ವೈದ್ಯಕೀಯ-ಶಿಕ್ಷಣ ಕ್ಷೇತ್ರದ ಮಹೋನ್ನತ ಸಾಧನೆ ಎಸ್‌.ಸಿ.ಎಸ್‌. ಸಮೂಹ ಶಿಕ್ಷಣ ಸಂಸ್ಥೆಗಳು


Team Udayavani, Jun 28, 2020, 2:00 AM IST

ವೈದ್ಯಕೀಯ-ಶಿಕ್ಷಣ ಕ್ಷೇತ್ರದ ಮಹೋನ್ನತ ಸಾಧನೆ ಎಸ್‌.ಸಿ.ಎಸ್‌. ಸಮೂಹ ಶಿಕ್ಷಣ ಸಂಸ್ಥೆಗಳು

ವೈದ್ಯಕೀಯ, ಅರೆವೈದ್ಯಕೀಯ, ನರ್ಸಿಂಗ್‌ ಮತ್ತು ಇತರ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುವ ಉದ್ದೇಶದೊಂದಿಗೆ 1994ರಲ್ಲಿ ಪ್ರಾರಂಭಗೊಂಡ ಕರ್ನಾಟಕ ಎಜುಕೇಶನಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌, ಅಂತಾರಾಷ್ಟ್ರೀಯ ಗುಣಮಟ್ಟದ, ಅತ್ಯುತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಮಂಗಳೂರಿನ ಅಶೋಕನಗರದ ಹೊಗೆಬೈಲ್‌ನಲ್ಲಿ 1994ರಲ್ಲಿ ಎಸ್‌.ಸಿ.ಎಸ್‌. ನರ್ಸಿಂಗ್‌ ಕಾಲೇಜು ಮತ್ತು ಕರ್ನಾಟಕ ಕಾಲೇಜ್‌ ಆಫ್‌ ಫಿಸಿಯೋಥೆರಪಿಯನ್ನು ಸ್ಥಾಪಿಸಿ, 2002ರಲ್ಲಿ ಕರ್ನಾಟಕ ಆಯುರ್ವೇದ ಮೆಡಿಕಲ್‌ ಕಾಲೇಜ್‌ ಎಂಬ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿತು.

2018ರಲ್ಲಿ ಬಿಕರ್ನಕಟ್ಟೆಯಲ್ಲಿ ಎಸ್‌.ಸಿ.ಎಸ್‌. ಪ್ರಿ ಸ್ಕೂಲ್‌ ಎಂಬ ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆ ಆರಂಭವಾಯಿತು. 2019ರಲ್ಲಿ ಪಡೀಲ್‌ ಕಣ್ಣೂರ್‌ನಲ್ಲಿ ಇದರ ಎರಡನೇ ಶಾಖೆ ಕೂಡಾ ಆರಂಭವಾಯಿತು. ಕಳೆದ 25 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಈ ಶಿಕ್ಷಣ ಸಂಸ್ಥೆ ಇನ್ನೂ ಹಲವಾರು ಹೊಸ ಕೋರ್ಸ್‌ ಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ.

ಸ್ವರ್ಣ ಬಿಂದು ಪ್ರಾಶನ
ಮಕ್ಕಳ ಮಾನಸಿಕ ಕ್ಷಮತೆ, ರೋಗ ನಿರೋಧಕ ಶಕ್ತಿ, ಜೀರ್ಣ ವ್ಯವಸ್ಥೆ ಮತ್ತು ಸಂಪೂರ್ಣ ಬೆಳವಣಿಗೆಯನ್ನು ಹೆಚ್ಚಿಸಲು ಸ್ವರ್ಣ ಭಸ್ಮ, ಮಧು ಮತ್ತು ತುಪ್ಪದಿಂದ ಶಾಸ್ತ್ರೀಯವಾಗಿ ತಯಾರಿಸಲಾದ ಸ್ವರ್ಣ ಬಿಂದು ಪ್ರಾಶನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ. 5 ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ 2 ಹನಿ ಮತ್ತು 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ 5 ಹನಿ ನೀಡಲಾಗುತ್ತದೆ. 5 ರಿಂದ 16 ವರ್ಷ ಪ್ರಾಯದ ಮಕ್ಕಳು ಈ ಚಿಕಿತ್ಸೆ ಪಡೆದುಕೊಳ್ಳಬಹುದು. ಈ ಸ್ವರ್ಣ ಬಿಂದು ಪ್ರಾಶನದಿಂದ ಮಕ್ಕಳ ಬುದ್ಧಿಮತ್ತೆ ತೀಕ್ಷ್ಣಗೊಂಡು ನೆನಪು ಶಕ್ತಿ ಮತ್ತು ದೈಹಿಕ ಕ್ಷಮತೆ ಹೆಚ್ಚುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾದ ಈ ಔಷಧ ಮಕ್ಕಳ ಪಾಲಿಗೆ ಸಂಜೀವಿನಿ.

