ಸಾವರಿನ್ ಕಬ್ಬು ಪೂರೈಸಿದ ರೈತರಿಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಅವಕಾಶ
Team Udayavani, Feb 17, 2022, 5:57 PM IST
ರಬಕವಿ-ಬನಹಟ್ಟಿ: ತೇರದಾಳದ ಸಕ್ಕರೆ ಕಾರ್ಖಾನೆಗೆ 2018-19 ರಲ್ಲಿ ಕಬ್ಬು ಪೂರೈಕೆ ಮಾಡಿದ 1628 ಜನ ರೈತರ ಒಟ್ಟು ರೂ. 19,54,66,660 ಪಟ್ಟಿಯನ್ನು ಕಾರ್ಖಾನೆಯ ಆಡಳಿತ ಮಂಡಳಿಯವರು ತಹಶೀಲ್ದಾರ್ ಕಾರ್ಯಾಲಯಕ್ಕೆ ಸಲ್ಲಿಸಿರುತ್ತಾರೆ.ಈ ಪಟ್ಟಿಯನ್ನು ರಬಕವಿ ಬನಹಟ್ಟಿ ತಹಶೀಲ್ದಾರ್, ತೇರದಾಳದ ವಿಶೇಷ ತಹಶೀಲ್ದಾರ್ ಕಾರ್ಯಾಲಯ ಮತ್ತು ಸಾವರಿನ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಲಗತ್ತಿಸಲಾಗಿದೆ. ಆದ್ದರಿಂದ ಸಂಬಂಧಪಟ್ಟ ರೈತರು ಈ ಕುರಿತು ತಮ್ಮ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.
ಅವರು ಗುರುವಾರ ಸ್ಥಳೀಯ ರಬಕವಿ-ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ತೇರದಾಳದ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರ ಸಭೆಯಲ್ಲಿ ಮಾತನಾಡಿದರು.
ಕಬ್ಬು ಪೂರೈಕೆ ಮಾಡಿದ ರೈತರು ಲಿಖಿತ ರೂಪದಲ್ಲಿ ಮತ್ತು ಅಗತ್ಯವಾದ ದಾಖಲೆಗಳ ಜೊತೆಗೆ ಇದೇ ೧೮ ರಿಂದ ೨೪ ಸಂಜೆ ೫.೩೦ ರ ಒಳಗಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
ಇನ್ನೂ ರೈತರ ಕಬ್ಬು ಕಟಾವು ಮತ್ತು ಸಾಗಾಣಿಕೆಗೆ ಸಂಬಂಧಪಟ್ಟಂತೆ 308 ಜನ ರೈತರ ರೂ. 51,33,216 ಬಿಡುಗಡೆ ಮಾಡಿದೆ. ಕಬ್ಬು ಪೂರೈಕೆ ಮಾಡಿದ ರೈತರಿಗೆ ಎಫ್ ಆರ್ ಪಿ ಬೆಲೆಯ ಪ್ರಕಾರ ರೂ. 2613 ನೀಡಲಾಗಿದ್ದು, ಇದರಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕೆಯ ಹಣ ರೂ. 613 ಕಡಿತಗೊಳಿಸಿ ಉಳಿದ ಹಣವನ್ನು ನೀಡಲಾಗುವುದು.
ರೈತರ ಹಣವನ್ನು ಕರ್ನಾಟಕ ಅಪೆಕ್ಸ್ ಬ್ಯಾಂಕ್ ನವರು ಜಮಖಂಡಿಯ ಉಪವಿಭಾಗಾಧಿಕಾರಿಗಳ ಖಾತೆಗೆ ದಿ. 27. 1. 2022 ರಂದು ಹಣವನ್ನು ಠೇವಣಿ ಮಾಡಿರಿರುತ್ತಾರೆ ಎಂದು ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.
ಇದನ್ನೂ ಓದಿ : ತೇರದಾಳ ಪುರಸಭೆ: 1.63 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ
ಈ ಸಂದರ್ಭದಲ್ಲಿ ರೈತ ಮುಖಂಡರು ಸರ್ಕಾರ ನಿಗದಿ ಮಾಡಿದ ಬೆಲೆಗೆ ನಮ್ಮ ಸಮ್ಮತಿ ಇರುವುದಿಲ್ಲ. ನಾವು ಇಷ್ಟರಲ್ಲಿಯೇ ಕಬ್ಬು ಪೂರೈಕೆ ಮಾಡಿದ ರೈತರ ಸಭೆಯನ್ನು ಕರೆಯುತ್ತೇವೆ. ಅಲ್ಲಿ ಬಿಲ್ ಕುರಿತು ಚರ್ಚೆ ಮಾಡಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಪತ್ರಿಕೆಗೆ ತಿಳಿಸಿದರು.
ಈಗಿರುವ ಕಬ್ಬಿನ್ ಬಿಲ್ಲನ್ನು ಪಡೆದುಕೊಂಡು ಮುಂದಿನ ಹಣಕ್ಕಾಗಿ ಮತ್ತು ಹಣದ ಮೇಲಿನ ಬಡ್ಡಿಗಾಗಿ ಮತ್ತೆ ನಾವು ಹೋರಾಟ ಮಾಡುತ್ತೇವೆ ಎಂದು ರೈತ ಸಂಘದ ಮುಖಂಡ ಬಂಡು ಪಕಾಲಿ ಪತ್ರಿಕೆಗೆ ತಿಳಿಸಿದರು.
ಮೂರು ವರ್ಷ ಹೋರಾಟದ ಫಲವಾಗಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ನ್ಯಾಯ ಒದಗಿದಂತಾಗಿದೆ. ಸಕ್ಕರೆ ಕಾರ್ಖಾನೆಯು ಇನ್ನೂ ಹೆಚ್ಚಿನ ಬಿಲ್ ನೀಡಬೇಕಾಗಿದೆ ಎಂದು ರೈತ ಸಂಘದ ಮುಖಂಡ ಹೊನ್ನಪ್ಪ ಬಿರಡಿ ತಿಳಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಶ್ರೀಕಾಂತ ಘೂಳನ್ನವರ, ಶಿವಪ್ಪ ಹೋಟಕರ್, ಧರಿಗೌಡರ, ಭುಜಬಲಿ ಕೆಂಗಾಲಿ, ಯಲ್ಲಪ್ಪ ಮೂಸಿ, ಸರೇಶ ತೇಲಿ, ಮಹಾದೇವ ಬುಗಡಿ, ರಾಮಪ್ಪ ಹೊಸೂರ, ಭೀಮಶಿ ಕರಿಗೌಡರ, ಪರಪ್ಪಾ ಕಮಲದಿನ್ನಿ, ಬಾಹುಬಲಿ ನಂದಗಾವಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು