ಸಾವರ್ಕರ್‌ ವಿರುದ್ಧ ವ್ಯವಸ್ಥಿತ ಅಪಪ್ರಚಾರ: ಸಾತ್ಯಕಿ ಸಾವರ್ಕರ್‌ ಆರೋಪ

Team Udayavani, Jan 13, 2022, 5:15 AM IST

ಸಾವರ್ಕರ್‌ ವಿರುದ್ಧ ವ್ಯವಸ್ಥಿತ ಅಪಪ್ರಚಾರ: ಸಾತ್ಯಕಿ ಸಾವರ್ಕರ್‌ ಆರೋಪ

ಉಡುಪಿ: ದೇಶದ ಒಂದು ಪಕ್ಷದ ಮುಖಂಡರು ಹಾಗೂ ಅವರ ತಂಡ ಸಾವರ್ಕರ್‌ ವಿರುದ್ಧ ವ್ಯವಸ್ಥಿತ ಅಪಪ್ರಚಾರವನ್ನು ಇಂದಿಗೂ ಮಾಡುತ್ತಿದೆ ಎಂದು ವೀರ ಸಾವರ್ಕರ್‌ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್‌ ಕಳವಳ ವ್ಯಕ್ತಪಡಿಸಿದರು.

ಕೂರ್ಮಾ ಬಳಗದಿಂದ ಬುಧವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ಸಾವರ್ಕರ್‌ ಸಾಹಿತ್ಯ ಸಂಭ್ರಮ “ಜಯೋಸ್ತುತೇ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎರಡು ದಶಕಗಳಿಂದ ಸಾವರ್ಕರ್‌ ವಿರುದ್ಧ ಸುಳ್ಳು ಆರೋಪಗಳನ್ನೇ ಮಾಡಲಾಗುತ್ತಿದೆ. ಅವರು ಸ್ವಾತಂತ್ರ್ಯ ಕ್ಕಾಗಿ ಜೈಲಿನಲ್ಲಿದ್ದು ಏನು ಮಾಡಿದ್ದಾರೆ? ಬಿಡುಗಡೆಗಾಗಿ ಕ್ಷಮಾಪಣೆ ಪತ್ರವನ್ನು ಬ್ರಿಟಿಷರಿಗೆ ನೀಡಿದ್ದಾರೆ. ಗಾಂಧೀಜಿ ಹತ್ಯೆಯಲ್ಲೂ ಪಾತ್ರ ವಿದೆ ಇತ್ಯಾದಿಯಾಗಿ ಅನೇಕ ಆರೋಪ ಗಳನ್ನು ಮಾಡುತ್ತಿದ್ದಾರೆ ಎಂದರು.

ಅನೇಕರಿಗೆ ಸ್ವಾತಂತ್ರ್ಯ ದೀಕ್ಷೆ
ಸ್ವಾಮಿ ವಿವೇಕಾನಂದರ ಚಿಂತನೆ ಯಂತೆ ಸಾವರ್ಕರ್‌ ತಮ್ಮ 7ನೇ ವರ್ಷದಲ್ಲಿ ಪ್ರತಿಜ್ಞೆ ಮಾಡಿ, ಜೀವನ ಪೂರ್ತಿ ಅದರಂತೆಯೇ ಬದುಕಿದರು. ಆರಂಭದಲ್ಲಿ ಮಿತ್ರಮೇಳ ಎಂಬ ಸಂಘಟನೆ ಕಟ್ಟಿಕೊಂಡು ಯುವಕರಿಗೆ ಶಿವಾಜಿಯ ಜೀವನದ ಪ್ರೇರಣದಾಯಿ ಸಂದೇಶ ನೀಡುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಅವರನ್ನು ಸಜ್ಜುಗೊಳಿಸುತ್ತಿದ್ದರು. ಸಾವರ್ಕರ್‌ ವಿದೇಶದಲ್ಲೂ ಮದನ್‌ಲಾಲ್‌ ದಿಂಗ್ರ ಸಹಿತವಾಗಿ ಅನೇಕರಿಗೆ ಸ್ವಾತಂತ್ರ್ಯ ದೀಕ್ಷೆ ನೀಡಿದ್ದರು. ಜೈಲಿನಲ್ಲಿ ಶಾರೀರಿಕ ಹಿಂಸೆಯನ್ನು ಅನುಭವಿಸಿ, ಮಾನಸಿಕ ಸ್ವಾಸ್ಥ éವನ್ನು ಕಾಪಾಡಿಕೊಂಡು ಅನೇಕ ಕೈದಿಗಳ ಮನಪರಿರ್ವನೆ ಮಾಡಿದ್ದಾರೆ ಎಂದರು.

