಮಗಾತ್ರದ ಜಲಾಂತರ್ಗಾಮಿಗಳನ್ನು ಖರೀದಿಸಲು ಚಿಂತನೆ ನಡೆಸಿದೆ.
ಇವುಗಳು ಲೀಥಿಯಂ-ಅಯಾನ್ ಬ್ಯಾಟರಿ ಚಾಲಿತ ಸಬ್‌ಮರೀನ್‌ಗಳಾಗಿದ್ದು, ಕನಿಷ್ಠ 6 ಮಂದಿ ಸಿಬ್ಬಂದಿಯನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರುತ್ತವೆ. ಇವುಗಳು ಮಧ್ಯಮ ಗಾತ್ರದ ಜಲಾಂತರ್ಗಾಮಿಗಳಾದ ಕಾರಣ, ಡೈವರ್‌ಗಳು ದೊಡ್ಡ ಗಾತ್ರದ ಸಿಲಿಂಡರ್‌ಗಳನ್ನು ಅದರಲ್ಲಿ ಒಯ್ಯಬಹುದು. ಇದರಿಂದ ಅವರು ದೀರ್ಘ ಅವಧಿಗೆ ಸಮುದ್ರದಾಳದಲ್ಲಿ ಉಳಿಯಲು ಸಹಾಯಕವಾಗಲಿದೆ. ಅದೇ ರೀತಿ, ವಿವಿಧ ಕಾರ್ಯಾಚರಣೆಗಳಿಗಾಗಿ ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನೂ ಒಯ್ಯಬಹುದಾಗಿದೆ.
ಇಂಥ ಅತ್ಯಾಧುನಿಕ ಸಾರೋಟುಗಳನ್ನು ಜಗತ್ತಿನ ಬಹುತೇಕ ಎಲ್ಲ ಸುಧಾರಿತ ನೌಕಾಪಡೆಗಳು ಬಳಸುತ್ತಿವೆ. ನೀರೊಳಗಿನ ಕಣ್ಗಾವಲು, ಶತ್ರುಗಳ ಕರಾವಳಿ ಪ್ರದೇಶಗಳ ಮೇಲೆ ದಾಳಿ, ಬಂದರುಗಳಲ್ಲಿರುವ ಶತ್ರು ನೌಕೆಗಳ ಮೇಲೆ ದಾಳಿಗೂ ಇವುಗಳನ್ನು ಬಳಸಬಹುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.