ಸ್ವಪ್ರಯತ್ನದ ಹಾದಿಯಲ್ಲಿ ಸಾಗಿ ಬೀಗಿದ ಸಂಚಾರಿ
Team Udayavani, Jun 15, 2021, 7:05 AM IST
“ನಿಂಗೆ ಟ್ಯಾಲೆಂಟ್ ಇದೆ, ನಾಟಕದಲ್ಲಿ ನಟಿಸು ಹೋಗು.’
-ಗೆಳೆಯ ಹೇಳಿದ ಮಾತನ್ನು ಕೇಳಿಕೊಂಡು ಖುಷಿಯಾಗಿ ಹುಡುಗ ಅದಮ್ಯ ನಾಟಕ ತಂಡಕ್ಕೆ ಸೇರಿಕೊಂಡ. ಅವತ್ತೂಂದಿನ ಎಲ್ಲರೂ ಸುತ್ತಲೂ ಕೂತಿದ್ದರು. ಡೈರೆಕುó ಸ್ಕ್ರಿಪ್ಟ್ ಹಿಡಿದುಕೊಂಡು ಬಂದರು. ಒಬ್ಬೊಬ್ಬರ ಕೈಗೂ ಸ್ಕ್ರಿಪ್ಟ್ ಕೊಟ್ಟು ಓದಿಸಿದರು. ಹುಡ್ಗನ ಭಾಷೆ ಚೆಂದ ಇತ್ತು. ಧ್ವನಿ ಸೆಳೆಯುವಂತಿತ್ತು. ಡೈರೆಕ್ಟ್ರಿಗೆ ಖುಷಿಯಾಯಿತು. ಅದೇ ಉತ್ಸಾಹದಲ್ಲಿ “ನೀನೇ ನಾಟಕದ ಪ್ರಮುಖ ಪಾತ್ರಧಾರಿ’ ಎಂದರು.
ಹುಡ್ಗನಿಗೆ ಜಗತ್ತು ಗೆದ್ದಷ್ಟು ಖುಷಿ. ಹ್ಯಾಪ್ಪಿಯಾಗಿ ಮನೆಗೆ ಹೋದ. ಮರುದಿನ ಮತ್ತದೇ ಥರ. ಎಲ್ಲರೂ ಸುತ್ತ ಕೂತಿದ್ದಾರೆ. ಡೈರೆಕುó ಸ್ವಲ್ಪ ಕೆಟ್ಟ ಮೂಡಲ್ಲಿದ್ದರು. ಹುಡ್ಗನನ್ನು ಕರೆದು ಮಧ್ಯ ಹೋಗಿ ನಟಿಸು ಎಂದರು. ಇವನಿಗೆ ಏನು ಮಾಡಬೇಕು ಎಂದು ಗೊತ್ತಿರಲಿಲ್ಲ. ಆದರೂ ಎದ್ದು ಹೋಗಿ ತನಗನ್ನಿಸಿದ್ದನ್ನೆಲ್ಲಾ ಮಾಡುತ್ತಿದ್ದಂತೆಯೇ ನಿರ್ದೇಶಕರ ಮಾತು ಆತನನ್ನು ತಡೆಯಿತು. “ನೀನೊಬ್ಬ ನಟನೇ ಅಲ್ಲ. ನಿಂಗೆ ನಟನಾಗುವ ಯೋಗ್ಯತೆಯೇ ಇಲ್ಲ.’ ಬೈದ್ರು ಬೈದ್ರು ಸುಮಾರು ಹದಿನೈದು ನಿಮಿಷಗಳ ಕಾಲ ಬೈದೇಬೈದರು. ಹುಡುಗ ನಿಂತೇ ಇದ್ದ. ಆದಷ್ಟು ತಡೆದುಕೊಂಡಿದ್ದ. ಕೊನೆಗೂ ಅವನ ನಿಯಂತ್ರಣ ಮೀರಿ ಕಣ್ಣಲ್ಲಿ ನೀರು ಬಂದಿತ್ತು. ಕೂಡಲೇ ಗೆಳೆಯ ಓಡಿಬಂದು. ಆತನನ್ನು ಕರೆದುಕೊಂಡು ಹೋದ. ನಾಲ್ಕು ದಿನ ಮೊಬೈಲ್ ಸ್ವಿಚ್ ಆಫ್. ನಿರ್ದೇಶಕರು ಗಾಬರಿಯಾದರು. ಅವನನ್ನು ಹುಡುಕಿಸಿ ಮತ್ತೂಂದು ಪಾತ್ರ ಕೊಟ್ಟರು. ಹಠ ಕಟ್ಟಿ ಶ್ರಮ ಪಟ್ಟು ನಟಿಸಿ ಅದೇ ಡೈರೆಕ್ಟರ್ ಕೈಯಲ್ಲಿ “ನೀನಿಲ್ಲದಿದ್ದರೆ ನಾಟಕ ಬ್ಯಾಲೆನ್ಸ್ ಮಾಡಲು ಆಗ್ತಾ ಇರಲಿಲ್ಲ ಕಣೋ’ ಎಂದು ಹೊಗಳಿಸಿಕೊಂಡು ಅನಂತರದ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಸ್ವೀಕರಿಸುವ ಮಟ್ಟಕ್ಕೆ ಬೆಳೆದ ನಟ ಸಂಚಾರಿ. ಆದರೆ ಇವತ್ತು ಅಂತಹ ಅದ್ಭುತ ಪ್ರತಿಭೆ ನಮ್ಮನ್ನು ಅಗಲಿದೆ.
