ಇನ್ನು 8 ದಿನಗಳಲ್ಲಿ ಮರಳುಗಾರಿಕೆ ಸ್ಥಗಿತ
Team Udayavani, May 24, 2020, 10:21 AM IST
ಉಡುಪಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ಕಟ್ಟಡ ಕಾಮಗಾರಿ ಪ್ರಾರಂಭವಾಗಿದ್ದು, ಪ್ರಸ್ತುತ ಜಿಲ್ಲೆಯ ಇ-ಸ್ಯಾಂಡ್ ಬಜಾರ್‌ನಲ್ಲಿ ಬೇಡಿಕೆ ತಕ್ಕಂತೆ ಮರಳು ಲಭ್ಯವಾಗದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿ ನಿಂತು ಹೋಗುವ ಭೀತಿ ಎದುರಾಗಿದೆ.
ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ 22 ಕಡೆಗಳಲ್ಲಿ ಮರಳು ದಿಬ್ಬಗಳ ತೆರವಿಗೆ ಅವಕಾಶ ನೀಡಲಾಗಿದೆ. ಸುಮಾರು 80 ಮಂದಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ. ಅವರಲ್ಲಿ ಕೇವಲ 8 ಮಂದಿ ಮರಳು ತೆರವು ಕಾರ್ಯದಲ್ಲಿ ತೊಡಗಿದ್ದು, ಮೇ 8ರಿಂದ 24ರ ವರೆಗೆ ಸುಮಾರು 1,785 ಮೆ. ಟನ್ ಮರಳು ತೆಗೆದು ವಿತರಿಸಲಾಗಿದೆ.
ಕಾರ್ಮಿಕರ ಕೊರತೆ
ತಾತ್ಕಾಲಿಕ ಪರವಾನಿಗೆದಾರರಿಗೆ ಕಾರ್ಮಿಕರ ಕೊರತೆ ಎದುರಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರೆಲ್ಲರೂ ತವರಿಗೆ ತೆರಳಿರುವುದರಿಂದ 7 ದಕ್ಕೆಗಳಲ್ಲಿ ಮಾತ್ರ ಮರಳು ದಿಬ್ಬ ತೆರವು ಮಾಡಲಾಗುತ್ತಿದೆ. ಇದರಿಂದಾಗಿ ಜನರ ಬೇಡಿಕೆ ತಕ್ಕಂತೆ ಮರಳು ಪೂರೈಕೆಯಾಗುತ್ತಿಲ್ಲ. ಈ ಕಾರಣ ಇ-ಸ್ಯಾಂಡ್ ಬಜಾರ್‌ನಲ್ಲಿ ಮುಂದಿನ 10 ದಿನಗಳ ಬಳಿಕ ಮರಳು ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತದೆ.
4.33 ಲ. ಮೆ. ಟನ್ ಮರಳು ವಿತರಣೆ
2018-19ರಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ 1.12 ಲ. ಮೆ. ಟನ್ ಮತ್ತು ನಾನ್ ಸಿಆರ್‌ಝಡ್‌ನಲ್ಲಿ 9,830.78 ಮೆ. ಟನ್ ಸೇರಿದಂತೆ ಒಟ್ಟು 1.24 ಲ. ಮೆ. ಟನ್; 2019-20ರಲ್ಲಿ ಸಿಆರ್‌ಝಡ್‌ನಲ್ಲಿ 3.11 ಲ. ಮೆ. ಟನ್, ನಾನ್ ಸಿಆರ್‌ಝಡ್‌ನಲ್ಲಿ 1.71 ಲ. ಮೆ. ಟನ್ ಸೇರಿದಂತೆ ಒಟ್ಟು 4.33 ಲ. ಮೆ. ಟನ್ ಮರಳು ತೆಗೆಯಲಾಗಿದೆ.
ಜೂ.1ರಿಂದ ಮರಳುಗಾರಿಕೆ ಸ್ಥಗಿತ
ಮಳೆಗಾಲದಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವುದರಿಂದ ಕಾನೂನಿನ ಅನ್ವಯ ಜೂ. 1ರಿಂದ ಮರಳು ದಿಬ್ಬ ತೆರವು ಗೊಳಿಸುವ ಕಾರ್ಯ ಸ್ಥಗಿತಗೊಳ್ಳಲಿದೆ.
ಬೇಡಿಕೆ ಹೆಚ್ಚಿದೆ!
ಕಾರ್ಮಿಕರ ಕೊರತೆ ಇರುವ ಕಾರಣ ಕೃತಕ ಮರಳಿನ ಅಭಾವ ಎದುರಾಗಿದೆ. ಉಡುಪಿ -ಸ್ಯಾಂಡ್ ಬಜಾರ್‌ನಲ್ಲಿ ಮರಳಿಗೆ ಭಾರೀ ಪ್ರಮಾಣದ ಬೇಡಿಕೆ ಇದೆ. ಮುಟ್ಟುಗೋಲು ಹಾಕಲಾದ ಮರಳು ಸಂಗ್ರಹವಿದೆ. ಅಗತ್ಯವಿದ್ದರೆ ಕೋರ್ಟ್ ನಿಂದ ಅನುಮತಿ ಪಡೆದು ವಿತರಿಸಲಾಗುತ್ತದೆ ಎಂದು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.