ಸಯ್ಯದ್ ಮುಷ್ತಾಕ್ ಅಲಿ ಟಿ20 : ಕರ್ನಾಟಕಕ್ಕೆ ನಾಯರ್ ನಾಯಕ
Team Udayavani, Dec 27, 2020, 11:55 PM IST
ಬೆಂಗಳೂರು: ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಗೆ ಕರ್ನಾಟಕದ 20 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಕರುಣ್ ನಾಯರ್ ನಾಯಕರಾಗಿದ್ದಾರೆ. ಕರ್ನಾಟಕ ಈ ಕೂಟದ ಹಾಲಿ ಚಾಂಪಿಯನ್ ಆಗಿದೆ.
ಕೆಎಸ್‌ಸಿಎ ರವಿವಾರ ಪ್ರಕಟಿಸಿದ ಈ ತಂಡದಿಂದ ಮಾಯವಾಗಿರುವ ಪ್ರಮುಖ ಹೆಸರೆಂದರೆ ಮನೀಷ್ ಪಾಂಡೆ ಅವರದು. ಗಾಯಾಳಾದ ಕಾರಣ ಪಾಂಡೆ ಈ ಕೂಟದಲ್ಲಿ ಆಡುತ್ತಿಲ್ಲ. ಕೆ.ಎಲ್. ರಾಹುಲ್ ರಾಷ್ಟ್ರೀಯ ತಂಡದಲ್ಲಿ ರುವುದರಿಂದ ಈ ಪಂದ್ಯಾವಳಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ ದೇವದತ್ತ ಪಡಿಕ್ಕಲ್ ಈ ತಂಡದ ಸ್ಟಾರ್ ಆಟಗಾರ. ಉಡುಪಿ ಮೂಲದ ಶುಭಾಂಗ್ ಹೆಗ್ಡೆ ಕೂಡ ಸ್ಥಾನ ಪಡೆದಿದ್ದಾರೆ.
ಎಲ್ಲ ಆಟಗಾರರು ಡಿ. 28ರಂದು ಕೆಎಸ್‌ಸಿಎ (ಎ) ಗ್ರೌಂಡ್ಸ್‌ನಲ್ಲಿ ತಮ್ಮ ವರದಿ ಸಲ್ಲಿಸಬೇಕೆಂದು ಕೆಎಸ್‌ಸಿಎ ಸೂಚಿಸಿದೆ.
ಕರ್ನಾಟಕ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಈ ವಿಭಾಗದ ಉಳಿದ ತಂಡಗಳೆಂದರೆ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶ, ರೈಲ್ವೇಸ್ ಮತ್ತು ತ್ರಿಪುರ. ಈ ಗುಂಪಿನ ಲೀಗ್ ಪಂದ್ಯಗಳೆಲ್ಲ ಬೆಂಗಳೂರಿನಲ್ಲಿ ನಡೆಯಲಿವೆ.
ಇದನ್ನೂ ಓದಿ:ಟೆಸ್ಟ್ ಪಂದ್ಯಾಟ : ಪ್ರವಾಸಿ ಪಾಕಿಸ್ಥಾನ ಎದುರು ವಿಲಿಯಮ್ಸನ್ ಸೆಂಚುರಿ ನಂ. 23
ಕರ್ನಾಟಕ ತಂಡ: ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ (ಉಪನಾಯಕ), ದೇವದತ್ತ ಪಡಿಕ್ಕಲ್, ರೋಹನ್ ಕದಂ, ಕೆ.ವಿ. ಸಿದ್ಧಾರ್ಥ್, ಶ್ರೀಜಿತ್ (ವಿ.ಕೀ.), ಶರತ್ ಬಿ.ಆರ್. (ವಿ.ಕೀ.), ಅನಿರುದ್ಧ್ ಜೋಶಿ, ಶ್ರೇಯಸ್ ಗೋಪಾಲ್, ಕೆ. ಗೌತಮ್, ಜಗದೀಶ್ ಸುಚಿತ್, ಪ್ರವೀಣ್ ದುಬೆ, ಮಿಥುನ್ ಎ., ಪ್ರಸಿದ್ಧ್ ಕೃಷ್ಣ, ಪ್ರತೀಕ್ ಜೈನ್, ಕೌಶಿಕ್ ವಿ., ರೋನಿತ್ ಮೋರೆ, ದರ್ಶನ್ ಎಂ.ಬಿ., ಮನೋಜ್ ಭಾಂಡಗೆ, ಶುಭಾಂಗ್ ಹೆಗ್ಡೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.