ನಾಟಕದಿಂದ ಬಣ್ಣದ ಪಯಣ
ಕೆಶ್ರೀ ಅವರ “ಸಾವು ಧ್ಯೇಯಕ್ಕಿಲ್ಲ’ ನಾಟಕ. ಗೆಳೆಯರೊಬ್ಬರು ಹೇಳಿದ್ದಕ್ಕೆ ವಿಜಯ್ ಅಲ್ಲಿಗೆ ಹೋದರು. ಅಲ್ಲೊಂದು ಸಣ್ಣ ಪಾತ್ರ ಸಿಕ್ಕಿತು. ಡೈಲಾಗ್ ಇಲ್ಲ. ಬರೀ ಸ್ಟೇಜಲ್ಲಿ ಹೋಗಿ ನಿಲ್ಲಬೇಕು. ನಿಂತಿದ್ದು ಬರಬೇಕು. ಅಷ್ಟೇ. ಮಾತಿಲ್ಲ ಕತೆಯಿಲ್ಲ ಬರೀ ರೋಮಾಂಚನ. ಆ ಪಾತ್ರಕ್ಕಾಗಿ ವಿಜಯ್ ಪ್ರತಿದಿನ ಎದ್ದು ಮೂರು ನಾಲ್ಕು ತಿಂಗಳುಗಳ ಕಾಲ ಅಲ್ಲಿಗೆ ಪ್ರಾಕ್ಟೀಸಿಗೆ ಹೋಗುತ್ತಿದ್ದರು. ಅದನ್ನೇ ಮಾಡ್ತಾ ಮಾಡ್ತಾ ಗಟ್ಟಿಯಾದರು. ಸಣ್ಣ ಪಾತ್ರಕ್ಕೂ ಅವರು ಕೊಟ್ಟ ಮಹತ್ವ ನೋಡಿ ನಿರ್ದೇಶಕರು ಮೆಚ್ಚಿಕೊಳ್ಳುವ ಮಟ್ಟಕೆ ವಿಜಯ್ ಡೆಡಿ ಕೇ ಟೆಡ್ ಆಗಿ ದ್ದರು. ಬೆಳಗ್ಗೆ 5 ಗಂಟೆಗೆ ಎದ್ದು ನಾಟಕ ಪ್ರಾಕ್ಟೀಸ್ ಮಾಡೋದು. ಅಲ್ಲಿಂದ ಕಾಲೇಜು. ಕಾಲೇಜು ಬಿಟ್ಟು ಸಂಜೆ ಕರ್ನಾಟಕ ಸಂಗೀತ ಕಲಿಕೆ. ಅದು ಮುಗಿಸಿ ಮತ್ತೂಂದು ನಾಟಕ ಪ್ರಾಕ್ಟೀಸ್. ಅದರ ಅನಂತರ 9 ಗಂಟೆಗೆ ಹಿಂದೂಸ್ಥಾನಿ ಸಂಗೀತ ಕಲಿಕೆ. ಹೀಗೆ ಒಂದು ಕ್ಷಣವೂ ಪುರ್ಸೊತ್ತಿರುತ್ತಿರಲಿಲ್ಲ. ಅದರ ಫಲವಾಗಿಯೇ ಮಂಗಳಾ ಅವರ “ಸಂಚಾರಿ’ ತಂಡದ “ಅರಹಂತ’ ನಾಟಕದಲ್ಲಿ ಪ್ರಮುಖ ಪಾತ್ರ ಸಿಕ್ಕಿತು. ಆಮೇಲೆ ವಿಜಯ್ ಕೆಲಸ ಬಿಟ್ಟರು. ಅದೇ ಹೊತ್ತಿಗೆ ಅವರಿಗೆ ಟಿವಿ ಶೋದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು.
