ಸೌಕೂರು ಏತ ನೀರಾವರಿ ತಡೆ ನಿವಾರಣೆ : 81 ಕೋ.ರೂ.ಗಳಲ್ಲಿ 8 ಗ್ರಾಮಗಳಿಗೆ ಕೃಷಿ ನೀರು
Team Udayavani, Mar 27, 2021, 1:30 AM IST
ಕುಂದಾಪುರ: ಕೃಷಿ ಚಟುವಟಿಕೆಗಾಗಿ ಮಂಜೂರಾದ 81 ಕೋ.ರೂ.ಗಳ ಸೌಕೂರು ಏತ ನೀರಾವರಿ ಯೋಜನೆಗಿದ್ದ ಅಡೆತಡೆ ನಿವಾರಣೆ ಹಂತದಲ್ಲಿದೆ. ಪೈಪ್‌ಲೈನ್ ಹೋಗಲು ಅನೇಕ ಕಡೆ ಖಾಸಗಿ ಜಮೀನಿನ ಅವಶ್ಯವಿದ್ದು ಕೆಲವೆಡೆ ಮರಗಳ ತೆರವಿನ ಅಗತ್ಯವಿತ್ತು.
ಯೋಜನೆ
2019-20ರ ರಾಜ್ಯ ಬಜೆಟ್‌ನಲ್ಲಿ ಸೌಕೂರು ಏತ ನೀರಾವರಿ ಯೋಜನೆಗೆ ಅನುದಾನ ಮಂಜೂ ರಾಗಿತ್ತು. ಟೆಂಡರ್ ಮುಗಿದು ಕಾಮಗಾರಿ ನಡೆಯುತ್ತಿದೆ. ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳ ಲಿದ್ದು ಟ್ರಯಲ್‌ಗಾಗಿ ಪೈಪ್‌ಗ್ಳಲ್ಲಿ ನೀರು ಹರಿಸಲಾಗುತ್ತದೆ. ಡಿಸೆಂ ಬರ್‌ನಿಂದ ಪೂರ್ಣ ಪ್ರಮಾಣದಲ್ಲಿ ರೈತರ ಕೃಷಿಭೂಮಿ ಹಸನಾಗಲಿದೆ.
ಅಡೆತಡೆ
ಪೈಪ್‌ಲೈನ್ ಅಳವಡಿಸ ಬೇಕಾದ ಕರ್ಕುಂಜೆ, ಭಟ್ರಹಾಡಿ, ಗುಲ್ವಾಡಿ, ಮಾವಿನಕಟ್ಟೆ ಮೊದಲಾದೆಡೆ ಸಮಸ್ಯೆ
ಗಳಿದ್ದವು. ಇದರಿಂದಾಗಿ ಕಾಮಗಾರಿ ಕುಂಠಿತವಾಗುತ್ತಿತ್ತು. ಮಂದಗತಿ ಯಲ್ಲಿ ಕಾಮಗಾರಿ ಸಾಗಿದರೆ ಮೇ ತಿಂಗಳಲ್ಲಿ ನೀರು ಹರಿಸಲು ಕಷ್ಟ, ಮಳೆ ಬಂದರೆ ಕಾಮಗಾರಿ ಪೂರ್ಣಗೊಳಿಸುವುದು ಕಷ್ಟ ಎಂಬ ವಾತಾವರಣ ಇತ್ತು.
ಇದಕ್ಕಾಗಿ ಶಾಸಕರು ಎಲ್ಲೆಲ್ಲಿ ಖಾಸಗಿ ಭೂಮಿಯಲ್ಲಿ ಪೈಪ್‌ಲೈನ್ ಹಾದು ಹೋಗುತ್ತದೋ ಅಲ್ಲಿನ ಜನರ ಜತೆ ಮಾತನಾಡಿ ಪೈಪ್‌ಲೈನ್ ಹೋಗುವಂತೆ ಮಾತುಕತೆ ಮೂಲಕ ಮನ ಒಲಿಸಿದರು.
ಮರಗಳ ತೆರವು ನಡೆಯಬೇಕಾದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ತೆರವಿಗೆ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಭೇಟಿ
ಶುಕ್ರವಾರ ಸೌಕೂರು ಏತ ನೀರಾವರಿ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಿಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿದರು. ಇವರ ಜತೆಗೆ ವಾರಾಹಿ ನೀರಾವರಿ ಯೋಜನೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಸನ್ನ, ಸಹಾಯಕ ಎಂಜಿನಿಯರ್ ಎನ್.ಜಿ. ಭಟ್, ಗುತ್ತಿಗೆದಾರ ಸಂಸ್ಥೆಯ ಪರವಾಗಿ ಶಿವ ಎಸ್. ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
ಎರಡು ತಿಂಗಳಲ್ಲಿ ಪೂರ್ಣ
ಕಾಮಗಾರಿ ಸಸೂತ್ರವಾಗಿ ನಡೆಯುತ್ತಿದ್ದು ಮೇ ಅಂತ್ಯದೊಳಗೆ ಪೂರ್ಣಗೊಂಡು ಪ್ರಾಯೋಗಿಕವಾಗಿ ನೀರು ಹರಿಸಲಿದ್ದೇವೆ. 1,800 ಹೆಕ್ಟೇರ್ ಕೃಷಿಭೂಮಿಗೆ ಇದರಿಂದ ಸಹಾಯವಾಗಲಿದೆ.