ಶಿಕ್ಷಣ ಸಂಸ್ಥೆಗಳು
2002ರಲ್ಲಿ ನಗರದ ಹೃದಯ ಭಾಗದಲ್ಲಿ ಎಲ್ಲಾ ಸೌಲಭ್ಯ ಗಳೊಂದಿಗೆ ಸ್ಥಾಪನೆಗೊಂಡ ಏಕೈಕ ಆಯುರ್ವೇದ ಮೆಡಿಕಲ್‌ ಕಾಲೇಜ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಿದ್ಯಾಸಂಸ್ಥೆ ಇದುವರೆಗೆ ಸಾವಿರಾರು ವೈದ್ಯರುಗಳನ್ನು ತರಬೇತು ಗೊಳಿಸಿ ಸಮಾಜಕ್ಕೆ ನೀಡಿದೆ. ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಇದರ ಸಂಯೋಜನೆಯೊಂದಿಗೆ ಭಾರತ ಸರಕಾರದ ಆಯುಷ್‌ ಇಲಾಖೆಯ ಮಾನ್ಯತೆಯನ್ನೂ ಪಡೆದಿದೆ.

ಕರ್ನಾಟಕ ಆಯುರ್ವೇದ ಮೆಡಿಕಲ್‌ ಕಾಲೇಜ್‌ ಕೋರ್ಸುಗಳು
– ಬಿ. ಎ. ಎಂ. ಎಸ್‌. ಆಯುರ್ವೇದ ಪದ್ಧತಿಯಲ್ಲಿ 5 1/2 ವರ್ಷಗಳ ಸ್ನಾತಕ ಪದವಿ
– ಎಂ.ಡಿ. – ಆಯುರ್ವೇದದಲ್ಲಿ 3 ವರ್ಷಗಳ ಸ್ನಾತಕೋತ್ತರ ಪದವಿ
– ಡಿಪ್ಲೋಮಾ ಕೋರ್ಸ್‌ಗಳು: ಆಯುರ್ವೇದ ಫಾರ್ಮಸಿ, ನರ್ಸಿಂಗ್‌ ಮತ್ತು ಪಂಚಕರ್ಮ- ಒಂದೂವರೆ ವರ್ಷ
– ಆಯುರ್ವೇದ ನರ್ಸಿಂಗ್‌ ಮತ್ತು ಪಂಚಕರ್ಮ- 1 ವರ್ಷ
– ಆಯುರ್ವೇದ ಪಂಚಕರ್ಮ- 1 ವರ್ಷ

ಎಸ್‌. ಸಿ. ಎಸ್‌. ಕಾಲೇಜ್‌ ಆಫ್‌ ನರ್ಸಿಂಗ್‌ ಸಾಯನ್ಸಸ್‌
1994 ರಲ್ಲಿ ಪ್ರಾರಂಭಗೊಂಡ ಈ ವಿದ್ಯಾಸಂಸ್ಥೆ 25 ವರ್ಷಗಳ ಉತ್ಕೃಷ್ಟ ಸೇವೆಯೊಂದಿಗೆ ಜನಜನಿತವಾಗಿದ್ದು ನರ್ಸಿಂಗ್‌ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿ ಸಂಸ್ಥೆಯಾಗಿದೆ. ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಇದರ ಸಂಯೋಜನೆಯೊಂದಿಗೆ ಭಾರತ ನರ್ಸಿಂಗ್‌ ಪರಿಷತ್ತಿನ ಮಾನ್ಯತೆಯನ್ನೂ ಪಡೆದಿದೆ.

ಕೋರ್ಸುಗಳು:
-ಬಿ. ಎಸ್ಸಿ. ನರ್ಸಿಂಗ್‌- ನರ್ಸಿಂಗ್‌ನಲ್ಲಿ 4 ವರ್ಷಗಳ ಸ್ನಾತಕ ಪದವಿ
– ಎಂ.ಎಸ್ಸಿ. ನರ್ಸಿಂಗ್‌ – ನರ್ಸಿಂಗ್‌ನಲ್ಲಿ 2 ವರ್ಷಗಳ ಸ್ನಾತಕೋತ್ತರ ಪದವಿ

ಎಸ್‌.ಸಿ.ಎಸ್‌. ಪ್ರಿ ಸ್ಕೂಲ್ಸ್‌
ಪ್ಲೇಗ್ರೂಪ್‌, ನರ್ಸರಿ, ಎಲ್‌.ಕೆ.ಜಿ., ಯು.ಕೆ.ಜಿ. ತರಗತಿ ಗಳಲ್ಲಿ ಮೊಂಟೆಸ್ಸರಿ ರೀತಿಯ ಶಿಕ್ಷಣದ ಉದ್ದೇಶದಿಂದ ನಗರದ ಬಿಕರ್ನಕಟ್ಟೆ ಮತ್ತು ಪಡೀಲ್‌ ಕಣ್ಣೂರ್‌ಗಳಲ್ಲಿ ಪ್ರಿ ಸ್ಕೂಲ್ಸ್‌ಗಳನ್ನು 2018 ರಿಂದ ಪ್ರಾರಂಭಿಸಲಾಗಿದೆ. ಉದ್ಯೋಗಕ್ಕೆ ಹೋಗುವ ಮಹಿಳೆಯರ ಸೌಕರ್ಯಕ್ಕಾಗಿ 5 ವರ್ಷಗಳಿಗಿಂತ ಕೆಳಗಿನ ಪ್ರಾಯದ ಮಕ್ಕಳಿಗೆ ಡೇಕೇರ್‌ ಸೆಂಟರ್‌ ಕೂಡಾ ಇಲ್ಲಿ ಲಭ್ಯವಿದೆ.