ಪುಟ್ಟ ಹಳ್ಳಿಯ ಕನಸುಗಾರ
ಸಂಚಾರಿ ವಿಜ ಯ್ ಹುಟ್ಟಿದ್ದು ಕಡೂರು ತಾಲೂಕಿನ ಪಂಚನಳ್ಳಿಯಲ್ಲಿ. ಅಪ್ಪ ವಿಲೇಜ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅಮ್ಮ ಇಡೀ ಊರಿಗೆ ಊರೇ ಇಷ್ಟಪಡುವ ದಾದಿಯಾಗಿದ್ದರು. ಅಪ್ಪ ಬಹುಮುಖ ಪ್ರತಿಭೆ. ನಟಿಸುವುದು, ಸಂಗೀತೋಪಕರಣಗಳನ್ನು ನುಡಿಸುವುದೆಂದರೆ ಅವರಿಗೆ ಬಹಳ ಇಷ್ಟ. ಅಮ್ಮ ಹಾಡುಗಾರ್ತಿ. ಅಪ್ಪ ಇನ್‌ಸ್ಟ್ರೆಮೆಂಟ್ ನುಡಿಸುತ್ತಿದ್ದರೆ ಅಮ್ಮ ಚೆಂದಕ್ಕೆ ಹಾಡುತ್ತಿದ್ದರು. ಸಂಚಾರಿ ವಿಜಯ್‌ಗೆ ಮೊದಲ ಪಾಠ ಸಿಕ್ಕಿದ್ದು ಇವರಿಂದಾನೇ. ಹಾಗಾಗಿ ಮನೆ ಯಿಂದಲೇ ಸಿನೆಮಾ ಸಕ್ತಿ ಬೆಳೆ ಸಿ ಕೊಂಡು ಬಂದಿ ದ್ದ ನಟ ವಿಜ ಯ್. ಪಿಯುಸಿ ಓದುತ್ತಿದ್ದಾಗ ಅಪ್ಪ ಮತ್ತು ಅಮ್ಮ ಇಬ್ಬರೂ ವಿಜಯ್‌ನನ್ನು ಅಗಲಿದರು. ಒಂದೆಡೆ ಮಾನಸಿಕ ಆಘಾತ. ಇನ್ನೊಂದೆಡೆ ಆರ್ಥಿಕ ಸಂಕಷ್ಟ. ವಿಜಯ್ ಬೆಂಗಳೂರು ಸೇರಿಕೊಂಡು, ಓದಿಗೆ ನಮಸ್ಕಾರ ಹೇಳಿ ಕೆಲಸ ಮಾಡತೊಡಗಿದ ರು. ಸ್ವಲ್ಪ ತಿಂಗಳಾದ ಅನಂತರ ಮತ್ತೆ ಓದುವಾಸೆಯಾಯಿತು. ತಿಪಟೂರಿಗೆ ಹೋಗಿ ಅಲ್ಲಿ ಪಿಯುಸಿ ಓದಿ, ಸಿಇಟಿ ಬರೆದು ಎಂಜಿನಿಯರಿಂಗ್ ಕಲಿಯಲು ಬೆಂಗಳೂರಿನ ಬಿಎಂಎಸ್ ಕಾಲೇಜು ಸೇರಿಕೊಂಡರು. ತುಂಬಾ ನಾಚಿಕೆ ಸ್ವಭಾವದ ಹುಡುಗ. ಯಾರ ತಂಟೆಗೂ ಹೋಗುತ್ತಿರಲಿಲ್ಲ. ಅದೇ ಕಾರಣದಿಂದ ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಬಿಎಂಎಸ್ ಕಾಲೇಜಿಗೆ ಹೋದಾಗ ಅಲ್ಲಿನ ಮೇಷ್ಟ್ರು ಕೇಳಿದರಂತೆ ನೀನು ಇದೇ ಕಾಲೇಜಿನಲ್ಲಿ ಓದಿದ್ದೇನಪ್ಪಾ ಅಂತ ಕೇಳಿ ದ್ದ ನ್ನು ವಿಜಯ್ ಸಂದ ರ್ಶ ನ ದಲ್ಲಿ ನೆನ ಪಿ ಸಿ ಕೊಂಡಿ ದ್ದರು.
