ಸಪ್ತಸಾಗರ ದಾಟುವ ಸಂಭ್ರಮ

ಮತ್ತೊಂದು ಹಿಟ್‌ಗೆ ರಕ್ಷಿತ್‌-ಹೇಮಂತ್‌ ರೆಡಿ

Team Udayavani, Jun 12, 2020, 4:48 AM IST

hemath sagara

ಕೆಲವು ಸಿನಿಮಾಗಳ ಬಗ್ಗೆ ಚಿತ್ರೀಕರಣ ಆರಂಭವಾಗುವ ಮುನ್ನವೇ ಕುತೂಹಲ ಹುಟ್ಟುತ್ತವೆ. ಅದು ಟ್ರೇಲರ್‌, ಟೀಸರ್‌ ಯಾವುದೂ ರಿಲೀಸ್‌ ಆಗದೇ ಇದ್ದರೂ ಜನ ಮಾತ್ರ ಆ ಸಿನಿಮಾಗಳ ಬಗ್ಗೆ ಎದುರು ನೋಡುತ್ತಿರುತ್ತಾರೆ. ಈಗ  ಹೇಮಂತ್‌ ರಾವ್‌ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೂಡಾ ಇಂತಹ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಜಾಹೀರಾತೊಂದು ಆರಂಭದಲ್ಲೇ ಕುತೂಹಲ ಹುಟ್ಟಿಸಿದೆ.

ಚಿತ್ರದ ನಾಯಕ  ನಟ ರಕ್ಷಿತ್‌ ಶೆಟ್ಟಿಯವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಚಿತ್ರತಂಡ ಬಿಡುಗಡೆ ಮಾಡಿದ ಪೋಸ್ಟರ್‌ ಚಿತ್ರದ ಕುರಿತಾದ ಹಲವು ಅಂಶಗಳನ್ನು ಬಿಚ್ಚಿಡುತ್ತಿದೆ. ಮುಖ್ಯವಾಗಿ ಇದೊಂದು ಕ್ರೈಮ್‌ ಚಿತ್ರ ಎಂದು ಬಿಂಬಿತವಾಗುತ್ತಿದೆ. ಜೊತೆಗೆ  ವೃತ್ತಿ, ಹೆಸರು, ಕುಟುಂಬ ಸೇರಿದಂತೆ ಹಲವು ವಿಚಾರಗಳನ್ನು ಇಲ್ಲಿ ನೀಡಲಾಗಿದೆ. ಚಿತ್ರದಲ್ಲಿ ರಕ್ಷಿತ್‌ ಮನು ಅಲಿಯಾಸ್‌ ರಾಜೇಂದ್ರ ಎಂಬ ಪಾತ್ರ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗಡ್ಡಬಿಟ್ಟುಕೊಂಡಿರುವ ರಕ್ಷಿತ್‌ ಈ ಚಿತ್ರದಲ್ಲಿ  ಮತ್ತೆ ತಮ್ಮ ಆರಂಭದ ದಿನಗಳ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೊಲೀಸ್‌ ಸ್ಟೇಷನ್‌ನಲ್ಲಿರುವ ಕೈದಿಗಳ ಲೆಡ್ಜರ್‌ ಪುಸ್ತಕದಲ್ಲಿ ರಕ್ಷಿತ್‌ ಶೆಟ್ಟಿಯವರ ವಿವರನ್ನು ನೀಡಿರುವ ಜಾಹೀರಾತು ಗಮನ ಸೆಳೆಯುವ ಜೊತೆಗೆ ಸಿನಿಮಾ ಬಗ್ಗೆ  ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ನಾಯಕನಿಗೆ ಅಣ್ಣ , ತಾಯಿ ಕೂಡಾ ಇರಲಿದ್ದು, ನಾಯಕ ವೃತ್ತಿಯಲ್ಲಿ ಚಾಲಕನಾಗಿರುತ್ತಾನೆ.

ಈ ಹಿಂದೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ  ನಿರ್ದೇಶನ ಮಾಡಿರುವ ಹೇಮಂತ್‌ ರಾವ್‌ ಸಪ್ತ ಸಾಗರದಾಚೆ  ಎಲ್ಲೋ ಚಿತ್ರ ನಿರ್ದೇ ಶಿಸುತ್ತಿದ್ದಾರೆ. ಪುಷ್ಕರ್‌ ಫಿಲಂಸ್‌ನಡಿ ಈ ಚಿತ್ರ ನಿರ್ಮಾಣ ವಾಗುತ್ತಿದೆ. ಸದ್ಯ ರಕ್ಷಿತ್‌ ಚಾರ್ಲಿ ಸಿನಿಮಾದ ಕನಸಿನಲ್ಲಿದ್ದಾರೆ. ಈ ಹಿಂದಿನ ಅವರ ಸಿನಿಮಾಗಳಿಗಿಂತ ಈ ಚಿತ್ರ ಭಿನ್ನವಾಗಿ ದೆಯಂತೆ. ಚಿತ್ರದ ಬಗ್ಗೆ  ಮಾತನಾಡುವ ರಕ್ಷಿತ್‌, “ಚಾರ್ಲಿ’ ಸಂಪೂರ್ಣ ಭಿನ್ನ. “ಅವನೇ …’ಯಲ್ಲಿ ತುಂಬಾ ಕಾಮಿಡಿ ಮಾಡುವ, ಭಿನ್ನ ಬಾಡಿಲಾಂಗ್ವೇಜ್‌ ಇದ್ದರೆ “ಚಾರ್ಲಿ’ಯಲ್ಲಿ ಸೆಟಲ್ಡ್‌ ಆ್ಯಕ್ಟಿಂಗ್‌ ಇದೆ.

ಇನ್ನು ಚಿತ್ರದಲ್ಲಿ ಶ್ವಾನವೊಂದು ಪ್ರಮುಖ ಪಾತ್ರ ಮಾಡಿದೆ.  ಅದರ ಮೂಡ್‌ಗೆ ತಕ್ಕಂತೆ ನಾವು ನಟಿಸಬೇಕು. ನಾವು ಎಷ್ಟೇ ಚೆನ್ನಾಗಿ ನಟಿಸಿ, ನಾಯಿಯೇನಾ ದರೂ ಸರಿಯಾಗಿ ನಟಿಸದೇ ಹೋದರೆ ಮತ್ತೆ ಶೂಟ್‌ ಮಾಡಬೇಕು. ಅದೇ ನಾಯಿ ಚೆನ್ನಾಗಿ ನಟಿಸಿ, ನಾವು ಇನ್ನೂ ಚೆನ್ನಾಗಿ ಮಾಡುತ್ತೇವೆ  ಎಂದರೆ ಅವಕಾಶವಿರುವುದಿಲ್ಲ’ ಎನ್ನುವುದವರ ಮಾತು.

ಟಾಪ್ ನ್ಯೂಸ್

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.