ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ; “ಸಮೃದ್ಧಿ ಸಹಕಾರಿ ಸೌಧ’ ಲೋಕಾರ್ಪಣೆ
Team Udayavani, Mar 12, 2023, 12:53 PM IST
ಬೆಳ್ಮಣ್: ಸಮಾಜ ಮುಖಿ ಚಿಂತನೆ ಹಾಗೂ ಸೇವೆಗೆ ಸಹಕಾರ ಕ್ಷೇತ್ರ ಹೆಸರಾಗಿದ್ದು ರಾಷ್ಟ್ರೀಯ ಬ್ಯಾಂಕ್‌ಗಳ ವಿಲೀನದಿಂದ ಗ್ರಾಹಕರಿಗೆ ತೊಂದರೆಯಾದಾಗ ಸಹಕಾರಿ ಬ್ಯಾಂಕ್‌ಗಳು ಮನೆ ಮನೆಗೆ ತಲುಪಿ ಉನ್ನತ ಸೇವೆ ನೀಡಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಶನಿವಾರ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನವೀಕೃತ “ಸಮೃದ್ಧಿ ಸಹಕಾರಿ ಸೌಧ’ದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಡ್ಕೂರು ಶ್ರೀ ದುರ್ಗಾಪರ ಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ರಾಮದಾಸ ಆಚಾರ್ಯ ಶುಭಾಶಂಸನೆಗೈದರು.
ಸಹಕಾರಿ ಸೌಧವನ್ನು ಸಚಿವ ವಿ. ಸುನಿಲ್ ಕುಮಾರ್, ನವೋದಯ ಸಹಕಾರಿ ಭವನವನ್ನು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ, ಭದ್ರತಾ ಕೊಠಡಿಯನ್ನು ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ರಸಗೊಬ್ಬರ ವಿಭಾಗವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪಡಿತರ ವಿಭಾಗವನ್ನು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಹಾಗೂ ಆಡಳಿತ ಕಚೇರಿಯನ್ನು ಮುಂಡ್ಕೂರು ದೊಡ್ಡಮನೆ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ| ಎನ್. ಎಸ್. ಶೆಟ್ಟಿ ಉದ್ಘಾಟಿಸಿದರು.
ಮುಂಡ್ಕೂರು ಚರ್ಚ್ ಧರ್ಮ ಗುರು ವಂ| ರೊನಾಲ್ಡ್ ಮಿರಾಂದ, ಆರ್‌ಜೆಎಂ ಖತೀಬ ಹಾರಿಸ್ ಮದನಿ, ಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಬಾಬು, ಉಪಾಧ್ಯಕ್ಷ ಭಾಸ್ಕರ ಎಂ. ಶೆಟ್ಟಿ, ಇನ್ನಾ ಗ್ರಾ.ಪಂ. ಅಧ್ಯಕ್ಷ ಕುಶ ಆರ್. ಮೂಲ್ಯ, ವಿಠೊಭ ದೇವಸ್ಥಾನದ ಮೊಕ್ತೇಸರ ವೆಂಕಟೇಶ್ ಕಾಮತ್, ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ, ಕಜೆ ಮಾರಿಗುಡಿ ದೇವಸ್ಥಾನದ ಗೌರವಾಧ್ಯಕ್ಷ ಎಂ.ಜಿ. ಕರ್ಕೇರಾ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ವಿನಯ್ ಕುಮಾರ್ ಶೆಟ್ಟಿ, ಪ್ರಗತಿಪರ ಕೃಷಿಕ ಸುಬೋಧ ಶೆಟ್ಟಿ, ಉಪಾಧ್ಯಕ್ಷ ಸಿಲ್ವೆಸ್ಟರ್ ಡಿ’ಮೆಲ್ಲೊ, ನಿರ್ದೇಶಕರಾದ ಪ್ರವೀಣ್ ಶೆಟ್ಟಿ ಇನ್ನಾ, ಮಹಾಬಲ ಪೂಜಾರಿ, ಅಮರನಾಥ ಶೆಟ್ಟಿ ಇನ್ನಾ, ಉಮೇಶ್ ಶೆಟ್ಟಿ, ಪುರುಷೋತ್ತಮ ಪೂಜಾರಿ, ಅಶೋಕ್ ಶೆಟ್ಟಿ ಖಂಡಿಗ, ಸಂಜೀವ, ಅನಸೂಯ ಸುಧಾಕರ ಶೆಟ್ಟಿ, ಲತಾ ಭಟ್ ಪೊಸ್ರಾಲು, ಕು| ಲೀಲಾ, ಜಯಂತ್ ಕುಮಾರ್ (ಆರ್ಥಿಕ ಪ್ರತಿನಿಧಿ) ಹಾಗೂ ಇತರ ಸ. ಸಂಘಗಳ ಅಧ್ಯಕ್ಷರು ಹಾಗೂ ಬ್ಯಾಂಕಿನ ಸಿಬಂದಿಗಳಿದ್ದರು.
ಡಾ| ರಾಜೇಂದ್ರ ಕುಮಾರ್ ಸಹಿತ ಎಲ್ಲರನ್ನೂ ಗೌರವಿಸಲಾಯಿತು. ಮುಂಡ್ಕೂರು ವ್ಯ.ಸೇ.ಸ. ಸಂಘದ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ ಸ್ವಾಗತಿಸಿದರು. ಸಿಇಒ ಅರುಣ್ ಕುಮಾರ್ ವರದಿ ನೀಡಿ, ಸಾಯಿನಾಥ ಶೆಟ್ಟಿ, ಶರತ್ ಶೆಟ್ಟಿ ಅಭಿನಂದನೆಗೈದರು. ಉಪಾಧ್ಯಕ್ಷ ಸಿಲ್ವೆಸ್ಟರ್ ಡಿ’ಮೆಲ್ಲೊ ವಂದಿಸಿ, ಸಂಗೀತಾ ಕುಲಾಲ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.