ವೈಜ್ಞಾನಿಕ ಚಿಂತನೆ ನಮ್ಮದಾಗಲಿ
ಇಂದು ರಾಷ್ಟ್ರೀಯ ವಿಜ್ಞಾನ ದಿನ
Team Udayavani, Feb 28, 2021, 6:20 AM IST
ಭಾರತದ ಶ್ರೇಷ್ಠ ಭೌತ ವಿಜ್ಞಾನಿ ಸರ್| ಸಿ. ವಿ. ರಾಮನ್ ಅವರು ಬೆಳಕಿನ ವಿಶಿಷ್ಟ ಚಲನೆಯ “ರಾಮನ್ ಪ್ರಭಾವ’ವನ್ನು ಸಂಶೋಧಿಸಿದ್ದು ಕ್ರಿ.ಶ. 1928ರ ಫೆಬ್ರವರಿ 28ರಂದು. ಇದನ್ನು ನೆನಪಿಸಿಕೊಳ್ಳುವುದರ ಜತೆಯಲ್ಲಿ ಜನತೆಯಲ್ಲಿ ವಿಜ್ಞಾನ ಮತ್ತು ಸಂಶೋಧನೆಯತ್ತ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ದಿನವನ್ನು ಪ್ರತೀ ವರ್ಷ “ರಾಷ್ಟ್ರೀಯ ವಿಜ್ಞಾನ ದಿನ’ ಎಂದು ಆಚರಿಸಲಾಗುತ್ತದೆ. ಅಂದಿನ ದಿನಗಳಲ್ಲಿ ಸಾಮಾನ್ಯವಾದ ಉಪಕರಣಗಳನ್ನು ಬಳಸಿ ಕೊಂಡು ಸತತ ಪರಿಶ್ರಮ, ತಾಳ್ಮೆಯಿಂದ ಸಂಶೋಧನೆ ನಡೆಸಿ ಇಡೀ ಪ್ರಪಂಚವೇ ಅಚ್ಚರಿ ಪಡುವಂತೆ ಮಹತ್ತರವಾದ ಸಂಶೋಧನೆ ನಡೆಸಿ ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟವರು ಸರ್| ಸಿ.ವಿ. ರಾಮನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಭಾರತ ರತ್ನ’ ವನ್ನು ಪಡೆದ ಮೊದಲ ವಿಜ್ಞಾನಿ ಕೂಡ.
“ವಿಜ್ಞಾನವಿಲ್ಲದೆ ಮಾನವನಿಲ್ಲ. ಮಾನವನಿಲ್ಲದೆ ವಿಜ್ಞಾನವಿಲ್ಲ’ ಎಂಬುದು ಕೇವಲ ಮಾತಲ್ಲ. ಇಂದು ನಾವು ವಿಜ್ಞಾನ ಯುಗದಲ್ಲಿದ್ದೇವೆ. ಅನೇಕ ವೈಜ್ಞಾನಿಕ ಸಂಶೋಧನೆಗಳಿಂದಾಗಿ ನಮ್ಮ ಜೀವನದಲ್ಲಿಂದು ಕ್ರಾಂತಿಕಾರಿ ಬದಲಾವಣೆಗಳಾಗಿವೆ. ವಿಜ್ಞಾನದ ಬೆಳವಣಿಗೆಯಿಂದಾಗಿ ಇಡೀ ವಿಶ್ವವೇ ಒಂದು ಹಳ್ಳಿಯಂತಾಗಿದೆ. ನಿರಂತರ ವೈಜ್ಞಾನಿಕ ಸಂಶೋಧನೆಗಳ ಫಲವನ್ನು ಜನತೆ ಈಗ ಉಣ್ಣುವಂತಾಗಿದೆ. ಪ್ರತಿಯೊಂದೂ ಕ್ಷೇತ್ರದಲ್ಲಿಯೂ ಇದೀಗ ವಿಜ್ಞಾನ ಹಾಸುಹೊಕ್ಕಾಗಿದೆ. ಪ್ರತಿನಿತ್ಯ ಎಂಬಂತೆ ನಡೆಯುತ್ತಿರುವ ಆವಿಷ್ಕಾರ ಗಳಿಂದಾಗಿ ಜಗತ್ತು ಅಭಿವೃದ್ಧಿಯ ನಾಗಾಲೋಟದಲ್ಲಿದೆ.
ಆಧುನಿಕ ಯಂತ್ರೋಪಕರಣಗಳು ಮಾನವನ ದೈನಂದಿನ ಬದುಕನ್ನು ಸುಲಭಸಾಧ್ಯವಾಗಿಸಿದೆ. ವಿಜ್ಞಾನವು ಮಾನವನಿಗೆ ವರವೇ ಹೊರತು ಶಾಪವಲ್ಲ. ಶಾಂತಿಯುತ ಉದ್ದೇಶಕ್ಕಾಗಿಯೇ ಅಣುಬಾಂಬ್ ಅನ್ನು ಸಂಶೋಧಿಸಲಾಗಿತ್ತೇ ಹೊರತು ಸ್ವಾರ್ಥ, ದ್ವೇಷ ಸಾಧನೆಗಾಗಿ ಅಲ್ಲ. ವೈಜ್ಞಾನಿಕ ಚಿಂತನೆ, ಮನೋಭಾವ ನಮ್ಮದಾಗಬೇಕಿದೆ. ಹಾಗಾದಾಗ ಮಾತ್ರ ವಿಜ್ಞಾನದ ಆವಿ ಷ್ಕಾರಗಳು ಸ್ವಸ್ಥ ಮತ್ತು ಶಾಂತಿಯುತ ಸಮಾಜಕ್ಕೆ ಪೂರಕವಾಗಬಲ್ಲವು.
– ಎನ್. ಯಜ್ಞನಾರಾಯಣ ಉಳ್ಳೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.