“ಸಹಕಾರ ರತ್ನ” ಪ್ರಶಸ್ತಿ ಪುರಸ್ಕೃತ ಉಮೇಶ್ ಟಿ. ಕರ್ಕೇರ ಅವರಿಗೆ ಸಮ್ಮಾನ
Team Udayavani, Dec 1, 2023, 12:28 AM IST
ಮಂಗಳೂರು: ವಿಜಯಪುರದಲ್ಲಿ ನಡೆದ ರಾಜ್ಯಮಟ್ಟದ ಸಹಕಾರ ಸಪ್ತಾಹ ಸಮಾರಂಭದಲ್ಲಿ ರಾಜ್ಯಮಟ್ಟದ “ಸಹಕಾರ ರತ್ನ’ ಪ್ರಶಸ್ತಿಯನ್ನು ಪಡೆದ ಮಂಗಳೂರು ಯಾಂತ್ರೀಕೃತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಟಿ. ಕರ್ಕೇರ ಹೊಸಬೆಟ್ಟು ಅವರನ್ನು ಸಂಘದ ಸಭಾಂಗಣದಲ್ಲಿ ಗೌರವಿಸಲಾಯಿತು.
ಸಹಕಾರ ಕ್ಷೇತ್ರ ಸೇರಿದಂತೆ ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ಈ ಪ್ರಶಸ್ತಿ ಸಂದಿದ್ದು, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಉಮೇಶ್ ಕರ್ಕೇರ ಹೇಳಿದರು.
ಮಂಗಳೂರು ಯಾಂತ್ರೀಕೃತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಉಪಾಧ್ಯಕ್ಷ ಬಾಬು ಸಾಲಿಯಾನ್ ಮೊಗವೀರಪಟ್ಣ, ನಿರ್ದೇಶಕರಾದ ಕಾಶೀನಾಥ್ ಕರ್ಕೇರ, ಕಮಲಾಕ್ಷ ಅಮೀನ್, ಮನೋಹರ ಬೋಳೂರು, ದೇವಾನಂದ ಬೆಂಗ್ರೆ, ಶಿವಾನಂದ ಬೋಳಾರ, ಶಾಮ್ಲಾಲ್ ಬೋಳೂರು, ವರದರಾಜ್ ಬಂಗೇರ, ಪರ್ಸೀನ್ ಬೋಟ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಮತ್ಸ್ಯೋದ್ಯಮಿ ಮೋಹನ್ ಬೆಂಗ್ರೆ, ಮತ್ಸ್ಯೋದ್ಯಮಿಗಳಾದ ದಯಾನಂದ ಪುತ್ರನ್ ಮೊಗವೀರಪಟ್ಣ, ಮೋಹನ್ ಜಿ. ಕೋಟ್ಯಾನ್, ಕುಮಾರ್ ಕಾಂಚನ್, ನವೀನ್ಚಂದ್ರ ಬೋಳಾರ, ಮನೋಹರ ಪುತ್ರನ್, ವಿಲಿಯಂ ಡಿ’ಸೋಜಾ, ಸುಧೀರ್ ಪುತ್ರನ್, ಕಿರಣ್ ಉಳ್ಳಾಲ, ಭಾಷಾ ಹಸನಬ್ಬ, ವಾರಿಜಾಕ್ಷ, ಸುರೇಶ್, ಕಾರ್ಯದರ್ಶಿ ಟಿಶನ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.