ಸಣ್ಣ ಪುಟ್ಟ ಪಾತ್ರದಿಂದ ನಾಯಕನತ್ತ
ವಿಜಯ್ ಪ್ರತಿಭಾವಂತ ನಿಜ. ಆದರೆ ಸಿನೆಮಾದಲ್ಲಿ ಅವರ ಹಾದಿ ಸುಗಮವಾಗಿರಲಿಲ್ಲ. ಸಾಕಷ್ಟು ಶ್ರಮಪಟ್ಟುಕೊಂಡೇ ಮೇಲೆ ಬಂದವರು. ಸಿನೆಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡು ಅನಂತರ ಹೀರೋ ಮಟ್ಟಕ್ಕೆ ಬೆಳೆದವರು ವಿಜಯ್. ಅವರ ಮೊದಲ ಸಿನೆಮಾ “ರಂಗಪ್ಪ ಹೋಗಿºಟ್ನಾ’. ಎರಡನೇ ಸಿನೆಮಾ “ದಾಸವಾಳ’. “ದಾಸವಾಳ’ ಸಿನೆಮಾದಲ್ಲಿ ವಿಜಯ್ ನಟನೆ ನೋಡಿ ಬಹಳಷ್ಟು ಜನ ಅಚ್ಚರಿಗೊಂಡಿದ್ದರು. ಈ ಹುಡುಗನಿಗೆ ಟ್ಯಾಲೆಂಟ್ ಇದೆ ಅಂದುಕೊಂಡಿದ್ದರು. ಆದರೆ ವಿಜಯ್‌ಗೆ ಜಾಸ್ತಿ ಅವಕಾಶ ಸಿಕ್ಕಿರಲಿಲ್ಲ. ಬಹಳಷ್ಟು ಜನರ ಹತ್ತಿರ ಇವರೇ ಹೋಗಿ ಅವಕಾಶ ಕೇಳಿದ್ದೂ ಇದೆ. ಊಹೂಂ ಕಷ್ಟ ಪಡೋದು ತಪ್ಪಿರಲಿಲ್ಲ. ಅದೇ ಹೊತ್ತಿಗೆ ಪ್ರಕಾಶ್ ರೈ ಸಿನೆಮಾ “ಒಗ್ಗರಣೆ’ ಬಂತು. ಅದರಲ್ಲಿ ಮಾಡಿದ ಸಣ್ಣದೊಂದು ಪಾತ್ರ ಬಹುತೇಕರ ಗಮನ ಸೆಳೆಯಿತು. ಏನು ಮಾಡಿದರೇನು ವಿಜಯ್ ಕಷ್ಟ ತಪ್ಪಲಿಲ್ಲ. ಮಂಸೋರೆ ನಿರ್ದೇಶನದ “ಹರಿವು’ ಸಿನೆಮಾಗೆ ಬಹಳ ಶ್ರಮಿಸಿದರು. ತುಂಬಾ ದಿನದ ಅನಂತರ ಬಿ.ಎಸ್ ಲಿಂಗದೇವರು ಸಿನೆಮಾ “ನಾನು ಅವನಲ್ಲ ಅವಳು’ ಸಿನೆಮಾದಲ್ಲಿ ಟ್ರಾನ್ಸ್ ಜೆಂಡರ್ ಪಾತ್ರ ಸಿಕ್ಕಿತು. ಶ್ರಮ ಸಾರ್ಥಕವಾಯ್ತು. ಶ್ರೇಷ್ಠ ನಟ ಪ್ರಶಸ್ತಿ ಮುಡಿಗೇರಿತು.
