ಪ್ರೌಢಶಾಲೆಗಳು ನಿರಾತಂಕವಾಗಿ ಆರಂಭ : ಪೊಲೀಸರ ಬಿಗಿ ಭದ್ರತೆ
Team Udayavani, Feb 15, 2022, 2:34 PM IST
ಉಡುಪಿ: ಹಿಜಾಬ್-ಕೇಸರಿ ವಿವಾದದಿಂದ ರಜೆ ನೀಡಲಾಗಿದ್ದ ಪ್ರೌಢಶಾಲೆಗಳಲ್ಲಿ ಸೋಮವಾರದಿಂದ ಯಾವುದೇ ಸಮಸ್ಯೆ, ಗೊಂದಲಗಳಿಲ್ಲದೆ ಶೈಕ್ಷಣಿಕ ಚಟುವಟಿಕೆಗಳು ಶಾಂತವಾಗಿ ನಡೆದಿದೆ.
ಉಡುಪಿ ನಗರದ ಕೆಲವು ಪ್ರೌಢಶಾಲೆಗಳಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಶಾಲೆಯ ಕ್ಯಾಂಪಸ್ ಒಳಗೆ ಹಿಜಾಬ್, ಬುರ್ಖಾ ಧರಿಸಿ ಬಂದಿದ್ದರೂ, ತರಗತಿ ಒಳಗೆ ಬುರ್ಖಾ ಹಾಗೂ ಹಿಜಾಬ್ ತೆಗೆದಿಟ್ಟು ಹೋಗಿದ್ದಾರೆ. ಸಮವಸ್ತ್ರ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯ ದಂತೆ ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಪ್ರೌಢ ಶಾಲಾವರಣ ದಲ್ಲಿ ಸಾರ್ವಜನಿಕರು ಗುಂಪು ಸೇರಲು ಅವಕಾಶ ನೀಡಿರಲಿಲ್ಲ.
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಎಂದಿನಂತೆ ಶಾಲೆ ಬಂದು ಪರೀಕ್ಷೆ ಬರೆದು ಹೋಗಿದ್ದಾರೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ನಿತ್ಯದ ಶೈಕ್ಷಣಿಕ ಚಟುವಟಿಕೆ ನಡೆದಿದೆ.
ಶಾಲಾ ಕಾಲೇಜು ಆವರಣದಲ್ಲಿ ಧಾರ್ಮಿಕ ಸಂಕೇತದ ಧರಿಸು ಧರಿಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಾಂತರ ತೀರ್ಪು ನೀಡಿದ್ದರೂ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹಾಗೂ ಬುರ್ಖಾ ಧರಿಸಿ ಬಂದಿದ್ದರು. ಆದರೆ ಆ ವಿದ್ಯಾರ್ಥಿಗಳು ತರಗತಿ ಒಳಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಬುರ್ಖಾ, ಹಿಜಾಬ್ ತೆಗೆದು, ಶಾಲಾ ಸಮವಸ್ತ್ರದಲ್ಲಿ ಹೋಗಿದ್ದಾರೆ.
ಉಡುಪಿ ಸರಕಾರಿ ಬಾಲಕಿಯರ ಪ್ರೌಢ ಶಾಲೆಗೆ ಪ್ರಭಾರ ಡಿಡಿಪಿಐ ಗೋವಿಂಡ ಮಡಿವಾಳ ಅವರು ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದರು. ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ನಿಯಮ ಪಾಲನೆ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಹಿಜಾಬ್ ವಿವಾದದ ಬಗ್ಗೆ ಚರ್ಚಿಸಲು ಹಿರಿಯ ನಾಯಕರ ಸಭೆ ಕರೆದ ಸಿದ್ದರಾಮಯ್ಯ
ಎಸ್‌ಡಿಎಂಸಿ ಸಭೆ
ಬಹುತೇಕ ಪ್ರೌಢಶಾಲೆಗಳಲ್ಲಿ ಸೋಮವಾರ ಎಸ್‌ಡಿಎಂಸಿ ಸದಸ್ಯರ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸಮವಸ್ತ್ರ ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ. ಅಲ್ಲದೆ, ಹೈಕೋರ್ಟ್ ನೀಡಿರುವ ಮಧ್ಯಾಂತರ ತೀರ್ಪು, ಮುಂದೆ ಬರೆಲಿರುವ ಅಂತಿಮ ತೀರ್ಪನ್ನು ಪಾಲಿಸುವ ಬಗ್ಗೆ ನಿರ್ಧರಿಸಿದ್ದಾರೆ.
ಬಿಗಿ ಪೊಲೀಸ್ ಭದ್ರತೆ
ಪ್ರೌಢಶಾಲೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂಬ ಸದುದ್ದೇಶದಿಂದ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪೊಲೀಸ್ ಸಿಬಂದಿ ಬೆಳಗ್ಗೆಯಿಂದ ಸಂಜೆಯವರೆಗೂ ಶಾಲೆಯ ಆವರಣದಲ್ಲೇ ಇದ್ದು, ಸಮವಸ್ತ್ರ ನಿಯಮ ಪಾಲನೆ ಮತ್ತು ನಿಯಮ ಉಲ್ಲಂಘನೆ ಆಗದೇ ಇರುವ ಬಗ್ಗೆ ನಿಗಾ ವಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.