ಒಸ್ಟ್ರಾವಾ ಓಪನ್ ಟೆನಿಸ್:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ
Team Udayavani, Sep 26, 2021, 11:19 PM IST
ಒಸ್ಟ್ರಾವಾ (ಜೆಕ್ ಗಣರಾಜ್ಯ): ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಪ್ರಸಕ್ತ ಋತುವಿನ ಮೊದಲ ಟೆನಿಸ್ ಪ್ರಶಸ್ತಿಯನ್ನೆತ್ತಿ ಸಂಭ್ರಮಿಸಿದ್ದಾರೆ. ಚೀನದ ಶುಯಿ ಜಾಂಗ್ ಜತೆಗೂಡಿದ ಅವರು “ಒಸ್ಟ್ರಾವಾ ಓಪನ್’ ವನಿತಾ ಡಬಲ್ಸ್ ಟೆನಿಸ್ ಪ್ರಶಸ್ತಿ ಗೆದ್ದರು.
ರವಿವಾರ ನಡೆದ ಫೈನಲ್‌ನಲ್ಲಿ ಸಾನಿಯಾ-ಶುಯಿ ಅಮೆರಿಕದ ಕ್ಯಾಥಿನ್ ಕ್ರಿಸ್ಟಿಯಾನ್-ನ್ಯೂಜಿಲ್ಯಾಂಡಿನ ಎರಿನ್ ವಿರುದ್ಧ 6-3, 6-2 ಅಂತರದ ನೇರ ಸೆಟ್ ಗೆಲುವು ದಾಖಲಿಸಿದರು. ಇದು ಡಬ್ಲ್ಯುಟಿಎ 500 ವಿಭಾಗದ ಕೂಟವಾಗಿದೆ.
ಇದನ್ನೂ ಓದಿ:ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್ ಶೂ ಧರಿಸಿ ಮೋಸ ಮಾಡುವ ಯತ್ನ
ಇದು ಸಾನಿಯಾ ಕಂಡ ಈ ವರ್ಷದ ದ್ವಿತೀಯ ಫೈನಲ್ ಆಗಿದೆ. ಕಳೆದ ತಿಂಗಳು ಕ್ರಿಸ್ಟಿನಾ ಮೆಕಾಲೆ ಜತೆಗೂಡಿ ಕ್ಲೀವ್‌ಲ್ಯಾಂಡ್ ಡಬ್ಲ್ಯುಟಿಎ 250 ಕೂಟದ ಪ್ರಶಸ್ತಿ ಸುತ್ತು ಪ್ರವೇಶಿಸಿ ರನ್ನರ್ ಅಪ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.