80ಕ್ಕೂ ಅಧಿಕ ಅಪಾಯಕಾರಿ ಕಲ್ಲು ಕ್ವಾರಿ ಗುಂಡಿ! ಕ್ವಾರಿ ಮಾಲೀಕರ ವಿರುದ್ಧ ದೂರು
Team Udayavani, Nov 12, 2020, 3:51 PM IST
ಕುಷ್ಟಗಿ: ತಾಲೂಕಿನಲ್ಲಿ ಮೃತ್ಯುಕೂಪವಾಗಿರುವ ಕಲ್ಲು ಗಣಿಗಾರಿಕೆ ಕ್ವಾರಿ ಗುಂಡಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನಾತ್ಮಕವಾಗಿ ಮುಚ್ಚಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಕಳೆದ ನ. 6ರಂದು ಬಿಸನಾಳ ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ಕ್ವಾರಿ ಗುಂಡಿಗಳಲ್ಲಿ ಬಾಲಕ ಮಂಜುನಾಥ ಶರಣಪ್ಪ ವದೇಗೋಳ (7) ಮೃತಪಟ್ಟ ಬೆನ್ನಲ್ಲೇ ನ. 9ರಂದು ಕಲ್ಲುಗೋನಾಳ ಗ್ರಾಮದ ಕಲ್ಲು ಕ್ವಾರಿ ಹೊಂಡದಲ್ಲಿ ಬಾಲಕ ಶರಣಪ್ಪ ಸಿದ್ದಪ್ಪ ಕಮತರ ಕಾಲು ಜಾರಿ ಬಿದ್ದು ಜೀವ ಕಳೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸರ್ಕಲ್ ಪೊಲೀಸ್ ಇನ್ಸಪೆಕ್ಟರ್ ನಿಂಗಪ್ಪ ರುದ್ರಪ್ಪಗೋಳ ಅವರು, ಎಸ್‌ಪಿ ಟಿ. ಶ್ರೀಧರ
ಅವರ ಮಾರ್ಗದರ್ಶನದಲ್ಲಿ ಕ್ವಾರಿ ಗುಂಡಿಗಳನ್ನು ಮುಚ್ಚಿಸಲು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಸರ್ವೇ ಮೂಲಕ ಕುಷ್ಟಗಿ, ಹನುಮಸಾಗರ, ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 80ಕ್ಕೂ ಅಧಿಕ ಇಂತಹ ಅಪಾಯಕಾರಿ ಕ್ವಾರಿ ಗುಂಡಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಧಿಕವಾಗಿದೆ.
ಅಧಿಕೃತ, ಅನಧಿಕೃತ ಕ್ವಾರಿ ಹೊಂದಿದ ಜಮೀನು ಮಾಲೀಕರಿಗೆ 336 ಕಲಂ ಅನ್ವಯ ಪ್ರತ್ಯೇಕವಾಗಿ ನೋಟಿಸ್ ಜಾರಿ ಮಾಡಲಾಗಿದೆ. ತಮ್ಮ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಿದ ಜಮೀನುಗಳಲ್ಲಿ ನೀರು ನಿಂತಿರುವ ಹೊಂಡಗಳ ಸುತ್ತಲೂ ತಂತಿ ಬೇಲಿ
ಅಳವಡಿಸದ ಹಿನ್ನೆಲೆಯಲ್ಲಿ ಕುಷ್ಟಗಿ, ತಾವರಗೇರಾ ಹಾಗೂ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದರು.
ಇದನ್ನೂ ಓದಿ:ಮಹಿಳೆಯರ ಮೇಲಿನ ದೌರ್ಜನ್ಯ; ಸರ್ಕಾರದ ಮೌನ ಆತಂಕಕಾರಿ: ಪುಷ್ಪ ಅಮರನಾಥ್
ಬಿಸನಾಳ ಸಿಮಾದಲ್ಲಿ ಕ್ವಾರಿ ಗುಂಡಿಗಳಿಗೆ ಸಂಬಧಿಸಿದಂತೆ ಕ್ವಾರಿ ಮಾಲೀಕರಾದ ಹನುಮಂತಮ್ಮ ಪೊಲೀಸಪಾಟೀಲ ವಿರುದ್ಧ ಈಗಾಗಲೇ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಜಮೀನು ಮಾಲೀಕರು ಸೇರಿದಂತೆ 8 ಜನರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಕುಷ್ಟಗಿ, ತಾವರಗೇರಾ ಹಾಗೂ ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಗಾಗಲೇ 21 ಜನರಿಗೆ ನೋಟಿಸ್ ಜಾರಿ
ಮಾಡಲಾಗಿದೆ. ತಾಲೂಕಿನ ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೇಬಿನಕಟ್ಟಿ ಸೀಮಾದಲ್ಲಿ ಬೆಂಗಳೂರು ಮೂಲದ ವಿವೇಕ್, ಕೊಪ್ಪಳದ ಸಿ.ಬಿ. ಮಹಾಂತಯ್ಯಮಠ, ಕಡೂರಿನ ಶಿವಶಂಕರಗೌಡ ಪಾಟೀಲ, ಬಾಗಲಕೋಟೆ ಜಿಲ್ಲೆ ಇಲಕಲ್ಲ ಮೂಲದ ಶಾಂತಪ್ಪ ಗುರಂ, ಶಿವಶರಣಪ್ಪ ಆಲಮೇಲ್, ಸುಭಾಸ್ ಹರಿಹರ, ಮಲ್ಲಿಕಾರ್ಜುನ ಶೆಟ್ಟರ್, ಶರಣಪ್ಪ ಗುರಂ, ಮುರ್ತುಜಾಸಾಬ್ ಕರಡಿ, ಹಿರೇ ಓತಗೇರಿಯ ಲಕ್ಷ್ಮೀ ಪುತ್ರ ರೇವಡಿ ಎಂಬುವವರ ವಿರುದ್ಧ ದೂರು ದಾಖಲಿಸಲಾಗಿದೆ.
ಕುಷ್ಟಗಿ ತಾಲೂಕಿನ ಬಿಸನಾಳ, ಕಲಕೇರಿ, ಪರಸಾಪೂರ ಹಾಗೂ ಕ್ಯಾದಿಗುಪ್ಪ ಸೀಮಾದಲ್ಲಿ ಪರಸಾಪೂರ ಗೂಡುಸಾಬ್ ವೆಂಕಟಾಪೂರ, ಇಲಕಲ್ ಹನುಮಂತಮ್ಮ ಪೊಲೀಸಪಾಟೀಲ, ದೋಟಿಹಳದ ಲಕ್ಷ್ಮವ್ವ ಕೊಳ್ಳಿ ಕ್ಯಾದಿಗುಪ್ಪ ಮಲ್ಲಿಕಾರ್ಜುನ ಶೆಟ್ಟರ್, ಹನುಮಂತ ತಳವಾರ, ರಾಮರಾವ್ ದೇಸಾಯಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತಾವರಗೇರಾ ಪೊಲೀಸ್ ಠಾಣೆ
ವ್ಯಾಪ್ತಿಯಲ್ಲಿ ಕಳಮಳ್ಳಿ ರೇಖಪ್ಪ ರಾಠೊಡ್, ಇಲಕಲ್ ರಿಯಾನಭಾನು ಉಸ್ಮಾನಗಣಿ ವಿರುದ್ಧ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.