ಕುಂದಾಪುರ : ಪ್ರೌಢಶಾಲೆಗಳು ನಿರಾತಂಕವಾಗಿ ಆರಂಭ
Team Udayavani, Feb 15, 2022, 9:15 AM IST
ಕುಂದಾಪುರ, : ಪ್ರೌಢ ಶಾಲೆಗಳಲ್ಲಿ 9, 10ನೇ ತರಗತಿಗಳು ಅಲ್ಪ ವಿರಾಮದ ಬಳಿಕ ಸೋಮವಾರ ಆರಂಭಗೊಂಡಿವೆ.
ಹಿಜಾಬ್ ವಿವಾದ ಆರಂಭವಾದ ಬಳಿಕ ಕೇಸರಿ ಶಾಲು ತರಗತಿಗಳಲ್ಲಿ ಕಾಣಿಸಿಕೊಂಡಿತು. ಸರಕಾರ ಸಮವಸ್ತ್ರ ಸಂಹಿತೆ ಜಾರಿಗೆ ತಂದಿತು. ವಿವಾದ ನ್ಯಾಯಾಲಯದ ಮೆಟ್ಟಿಲೇರಿತು. ನ್ಯಾಯಾಲಯ ಮಧ್ಯಾಂತರ ಆದೇಶ ನೀಡಿದ್ದು ಶಾಲೆಗಳನ್ನು ಆರಂಭಿಸಿ ಎಂದು ಸೂಚಿಸಿದೆ. ಹಾಗಿದ್ದರೂ ಕಾಲೇಜುಗಳಿಗೆ ರಜೆ ಸಾರಲಾಗಿದ್ದು ಪ್ರೌಢಶಾಲೆಗಳ 9 ಹಾಗೂ 10ನೆಯ ತರಗತಿಗಳು ಮರು ತೆರೆದವು.
ಜಿಲ್ಲಾ ಹೆಚ್ಚುವರಿ ಎಸ್‌ಪಿ ಸಿದ್ದಲಿಂಗಪ್ಪ,ಡಿವೈಎಸ್‌ಪಿ ಕೆ. ಶ್ರೀಕಾಂತ್, ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಎಸ್‌ಐ ಸುಧಾಪ್ರಭು, ತಹಶೀಲ್ದಾರ್ ಕಿರಣ್ ಗೌರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ಮೊದಲಾದವರು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದರು. ತರಗತಿಗ ಳಿಗೂ ತೆರಳಿ ಪರಿಸ್ಥಿತಿ ಪರಾಮರ್ಶಿಸಿದರು.
10ನೇ ತರಗತಿ ಮಕ್ಕಳಿಗೆ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯತ್ತಿವೆ. ಅಷ್ಟಲ್ಲದೇ ಪ್ರೌಢಶಾಲೆಗಳಲ್ಲಿ ಹಿಜಾಬ್ ಕುರಿತಾದ ಗೊಂದಲ ಈವರೆಗೆ ಎಲ್ಲೂ ಇರಲಿಲ್ಲ. ಆದ್ದರಿಂದ ಸೋಮವಾರವೂ ನಿರಾತಂಕವಾಗಿ ತರಗತಿ ನಡೆದವು. ಶಾಲಾ ಆವರಣದ 200 ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ 144 ಹಾಕಿದ್ದರಿಂದ ಜನ ಸೇರುವಂತಿರಲಿಲ್ಲ. ಯಾವುದೇ ಸಂಘಟನೆ, ಪೋಷಕರು ಕುತೂಹಲದ ದೃಷ್ಟಿಯಿಂದ ಆಗಮಿಸಲಿಲ್ಲ.
ತನಿಖೆ ಆಗುತ್ತಿದೆ
ಎಲ್ಲ ಶಾಲೆಗಳ ಬಳಿ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿದೆ. ಹೈಕೋರ್ಟ್ ಆದೇಶ ಪಾಲನೆಗೆ ಎಲ್ಲೂ ಹಿಜಾಬ್, ಕೇಸರಿಗೆ ಅವಕಾಶ ಇಲ್ಲ. ಈ ವಿವಾದದ ಹಿಂದೆ ಯಾವುದೇ ಸಂಘಟನೆಗಳಿವೆಯೇ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಈವರೆಗೆ ಯಾವುದೂ ಖಚಿತವಾಗಿಲ್ಲ. ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ
ಪೊಲೀಸರನ್ನು ನಿಯೋಜಿಸಲಾಗಿದೆ.
-ಸಿದ್ದಲಿಂಗಪ್ಪ , ಹೆಚ್ಚುವರಿ ಎಸ್‌ಪಿ
ನಿರಾ ತಂಕ ವಾಗಿ ನಡೆದ ಕಾರ್ಕಳ ತಾ| ನ 56 ಪ್ರೌಢಶಾಲೆಗಳು
ಕಾರ್ಕಳ: ತಾಲೂಕಿನಲ್ಲಿ ಸೋಮವಾರದಿಂದ ಪ್ರೌಢಶಾಲೆಗಳು ಆರಂಭಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪೂರ್ವ ತಯಾರಿ ಪರೀಕ್ಷೆಗಳು ಕೂಡ ನಡೆದಿದೆ. ತಾಲೂಕಿನ 56 ಪ್ರೌಢಶಾಲೆಗಳು ಎಂದಿನಂತೆ ಯಾವುದೇ ಆತಂಕ, ಗೊಂದಲವಿಲ್ಲದೆ ನಡೆದಿವೆ.
ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಸೂಚನೆಯಂತೆ ಶಾಲಾಡಳಿತ, ಶಿಕ್ಷಕರು ಯಾವುದೇ ಗೊಂದಲ ಆಗದಂತೆ ಶಾಲೆಗಳಲ್ಲಿ ಎಚ್ಚರ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಪಿ, ಸಿಆರ್‌ಪಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಗಮನಹರಿಸಿದ್ದರು. ಶಾಲೆಗಳಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಿರಲಿಲ್ಲ. ಶಿಕ್ಷಕರು ಮಕ್ಕಳ ಮೇಲೆ ನಿಗಾವಹಿಸಿದ್ದರು. ಸರಕಾರಿ, ಖಾಸಗಿ ಶಾಲೆಗಳಲ್ಲಿ ಎಲ್ಲ ಶಾಲೆಗಳು ಸುಶೂತ್ರವಾಗಿ ನಡೆದವು.
ಶಾಲೆ ಆರಂಭವಾಗುವ ಮೊದಲು ಪೊಲೀಸ್ ಇಲಾಖೆಯಿಂದ ಕೂಡ ಜಾಗೃತಿ, ಮುನ್ನೆಚ್ಚರಿಕೆ ವಹಿಸಿತ್ತು. ಕಾರ್ಕಳ ತಾಲೂಕಿನಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲು ವಿಚಾರದಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.