ಹಮ್ಮು ಬಿಮ್ಮು ಇಲ್ಲದ ನಟ
ಸಾಮಾನ್ಯವಾಗಿ ಸಿನೆಮಾ ನಟರು ತಮ್ಮದೇ ಆದ ಹಮ್ಮು ಬಿಮ್ಮು ಬೆಳೆಸಿ ಕೊಂಡಿರುತ್ತಾರೆ ಅನ್ನೋದು ಲೋಕರೂಢಿ ಅಭಿಪ್ರಾಯ. ಆದರೆ ಸಂಚಾರಿ ವಿಜಯ್ ಮಾತ್ರ ಈ ಮಾತಿಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟನಾದರೂ ವಿಜಯ್ ಎಲ್ಲೂ ಆ ಹಮ್ಮು ಬಿಮ್ಮು ಯಾವುದನ್ನೂ ಪ್ರದರ್ಶಿಸದ ನಟ. ಸಿನೆಮಾ ಚಿತ್ರೀಕರಣವಿರಲಿ, ಪ್ರಚಾರ ಕಾರ್ಯಗಳಾಗಿರಲಿ, ಪತ್ರಿಕಾಗೋಷ್ಠಿಗ ಳಾಗಲಿ ಸಾಮಾನ್ಯ ವ್ಯಕ್ತಿಯಂತೆ ಅಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದ ಬಳಿಕ ಅವರು ಅಭಿನಯಿಸಿದ ಸಿನೆಮಾವೊಂದರ ಪತ್ರಿಕಾ ಗೋಷ್ಠಿ ಗಾಂಧಿನಗರದ ಹೊಟೇಲ್‌ವೊಂದರಲ್ಲಿ (ಗ್ರೀನ್‌ಹೌಸ್) ನಡೆಯುತ್ತಿತ್ತು. ಪತ್ರಕರ್ತರು ಬರುವ ಮೊದಲೇ ಅಲ್ಲಿಗೆ ಆಗಮಿಸಿ ಪತ್ರಕರ್ತರಿಗಾಗಿ ಕಾದು ಕುಳಿತಿದ್ದ ವಿಜಯ್, ಪತ್ರಿಕಾಗೋಷ್ಠಿ ಮುಗಿದ ಬಳಿಕ ಆಟೋರಿಕ್ಷಾ ಏರಿದರು. ಅಲ್ಲಿಯೇ ಇದ್ದ ಪತ್ರಕರ್ತರೊಬ್ಬರು, “ಏನ್ ಸಾರ್ ನೀವು ನ್ಯಾಶನಲ್ ಆವಾರ್ಡ್ ಪಡೆದ ಆ್ಯಕ್ಟರ್. ಪ್ರೊಡ್ನೂಸರ್‌ಗೆ ಹೇಳಿದ್ರೆ ಕಾರೇ ಕಳಿಸ್ತಾರೆ. ಅಂಥದ್ರಲ್ಲಿ ನೀವ್ಯಾಕೆ ಆಟೋದಲ್ಲಿ ಹೋಗ್ತಿàರಿ?’ ಎಂದು ಪ್ರಶ್ನಿಸಿದರು. ಅದಕ್ಕೆ ಸಂಚಾರಿ ವಿಜಯ್, “ಈಗಾದ್ರೂ ಪರವಾಗಿಲ್ಲ ಸಾರ್, ಒಂದು ಕಾಲದಲ್ಲಿ ಗಾಂಧಿನಗರಕ್ಕೆ ಬಸ್ಸಿನಲ್ಲಿ ಬರೋದಕ್ಕೂ ಹಿಂದೆ-ಮುಂದೆ ನೋಡ್ಬೇಕಿತ್ತು. ಈಗ ಆಟೋದಲ್ಲಾದ್ರೂ ಬರ್ತಿದ್ದೀನಿ. ನನಗೆ ಇದೆಲ್ಲ ಅಭ್ಯಾಸವಾಗಿದೆ. ನನಗೆ ಆಟೋದಲ್ಲಿ ಹೋಗೋದೂ ಖುಷಿ ಕೊಡುತ್ತೆ’ ಎಂದು ಅಲ್ಲಿಂದ ಹೊರಟರು.
