ದೇವಸ್ಥಾನದ ಪ್ರಸಾದಕ್ಕೂ ವೈಜ್ಞಾನಿಕ ಪರೀಕ್ಷೆ; ರಾಜ್ಯದ 4 ದೇವಸ್ಥಾನಗಳಲ್ಲಿ ಅನುಷ್ಠಾನ
Team Udayavani, Jan 3, 2022, 7:40 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಕೇಂದ್ರ ಸರಕಾರ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಧಾರ್ಮಿಕ ಕೇಂದ್ರ ಗಳಲ್ಲಿ ದೊರೆಯುವ ಪ್ರಸಾದದ ಗುಣಮಟ್ಟ ಪರಿಶೀಲನೆಗೆ “ಭೋಗ್’ ಕಾರ್ಯಕ್ರಮ ಅನು ಷ್ಠಾನಗೊಳಿಸಿದ್ದು, ಕರಾವಳಿಯ 4 ದೇವಸ್ಥಾನಗಳಲ್ಲಿ ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ.
ಈ ಮೂಲಕ ಭಕ್ತರಿಗೆ ಉತ್ತಮ ಗುಣಮಟ್ಟ ಖಾತರಿಪಡಿಸಿದ ಪ್ರಸಾದವನ್ನು ನೀಡುವ ಉದ್ದೇಶವನ್ನು ಸರಕಾರ ಹೊಂದಿದೆ. ಪ್ರಾರಂಭಿಕ ಹಂತದಲ್ಲಿ ಕರಾವಳಿಯ ನಾಲ್ಕು ದೇವಸ್ಥಾನಗಳನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ. ಪ್ರಸಾದಗಳಲ್ಲಿ ಯಾವ ಉತ್ಪನ್ನಗಳನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕು. ಅದರ ಶೇಖರಣೆ ಹೇಗೆ? ಯಾವ ವಸ್ತುಗಳನ್ನು ಬಳಸಬಾರದು ಎಂಬ ಅಂಶಗಳನ್ನು ಇದರ ಸದಸ್ಯರು ಗಮನಿಸಲಿದ್ದಾರೆ.
ಭಾರತದಲ್ಲಿರುವ ವಿವಿಧ ಸ್ಥಳಗಳಲ್ಲಿ ಭಿನ್ನ ಭಿನ್ನ ಆಹಾರ ಕ್ರಮ ಇದ್ದು, ಅದಕ್ಕೆ ಅನುಗುಣವಾಗಿ ಪ್ರಸಾದವನ್ನು ಸಿದ್ಧಪಡಿಸಲಾಗುತ್ತದೆ. ಪ್ರಸಾದಕ್ಕೆ ಬೇಕಿರುವಸಾಮಗ್ರಿಗಳನ್ನು ಸಮಪ್ರಮಾಣದಲ್ಲಿ ಹಾಗೂ ಇದನ್ನು ಸೇವಿಸಿದ ಬಳಿಕ ತೊಂದರೆಯಾಗದ ರೀತಿಯಲ್ಲಿ ಸಿದ್ಧಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯನ್ನು ಬಹಳ ನಾಜೂಕು ರೀತಿಯನ್ನು ಇದನ್ನು ಪಾಲಿಸುವ ಹೊಣೆಗಾರಿಕೆ ಇಲಾಖೆಯದ್ದು.
ಇದನ್ನೂ ಓದಿ:ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನ ಹೊಡೆದುರುಳಿಸಿದ ಸೇನೆ
ಅಚ್ಚುಕಟ್ಟು ನಿರ್ವಹಣೆ
ಪ್ರಸಾದ ಸಿದ್ಧಪಡಿಸುವ ಸ್ಥಳಗಳಲ್ಲಿ ಇನ್ನು ಮುಂದೆ ಶುಚಿತ್ವಕ್ಕೆ ಬಹಳಷ್ಟು ಮಹತ್ವ ನೀಡಲಾಗುತ್ತದೆ. ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮಾವಳಿಗಳಂತೆ ಎಲ್ಲ ಪ್ರಸಾದಗಳನ್ನೂ ತಯಾರಿಸಲಾಗುತ್ತದೆ. ಪ್ರಸಾದ ಸೇವಿಸಿದ ಭಕ್ತರ ಆರೋಗ್ಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.
ಆಯ್ಕೆಯಾಗಿರುವ ದೇವಸ್ಥಾನಗಳು
ಉಡುಪಿ ಜಿಲ್ಲೆಯ ಕೊಲ್ಲೂರು, ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ, ಉತ್ತರ ಕನ್ನಡ ಶಿರಸಿಯ ಮಾರಿಕಾಂಬಾ ದೇವಸ್ಥಾನಗಳು ಆಯ್ಕೆಯಾಗಿದ್ದು, ಅಗತ್ಯವಿರುವ ಸಿಬಂದಿಗೆ ತರಬೇತಿ ನೀಡಲಾಗಿದೆ.
ಕೇಂದ್ರ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರವು ಭೋಗ್ ಕಾರ್ಯಕ್ರಮದ ಮೂಲಕ ದೇವಸ್ಥಾನಗಳ ಪ್ರಸಾದಗಳನ್ನು ಗುಣಮಟ್ಟ ಪರಿಶೀಲಿಸಿ ನೀಡಲಿದೆ. ಇದಕ್ಕಾಗಿ 4 ಜಿಲ್ಲೆಗಳು ಆಯ್ಕೆಗೊಂಡಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ.
– ಡಾ| ಪ್ರೇಮಾನಂದ, ಜಿಲ್ಲಾ ಆಹಾರ ಸುರಕ್ಷೆ ಅಧಿಕಾರಿ, ಉಡುಪಿ
-ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.