Sampaje: ಸತತ ಮೂರು ದಿನಗಳಿಂದ ಕಾಡಾನೆ ದಾಳಿ; ಕೃಷಿ ನಾಶ
Team Udayavani, Aug 19, 2024, 12:44 AM IST
ಅರಂತೋಡು: ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಾಡಾನೆ ಹಿಂಡು ದಾಳಿ ನಡೆಸುತ್ತಿದೆ.
ದೇವರಗುಂಡ ಶೇಷಪ್ಪ, ಚಂದ್ರ ಶೇಖರ ಮತ್ತು ಚಡಾವಿನ ಹರೀಶ ಸೇರಿದಂತೆ ಹಲವು ಕೃಷಿಕರ ತೋಟಗಳಿಗೆ ಶುಕ್ರವಾರದಿಂದ ನಿರಂತರವಾಗಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಗಿಡಗಳ ಹಾನಿ ಸಹಿತ ಅಪಾರ ಕೃಷಿ ನಾಶ ಮಾಡಿದೆ.
ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಕೃಷಿ ನಾಶ ಮಾಡುತ್ತಿದ್ದು, ಕೃಷಿಕರು ಕಂಗಾಲಾಗಿದ್ದಾರೆ.
ಕೊಡಗು ವ್ಯಾಪ್ತಿಯ ಕಾಡಿನಿಂದ ರಬ್ಬರ್ ತೋಟದ ಮೂಲಕ ಇಳಿದು ಸಂಪಾಜೆ-ಕೊಡಗಿನ ನದಿಯನ್ನು ದಾಟಿ ಆನೆ ತೋಟಗಳಿಗೆ ದಾಳಿ ನಡೆಸುತ್ತಿದೆ. ಅಡಿಕೆ, ಬಾಳೆಗಿಡಗಳನ್ನು ನಾಶಪಡಿಸುತ್ತಿವೆ. ಇಲ್ಲಿ ಬಿದಿರು ಮತ್ತು ಈಚಲು ಮರ ಕೂಡ ಹೆಚ್ಚು ಇರುವುದರಿಂದ ಇವುಗಳಿಗಾಗಿ ದಾಳಿ ನಡೆಸುತ್ತಿವೆ. ಮೂರು ವರ್ಷಗಳ ಹಿಂದೆ ಇದೇ ರೀತಿ ಆನೆಗಳು ಬಂದಿದ್ದವು.
ಕಾದು ಕಾದು ಮಲಗಿದ
ಮೇಲೆ ಕಾಡಾನೆ ಪ್ರವೇಶ!
ಶುಕ್ರವಾರ ರಾತ್ರಿ ಈ ಪ್ರದೇಶದಲ್ಲಿ ಕಾಡಾನೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಕೃಷಿಕರು ಪಟಾಕಿ ಸಿಡಿಸಿ ಮಧ್ಯರಾತ್ರಿಯವರೆಗೆ ಕಾದು ಕುಳಿತಿದ್ದರು. ಆದರೆ ಅದುವರೆಗೆ ಆನೆಯ ಪತ್ತೆಯೇ ಇರಲಿಲ್ಲ. ಇನ್ನು ಆನೆ ಬರಲಿಕ್ಕಿಲ್ಲ ಎಂದು ಮಲಗಿದ ಬಳಿಕ ಆನೆ ದಾಳಿ ನಡೆಸಿತ್ತು. ಶನಿವಾರ ಕೂಡ ರೈತರು ತಡರಾತ್ರಿ ಎರಡು ಗಂಟೆಯವರೆಗೂ ಕಾದು ಕುಳಿತಿದ್ದರು. ಆನೆಯ ಸುಳಿವು ಇರಲಿಲ್ಲ. ಮುಂಜಾನೆ ಎದ್ದು ತೋಟಕ್ಕೆ ಹೋದರೆ ಅಲ್ಲಿ ಆನೆ ದಾಂಧಲೆ ನಡೆಸಿಯಾಗಿತ್ತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.