ಬ್ರಿಟಿಷ್‌ ಸರಕಾರ, ಭಾರತದಲ್ಲಿದ್ದ ಜಾತಿ ಭೇದದ ಪಿಡುಗು ಹಾಗೂ ಇಸ್ಲಾಂ ಈ ಮೂವರ ವಿರುದ್ಧವೂ ಸಾವರ್ಕರ್‌ ಹೋರಾಟ ಮಾಡಿದ್ದರು. ಧರ್ಮದ ಆಚರಣೆ ಹೇಗಿರಬೇಕು ಎಂಬುದಕ್ಕೆ ಅವರಲ್ಲಿ ಸ್ಪಷ್ಟವಾದ ಕಲ್ಪನೆ ಇತ್ತು. ಧರ್ಮದ ಗುಣಲಕ್ಷಣ, ಧರ್ಮಸಂಸ್ಥೆ, ಮನುಷ್ಯ ಧರ್ಮ ಹೇಗಿರಬೇಕು ಎಂಬುದನ್ನು ಸ್ಪಷ್ಟ ಅರಿವಿತ್ತು ಮತ್ತು ಆ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಯುವಕರೇ ನಮ್ಮ ದೇಶದ ಶಕ್ತಿ: ಪ್ರಧಾನಿ ಮೋದಿ

ಸಾಮಾಜಿಕ ಕ್ರಾಂತಿ
ಅಸ್ಪೃಶ್ಯತೆ ನಿವಾರಣೆಗಾಗಿ ಸಾವರ್ಕರ್‌ ಅನೇಕ ಹೋರಾಟ ಮಾಡಿದ್ದಾರೆ. ಕೆಲವು ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರದ ಒಳಗೆ ಪ್ರವೇಶ ನೀಡದೇ ಇರುವುದನ್ನು ಕಟುವಾಗಿ ಖಂಡಿಸಿ, ಆ ಸಮುದಾಯವನ್ನು ಸಾಮೂಹಿಕವಾಗಿ ದೇವಸ್ಥಾನದ ಒಳಗೆ ಕರೆದುಕೊಂಡು ಹೋಗಿದ್ದಾರೆ. ಅವರಿದ್ದ ಪರಿಸರದಲ್ಲಿ 400 ದೇವಸ್ಥಾನದಲ್ಲಿ ಈ ರೀತಿಯ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಸುಧಾರಣೆ ತಂದಿದ್ದಾರೆ. ಇದಕ್ಕೆ ಪುರಕವಾಗಿ ಪುಸ್ತಕಗಳನ್ನು ಬರೆದು ಜಾಗೃತಿ ಮೂಡಿಸಿದ್ದಾರೆ. ಸಾವರ್ಕರ್‌ ತಮ್ಮ ಹಿಂದುತ್ವ ಎನ್ನುವ ಪುಸ್ತಕದ ಮೂಲಕ ಹಿಂದುತ್ವಕ್ಕೆ ಹೊಸ ತಿರುವು ನೀಡುವ ಜತೆಗೆ ಹಿಂದುತ್ವದ ಚರ್ಚೆಯನ್ನು ಸಮಗ್ರವಾಗಿ ಅದರಲ್ಲಿ ಮಾಡಿದ್ದಾರೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಾತ್ಯಕಿ ಅವರನ್ನು ಸಭಾಂಗಣಕ್ಕೆ ಸ್ವಾಗತಿಸಿ, ಆನಂತರ ಭಾರತಮಾತೆ, ಸ್ವಾಮಿ ವಿವೇಕಾನಂದ ಹಾಗೂ ಸಾವರ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡಿದರು. ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಧರ್ಮ ಡಿಸ್ಪ್ಯಾಚ್‌ನ ಲೇಖಕ ಸಂದೀಪ್‌ ಬಾಲಕೃಷ್ಣನ್‌, ಕೂರ್ಮಾ ಬಳಗದ ಸಂಚಾಲಕ ಶ್ರೀಕಾಂತ್‌ ಶೆಟ್ಟಿ, ಲೇಖಕ ಪ್ರಕಾಶ್‌ ಮಲ್ಪೆ, ಶಾಸಕ ಲಾಲಾಜಿ ಆರ್‌. ಮೆಂಡನ್‌ ಉಪಸ್ಥಿತರಿದ್ದರು. ಗೀತೆಗಾಯನ, ನೃತ್ಯಮಾಲಿನಿ ಕೇಶವ ಪ್ರಸಾಸ್‌, ಕಿಶೋರ್‌ ಪೆರ್ಲ, ಯಶವಂತ ಅವರ ತಂಡದಿಂದ ಸಾವರ್ಕರ್‌ ರಚಿತ ಗೀತೆಗಾಯನ ಹಾಗೂ ಕಲಾವಿದೆ ಮಂಜರಿ ಚಂದ್ರ ಅವರ ತಂಡದಿಂದ ನೃತ್ಯ ಪ್ರದರ್ಶನ ಗೊಂಡಿತು. ಮಹೇಶ್‌ ಮಲ್ಪೆ ಅವರು ರುಬಿಕ್‌ ಕ್ಯೂಬ್  ಮೂಲಕ ಸಾವರ್ಕರ್‌ ಚಿತ್ರ ಹಾಗೂ ಕಲಾವಿದ ರಾಘವೇಂದ್ರ ಅಮಿನ್‌ ರೇಖಾಚಿತ್ರದಲ್ಲಿ ಸಾವರ್ಕರ್‌ ಚಿತ್ರ ಬಿಡಿಸಿ ಗಮನ ಸೆಳೆದರು. ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.

