ಬದುಕು ಮಕ್ಕಳ ಮರಳಿನಾಟ
Team Udayavani, Jan 22, 2021, 7:15 AM IST
ಮಕ್ಕಳು ಸಮುದ್ರದ ಬದಿ ಅಥವಾ ಹೊಳೆಯ ಬದಿ ಮರಳಿನಲ್ಲಿ ಆಟ ವಾಡುವುದನ್ನು ಎಂದಾದರೂ ನೀವು ಗಮನವಿರಿಸಿ ನೋಡಿದ್ದೀರಾ ಅಥವಾ ಅವರ ಆಟದಲ್ಲಿ ಪಾಲುಗೊಂಡಿದ್ದೀರಾ? ಹೌದಾದರೆ ಈ ಕಥೆಯ ಹೂರಣ ನಿಮಗೆ ಬಹಳ ಚೆನ್ನಾಗಿ ಮನದಟ್ಟಾ ಗಬಹುದು.
ಗೌತಮ ಬುದ್ಧ ಒಮ್ಮೆ ದೀರ್ಘ ಯಾತ್ರೆಯ ಬಳಿಕ ತನ್ನ ಶಿಷ್ಯ ಆನಂದ ಮತ್ತು ಇತರರ ಜತೆಗೆ ಒಂದು ಹಳ್ಳಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ. ಹಳ್ಳಿಯ ಹತ್ತಿರಕ್ಕೆ ಸಾಗಿ, ಹೆಬ್ಟಾಗಿ ಲನ್ನು ದಾಟಿ ಒಳಪ್ರ ವೇಶಿಸುತ್ತಿರಬೇಕಾದರೆ ಮಕ್ಕಳ ಗುಂಪೊಂದು ಮರಳಿನಲ್ಲಿ ಆಟವಾಡು ವುದು ಕಾಣಿಸಿತು. ಬುದ್ಧ ಅಲ್ಲೇ ಅರಳಿ ಕಟ್ಟೆಯ ಮೇಲೆ ಕುಳಿತು ಮಕ್ಕಳಾಟವನ್ನು ಬಹಳ ಆಸಕ್ತಿ ವಹಿಸಿ ತದೇಕಚಿತ್ತನಾಗಿ ಗಮನಿಸಿದ. ಶಿಷ್ಯರೆ ಲ್ಲರೂ ಅಲ್ಲೇ ಸುತ್ತಮುತ್ತ ಕುಳಿತರು.
ಮಕ್ಕಳ ಆಟ ಬಹಳ ಮಜವಾಗಿ ಸಾಗಿತ್ತು. ಎಲ್ಲರೂ ಮರಳಿನಲ್ಲಿ ಮನೆ ಕಟ್ಟುವುದರಲ್ಲಿ ನಿಮಗ್ನರಾಗಿದ್ದರು. ಇಬ್ಬರು-ಮೂವರು ಪುಟಾಣಿಗಳು ಜತೆ ಸೇರಿದ್ದರು. ಪ್ರತೀ ತಂಡದ್ದೂ ಒಂದೊಂದು ಪ್ರತ್ಯೇಕ ಮರಳಿನ ಮನೆ.
ಆಟವಾಡುತ್ತಿದ್ದುದು ಸಣ್ಣ ಪ್ರದೇಶ ದಲ್ಲಿ, ಮಕ್ಕಳು ಹಲವರಿದ್ದರು. ಯಾರಾ ದರೂ ಇನ್ನೊಬ್ಬರ ಮರಳಿನ ಮನೆಗೆ ತೊಂದರೆ ಕೊಟ್ಟರೆ ಕೂಗಾಟ, ಚೀರಾಟ ನಡೆದೇ ಇತ್ತು.
ನಿಮಗೆ ಗೊತ್ತಲ್ಲ, ಮರಳಿನ ಮನೆ ಯನ್ನು ಕೆಡಿಸುವುದು ಬಹಳ ಸುಲಭ. ಒಂದು ಸಣ್ಣ ಕಲ್ಲು ಎಸೆದರೆ ಸಾಕು ಅಥವಾ ಹತ್ತಿರವೇ ನಿಂತು ಪಾದವನ್ನು ಬಲವಾಗಿ ನೆಲಕ್ಕೆ ಬಡಿದರೆ ಸಾಕು; ಮರಳಿನ ಮನೆ ಕುಸಿಯುತ್ತದೆ.
ಒಂದಿಬ್ಬರು ಮಕ್ಕಳು ಇನ್ನೊಂದು ತಂಡದ ಮರಳಿನ ಮನೆಯನ್ನು ಕೆಡವಿ ದರು. ಜಗಳವಾಯಿತು. ಇನ್ನೊಂದು ತಂಡದ ಮನೆ ಸಂಪೂರ್ಣವಾದಾಗ ಹರ್ಷೋದ್ಘಾರ ಕೇಳಿಬಂತು. ಬುದ್ಧ ಮೌನವಾಗಿ ಎಲ್ಲವನ್ನೂ ಗಮನಿಸು ತ್ತಲೇ ಇದ್ದ. ಅವನ ಪದ್ಮಸದೃಶ ಮುಖ ದಲ್ಲಿ ಮುಗುಳ್ನಗು ರಾರಾಜಿಸುತ್ತಿತ್ತು.
ಅಷ್ಟರಲ್ಲಿ ಸೂರ್ಯ ಮುಳುಗಿ ಕತ್ತಲು ಆವರಿಸಲಾರಂಭಿಸಿತು. ಹತ್ತಿ ರವೇ ಇದ್ದ ಹಳ್ಳಿಯ ಮನೆಗಳಿಂದ ಮಕ್ಕಳು ತಾಯಂದಿರ ಕೂಗು ಕೇಳಿಬಂತು, “ಬನ್ನಿರೋ, ಆಟ ಸಾಕು. ಕತ್ತಲಾಯಿತು. ಕೈಕಾಲು ತೊಳಕೊಂಡು ಬನ್ನಿ…’
ಎಲ್ಲ ಮಕ್ಕಳು ಆಟ ನಿಲ್ಲಿಸಿದರು. ಕೆಲವು ಮನೆಗಳು ಅರೆವಾಸಿ ಪೂರ್ಣಗೊಂಡಿದ್ದವು, ಇನ್ನು ಕೆಲವು ಸಂಪೂ ರ್ಣವಾಗಿದ್ದವು. . ಮಕ್ಕಳು ಅವುಗಳ ಮೇಲೆಯೇ ಥಕಥೈ ಕುಣಿದರು. ಕೆಲವು ಕ್ಷಣಗಳ ಹಿಂದೆ ಹಲವು ಮರಳಿನ ಮನೆಗಳಿದ್ದ ಜಾಗ ಈಗ ಮಟ್ಟಸ ವಾಗಿತ್ತು. ಸ್ವಲ್ಪ ಸಮಯ ಹಿಂದೆ ತಾವು ಕಟ್ಟಿದ ಮನೆಗಳನ್ನು ಯಾರಾದರೂ ಕೆಡಿಸಿದರೆ ಇದೇ ಮಕ್ಕಳು ಚೀರುತ್ತಿ ದ್ದರು. ಆದರೆ ಈಗ ಅವರೇ ಅವುಗ ಳನ್ನೆಲ್ಲ ಕೆಡವಿದರು. ಬಳಿಕ ಮಕ್ಕಳೆಲ್ಲ ತಾವು ಆಟವಾಡಿದ ಜಾಗದತ್ತ ಹಿಂದಿ ರುಗಿಯೂ ನೋಡದೆ ತಮ್ಮ ತಮ್ಮ ಮನೆಗಳತ್ತ ಧಾವಿಸಿದರು.
ಈಗ ಬುದ್ಧ ಮೌನ ಮುರಿದು ತನ್ನ ಶಿಷ್ಯರನ್ನು ಉದ್ದೇಶಿಸಿ ಹೇಳಿದ, “ನಮ್ಮ ಬದುಕು ಈ ಮಕ್ಕಳು ಆಡಿದ ಮರಳಿನಾಟಕ್ಕಿಂತ ಹೆಚ್ಚಿನದೇನಲ್ಲ…’
ಹೌದೋ ಅಲ್ಲವೋ, ಗಮನಿಸಿ ನೋಡಿ. ಹುಟ್ಟುತ್ತೇವೆ, ದೊಡ್ಡವರಾಗು ತ್ತೇವೆ. ಕಲಿಯುತ್ತೇವೆ. ಉದ್ಯೋಗ ಹಿಡಿಯುತ್ತೇವೆ. ಮಡದಿ, ಮಕ್ಕಳು, ಮನೆ, ಕಾರು, ಅಂತಸ್ತು ಒಂದೊಂದಾಗಿ ಒಂದೊಂದಾಗಿ ಕಟ್ಟಿಕೊಳ್ಳುತ್ತ ಹೋಗು ತ್ತೇವೆ. ಕೊನೆಗೊಂದು ದಿನ ಆಟ ನಡೆ ಯುತ್ತಲೇ ಇರುವಾಗ ಕರೆ ಬರುತ್ತದೆ. ಆಟವನ್ನು ಅಲ್ಲಿಯೇ ನಿಲ್ಲಿಸಿ ಹೋಗ ಬೇಕಾಗುತ್ತದೆ, ಹಿಂದಿರುಗಿಯೂ ನೋಡದೆ!
ಹಾಗೆಂದು ಆಟವಾಡುವ ಸಂಭ್ರಮ ವನ್ನು ತಪ್ಪಿಸಿಕೊಳ್ಳಬಾರದು. ಪ್ರತೀ ಕ್ಷಣದಲ್ಲಿಯೂ ಸಂಪೂರ್ಣವಾಗಿ ತೊಡಗಿಸಿಕೊಂಡು ಖುಷಿ ಪಡುತ್ತ ಚೆನ್ನಾಗಿ ಆಟವಾಡಬೇಕು.
-(ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.