ಕಂಟೆಂಟ್ ಸಿನೆಮಾ ಗಳೇ ಮೊದಲ ಆಯ್ಕೆ
ಸಂಚಾರಿ ವಿಜಯ್ ಕಂಟೆಂಟ್ ಸಿನೆಮಾಗಳ ನಟ ಎಂದೇ ಖ್ಯಾತರಾಗಿದ್ದವರು. ಅದಕ್ಕೆ ಕಾರಣ ಕೇವಲ ಅವರಿಗೆ ಬಂದ ರಾಷ್ಟ್ರ ಪ್ರಶಸ್ತಿಯಲ್ಲ. ಬದಲಾಗಿ ವಿಜಯ್ ಅವರ ಮನಸ್ಸು. ವಿಜಯ್ ಅವರಿಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನೆಮಾಗಳಿಗಿಂತ ಗಟ್ಟಿ ಕಥಾ ಹಂದರವಿರುವ, ಮನಸ್ಸನ್ನು ಕಾಡುವ ಸಿನೆಮಾಗಳನ್ನು ಮಾಡಬೇಕೆಂಬ ತುಡಿತ ಇತ್ತು. ಅದೇ ಕಾರಣದಿಂದ ವಿಜಯ್ ಅಂತಹ ಸಿನೆಮಾಗಳನ್ನೇ ಆಯ್ಕೆ ಮಾಡಿಕೊಳ್ಳತೊಡಗಿದರು. ಕಂಟೆಂಟ್ ಸಿನೆಮಾಗಳ ನಿರ್ದೇಶಕರ ಆಯ್ಕೆ ಕೂಡ ವಿಜಯ್ ಅವರಾಗಿದ್ದರು. ಅದಕ್ಕೆ ಕಾರಣ ಪಾತ್ರದ ಆಳಕ್ಕೆ ಇಳಿದು ನಟಿಸುವ ನಟ ಬೇಕಿತ್ತು. ಪಾತ್ರವನ್ನು ಪ್ರೀತಿಸುವ ಕಲಾವಿದನ ಅಗತ್ಯವಿತ್ತು. ಆ ಎಲ್ಲ ಗುಣಗಳು ಸಂಚಾರಿ ವಿಜಯ್ ಅವರಲ್ಲಿತ್ತು. ಅದೇ ಕಾರಣದಿಂದ ವಿಜಯ್ ಅವರ ಸಿನೆಮಾ ಪಟ್ಟಿಯಲ್ಲಿ ಸಾಕಷ್ಟು ಕಂಟೆಂಟ್ ಸಿನೆಮಾಗಳು ಸಿಗುತ್ತವೆ.
“ಹರಿವು’, “ನಾನು ಅವ ನಲ್ಲ, ಅವಳು’, “ಕೃಷ್ಣ ತುಳಸಿ’, “6ನೇ ಮೈಲಿ’, “ನಾತಿಚರಾಮಿ’, “ಆಡುವ ಗೊಂಬೆ’, “ಆ್ಯಕ್ಟ್ 1978′ ಹೀಗೆ ಅನೇಕ ಸಿನೆಮಾಗಳು ಸಿಗುತ್ತವೆ.
ಸ್ಯಾಂಡಲ್ ವುಡ್‌ಗೆ ಜೂನ್ ಶಾಕ್
ಕನ್ನಡ ಚಿತ್ರರಂಗಕ್ಕೆ ಇತ್ತೀಚಿನ ವರ್ಷಗಳಲ್ಲಿ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಅರಳಬೇಕಾದ ಪ್ರತಿಭೆಗಳು ಕಣ್ಣ ಮುಂದೆಯೇ ಬಾಡಿ ಹೋಗುತ್ತಿವೆ. 2020ರ ಜೂನ್‌ನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗಕ್ಕೆ 2021 ಜೂನ್‌ಗೆ ಮತ್ತೂಬ್ಬ ಪ್ರತಿಭಾವಂತ ನಟ ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡ ದುಃಖ. ಹೌದು, 2020 ಜೂನ್ 7 ರಂದು ಚಿರಂಜೀವಿ ಸರ್ಜಾ ನಿಧನದ ಸುದ್ದಿ ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಡಿಯಿತು. ಈ ವರ್ಷ (ಜೂನ್ 14) ಸಂಚಾರಿ ವಿಜಯ್ ನಿಧನ ಚಿತ್ರರಂಗವನ್ನು ಕಂಗೆಡಿಸಿದೆ.
ಸಂಚಾರಿ ವಿಜಯ್ ಅಂತಿಮ ಸಂದರ್ಶನ
ಇತ್ತೀಚೆಗೆ (ಜೂನ್ 11) “ಉದಯವಾಣಿ’ ನಡೆಸಿದ ಆನ್‌ಲೈನ್ ಸಂವಾದದಲ್ಲಿ ಭಾಗವಹಿಸಿದ್ದ ನಟ ಸಂಚಾರಿ ವಿಜಯ್, ಲಾಕ್‌ಡೌನ್ ಅನುಭವ, ತಮ್ಮ ಸಿನೆಮಾಗಳ ತಯಾರಿ, ಭವಿಷ್ಯದ ಯೋಚನೆಗಳು ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.