ಸ್ಯಾಂಡಲ್‌ವುಡ್‌ಗೆ ಮತ್ತೂರ್ವ ನಿರ್ದೇಶಕಿ
Team Udayavani, Jan 9, 2021, 11:33 AM IST
ಸ್ಯಾಂಡಲ್‌ವುಡ್‌ಗೆ ಮತ್ತೂರ್ವ ನಿರ್ದೇಶಕಿ ಸ್ಯಾಂಡಲ್‌ವುಡ್‌ನಲ್ಲಿ ಮಹಿಳಾ ನಿರ್ದೇಶಕರ ಸಂಖ್ಯೆ ಕಡಿಮೆಯಿದ್ದರೂ, ಅದರಲ್ಲಿ
ಅನೇಕ ನಿರ್ದೇಶಕಿಯರು ತಮ್ಮ ವಿಭಿನ್ನ ಚಿತ್ರಗಳ ಮೂಲಕವೇ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮಹಿಳಾ ನಿರ್ದೇಶಕರ ಸಾಲಿಗೆ ಈ ಬಾರಿ ಮತ್ತೂಂದು ಹೆಸರು ಸೇರ್ಪಡೆಯಾಗುತ್ತಿದೆ. ಆ ಹೆಸರು ವಿಸ್ಮಯಾ ಗೌಡ ಅವರದ್ದು. ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ, ಜೊತೆಗೆ ಮೋಟಿವೇಷನಲ್ ಸ್ಪೀಕರ್ ಆಗಿ ಗುರುತಿಸಿಕೊಂಡಿರುವ ವಿಸ್ಮಯಾ ಗೌಡ, ಈಗ ತಮ್ಮದೇ ಕಥೆಯೊಂದನ್ನು ನಿರ್ದೇಶಿಸಿ ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ.
ಈ ಬಗ್ಗೆ ಮಾತನಾಡುವ ವಿಸ್ಮಯಾ ಗೌಡ, “ಇದೊಂದು ಕ್ಯೂಟ್ ರೊಮ್ಯಾಂಟಿಕ್ ಲವ್‌ಸ್ಟೋರಿ ಸಿನಿಮಾ. ಕಳೆದ ಎರಡು-ಮೂರು ವರ್ಷದಿಂದ ಈ ಕಥೆಗೆಯ ಮೇಲೆ ವರ್ಕ್ ಮಾಡಿ ಸ್ಕ್ರಿಪ್ಟ್ ಮಾಡಿದ್ದೇನೆ. ಇಲ್ಲಿಯವರೆಗೆ ಕನ್ನಡ ಸಿನಿಮಾಗಳಲ್ಲಿ ಅನೇಕ ಕ್ಯೂಟ್ ಜೋಡಿಗಳನ್ನು ಸ್ಕ್ರೀನ್ ಮೇಲೆ ನೋಡಿದ್ದೀರಿ. ನಮ್ಮ ಸಿನಿಮಾದಲ್ಲೂ ಅಂಥದ್ದೇ ಕ್ಯೂಟ್ ಜೋಡಿಗಳನ್ನು ನೋಡಬಹುದು. ಸದ್ಯ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಟೈಟಲ್ ಕೂಡ ಫಿಕ್ಸ್ ಆಗಿದೆ. ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ ಆಗಿರುವುದರಿಂದ, ಇದೇ ಜ. 14ಕ್ಕೆ ವ್ಯಾಲೆಂಟೈನ್ಸ್ ಡೇ ಯಂದು ಸಿನಿಮಾ ಟೈಟಲ್ ಅನೌನ್ಸ್ ಮಾಡಲಿದ್ದೇವೆ. ಇದೇ ತಿಂಗಳ ಕೊನೆಯೊಳಗೆ ಸಿನಿಮಾ ಸೆಟ್ಟೇರಿಸುವ ಪ್ಲಾನ್‌ನಲ್ಲಿದ್ದೇವೆ’ ಎನ್ನುತ್ತಾರೆ.
ಇದನ್ನೂ ಓದಿ:ಈ ವರ್ಷವೂ ಬಜೆಟ್ ನಲ್ಲಿ 40- 50 ಸಾವಿರ ಕೋಟಿ ಖೋತಾ : ಸಿಎಂ ಯಡಿಯೂರಪ್ಪ
ಇನ್ನು ವಿಸ್ಮಯಾ ಗೌಡ ಅವರ ಕಥೆಯಲ್ಲಿ “ಬಿಗ್‌ಬಾಸ್’ ಸ್ಪರ್ಧಿ ಕಂ ಡ್ಯಾನ್ಸರ್ ಕಿಶನ್ ಬಿಳಗಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿ ದ್ದಾರೆ. ಇಬ್ಬರು ನಾಯಕರಿರುವ ಈ ಚಿತ್ರದಲ್ಲಿ ಪ್ರವೀಣ್ ಎಂಬ ಮತ್ತೋರ್ವ ನಟ ಕೂಡ ತೆರೆಮೇಲೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರೂ ನಾಯಕ ನಟರಿಗೂ ಬಿಗ್ ಸ್ಕ್ರೀನ್ ಮೇಲೆ ಇದು ಮೊದಲ ಪ್ರಯತ್ನ. ತಮ್ಮ
ಹೆಸರನ್ನು ಸಾತ್ವಿಕಾ ಎಂದು ಬದಲಾಯಿಸಿ ಕೊಂಡಿರುವ, ನಿರ್ದೇಶಕ ಓಂ ಪ್ರಕಾಶ್ ರಾವ್ ಪುತ್ರಿ ಶ್ರಾವ್ಯಾ ರಾವ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2 ವರ್ಷದಿಂದ ಸಿನಿಮಾಗಳಿಂದ ಕೊಂಚ ಗ್ಯಾಪ್ ತೆಗೆದು ಕೊಂಡಿದ್ದ ಸಾತ್ವಿಕಾ ಉರೂಫ್ ಶ್ರಾವ್ಯಾ ರಾವ್ ಈ ಚಿತ್ರದ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ.
“ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳು ಫೈನಲ್ ಹಂತದಲ್ಲಿದ್ದು, ಕಲಾವಿದರಿಗೆ ವರ್ಕ್‌ಶಾಪ್ ಮಾಡುತ್ತಿದ್ದೇವೆ. ಮುಹೂರ್ತವಾಗುತ್ತಿದ್ದಂತೆ, ಈ ಸಿನಿಮಾದ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿಕೊಂಡಿದ್ದೇವೆ. ಕೂಡಗು, ಮೈಸೂರು,
ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಿದ್ದೇವೆ. ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಕೂಡ ನಾನೇ ವಹಿಸಿಕೊಂಡಿದ್ದೇನೆ. ಚಿತ್ರಕ್ಕೆ ಮಧುಸೂದನ್ ಛಾಯಾಗ್ರಹಣವಿದೆ. ಉಳಿದಂತೆ ಸಿನಿಮಾದ ಇತರ ಕಲಾವಿದರು, ತಂತ್ರಜ್ಞರ ಹೆಸರನ್ನು ಹಂತಹಂತವಾಗಿ ತಿಳಿಸುತ್ತೇವೆ’ ಎಂದು ತಮ್ಮ ಹೊಸಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ನಿರ್ದೇಶಕಿ ವಿಸ್ಮಯಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
MUST WATCH
ಹೊಸ ಸೇರ್ಪಡೆ
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.