ಸಂಧಾನ ಪತ್ರ, ಕ್ಷಮಾಪಣೆ ಪತ್ರವಲ್ಲ
ಸಾವರ್ಕರ್‌ಗೆ ಬ್ರಿಟಿಷ್‌ ಸರಕಾರ ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಂಡಮಾನ್‌ ಮತ್ತು ರತ್ನಾಗಿರಿಯ ಜೈಲಿನಿಂದಲೇ ಅನೇಕ ರೀತಿಯ ಕ್ರಾಂತಿಕಾರಿ ಚಟುವಟಿಕೆಯನ್ನು ನಡೆಸಿದ್ದಾರೆ. ಸಾವರ್ಕರ್‌ ಎಂದೂ ತಮ್ಮನ್ನು ಜೈಲಿದಿಂದ ಬಿಡುಗಡೆ ಮಾಡಿ ಎಂದು ಕ್ಷಮಾಪಣೆ ಪತ್ರವನ್ನು ಬ್ರಿಟಿಷರಿಗೆ ನೀಡಿಲ್ಲ. ಬದಲಾಗಿ ಸಂಧಾನ ಅಥವಾ ಆವೇದನ ಪತ್ರವನ್ನು ನೀಡಿದ್ದರು. ಆದರೆ ಬ್ರಿಟಿಷರು ಯಾವ ಸಂಧಾನಕ್ಕೂ ಒಪ್ಪಲಿಲ್ಲ. ಸಾವರ್ಕರ್‌ ಏಳು ಬಾರಿ ಬರೆದಿದ್ದ ಪತ್ರವನ್ನು ಬ್ರಿಟಿಷರು ತಿರಸ್ಕರಿಸಿದ್ದರು ಎಂದು ಸಾತ್ಯಕಿ ಸಾವರ್ಕರ್‌ ಹೇಳಿದರು.

ಟಾಪ್ ನ್ಯೂಸ್

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Road Mishap: ಕಾರು-ಮೊಪೆಡ್‌ ಪರಸ್ಪರ ಢಿಕ್ಕಿ: ಗಾಯ

Road Mishap: ಕಾರು-ಮೊಪೆಡ್‌ ಪರಸ್ಪರ ಢಿಕ್ಕಿ: ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.