-ಪ್ರಸನ್ನ, ಎಇಇ, ವಾರಾಹಿ ನೀರಾವರಿ ಯೋಜನೆ
ಅಡೆತಡೆ ನಿವಾರಿಸಲಾಗಿದೆ
ಪೈಪ್‌ಲೈನ್ ಕಾಮಗಾರಿಗೆ ಖಾಸಗಿ ಭೂಮಿಯಲ್ಲಿ ಇದ್ದ ಆಕ್ಷೇಪಗಳನ್ನು ಮಾತುಕತೆ ಮೂಲಕ ಬಗೆಹರಿಸಲಾಗಿದೆ. ಮರಗಳ ತೆರವಿಗೆ ಇಲಾಖೆಗಳಿಗೆ ಸೂಚಿಸಲಾಗಿದೆ. ಬೈಂದೂರಿನ ಕೃಷಿಕರಿಗೆ ಅನುಕೂಲವಾಗಲು à ಯೋಜನೆ ಮಂಜೂರಾಗಿದ್ದು ಸಿದ್ದಾಪುರ ಏತನೀರಾವರಿ ಹಾಗೂ ವಾರಾಹಿ ಬಲದಂಡೆ ಯೋಜನೆ ಮಂಜೂರಾತಿ ಹಂತದಲ್ಲಿದೆ.
-ಬಿ.ಎಂ. ಸುಕುಮಾರ್ ಶೆಟ್ಟಿ ಶಾಸಕರು, ಬೈಂದೂರು
8 ಗ್ರಾಮಗಳಿಗೆ ನೀರು
ಕರ್ಕುಂಜೆ, ಹಟ್ಟಿಯಂಗಡಿ, ಗುಲ್ವಾಡಿ, ಕೆಂಚನೂರು, ಕನ್ಯಾನ, ದೇವಲ್ಕುಂದ, ತಲ್ಲೂರು ಹಾಗೂ ಭಾಗಶಃ ಕಟ್‌ಬೆಲೂ¤ರಿನ 1,800 ಹೆಕ್ಟೇರ್ ಪ್ರದೇಶಕ್ಕೆ ಈ ನೀರು ಉಪಯೋಗ ವಾಗಲಿದೆ. ಕಟ್‌ಬೆಲೂ¤ರು ಹಾಗೂ ತಲ್ಲೂರು ಗ್ರಾಮಗಳಿಗೆ ಪೂರ್ಣಪ್ರಮಾಣದಲ್ಲಿ ಲಭ್ಯವಿಲ್ಲ. ಗುರುತ್ವಾಕರ್ಷಣ ಬಲದಲ್ಲಿ ನೀರು ಹರಿಸಲು ಈ ಭಾಗ ಎತ್ತರದಲ್ಲಿರುವ ಕಾರಣ ಸಾಧ್ಯವಾಗುತ್ತಿಲ್ಲ. ಅಷ್ಟಲ್ಲದೇ ಸರಿಸುಮಾರು 15 ಸಾವಿರ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ.
17 ಕಡೆ ವಿತರಣೆ
8 ಗ್ರಾಮಗಳ 33 ಕಡೆಗಳಲ್ಲಿ ಚೆಕ್ ಡ್ಯಾಂಗಳು ನಿರ್ಮಾಣವಾಗಲಿದೆ. 17 ಕಡೆ ನೀರು ವಿತರಣೆ ಕೇಂದ್ರಗಳಿರುತ್ತವೆ. 725 ಎಚ್.ಪಿ.ಯ ಮೂರು ಪಂಪ್‌ಗ್ಳನ್ನು ಬಳಸಲಾಗುತ್ತದೆ. ಪೈಪ್‌ಗ್ಳಲ್ಲಿ ಹಾಗೂ ಚೆಕ್‌ಡ್ಯಾಂಗಳಲ್ಲಿ ಸಂಗ್ರಹಗೊಳ್ಳುವ ನೀರನ್ನು ರೈತರು ಕೃಷಿಗೆ ಬಳಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.