ಸಂಸ್ಥೆಯ ಧ್ಯೇಯ
ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಿ,ಸವಾಲುಗಳನ್ನೆದುರಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲ ಸ್ಫೂರ್ತಿದಾಯಕ ಮಾತು ಪ್ರಾಜ್ಞ ವೃತ್ತಿಪರರನ್ನು ತಯಾರುಗೊಳಿಸುವುದು. ಕ್ಷಿಪ್ರ ಅಭಿವೃದ್ಧಿ ಹೊಂದುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ವೈದ್ಯಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆಗಳನ್ನು ಕೈಗೊಂಡು, ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಸಮಾಜದ ತಳಮಟ್ಟದವರಿಗೂ ತಲುಪಿಸಲು ಅನುವಾಗುವಂತೆ ಸಾಮಾಜಿಕ ಹೊಣೆಗಾರಿಕೆಯುಳ್ಳ ತಜ್ಞರನ್ನು ತರಬೇತುಗೊಳಿಸುವುದಾಗಿದೆ.

ಶೈಕ್ಷಣಿಕ ವಿಭಾಗದ ವಿಶೇಷತೆಗಳು
-ನಗರದ ಹೃದಯ ಭಾಗದಲ್ಲಿ ರೈಲು ನಿಲ್ದಾಣ, ಬಸ್ಸು ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಿಗೆ ಸಮೀಪವಿದೆ.
-ಉತ್ತಮ ಬೋಧಕ ಸಿಬಂದಿ, ಆಧುನಿಕ ಕಲಿಕಾ ಉಪಕರಣಗಳು, ಉತ್ತಮ ಪ್ರಾಯೋಗಿಕ ತರಬೇತಿ
-ಸುಸಜ್ಜಿತ ಶರೀರ ರಚನಾ ಮ್ಯೂಸಿಯಂ(Anatomy), ಶರೀರ ಕ್ರಿಯಾ ಮ್ಯೂಸಿಯಂ(Physiology) ದ್ರವ್ಯಗುಣ ಮ್ಯೂಸಿಯಂ(Pharmacology) ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನ ಮ್ಯೂಸಿಯಂ (Pharmacognosy), ಸ್ವಸ್ತವೃತ್ತ ಮ್ಯೂಸಿಯಂ (Community Medicine), ಕೌಮಾರ ಭೃತ್ಯ ಮ್ಯೂಸಿಯಂ (Paediatric), ಪ್ರಸೂತಿ ಮ್ಯೂಸಿಯಂ (Obstetric & Gynaecology), ಶಾಲಾಕ್ಯ ಮ್ಯೂಸಿಯಂ (Eye&ENT), ಶಲ್ಯ ಮ್ಯೂಸಿಯಂ (Surgery),ಅಗದ ಮ್ಯೂಸಿಯಂ (Forensic & Toxicology)ಸೌಕರ್ಯವಿದೆ.
-ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಗ್ರಂಥಾಲಯ ಮತ್ತು ವಾಚನಾಲಯ, ವೈಫೈ ಸೌಲಭ್ಯವುಳ್ಳ ಕಂಪ್ಯೂಟರ್‌ ಲ್ಯಾಬ್‌.
-400 ಕ್ಕೂ ಮಿಕ್ಕಿ ಮಾದರಿಯ ಔಷಧ ಸಸ್ಯಗಳ ಧನ್ವಂತರಿ ವನ, ಔಷಧ ಮತ್ತು ರಸಾಯನ ತಯಾರಿಕೆಯಲ್ಲಿ ಪ್ರಾತ್ಯಕ್ಷಿಕ ತರಬೇತಿ.
-ಸುಸಜ್ಜಿತ ಬಾಲಕರ ಮತ್ತು ಬಾಲಕಿಯರ ವಸತಿ ಗೃಹಗಳು.

ಕೋವಿಡ್‌-19 ನಿಯಂತ್ರಣಕ್ಕಾಗಿ ಕ್ರಮ
-ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳು, ವೆಬಿನಾರ್‌ ಸೀರೀಸ್‌ ಮೂಲಕ ಅತಿಥಿ ಉಪನ್ಯಾಸಕರ ತರಗತಿ
-ಆಸ್ಪತ್ರೆಯಲ್ಲಿ ಜ್ವರ ಚಿಕಿತ್ಸಾಲಯ (ಫೀವರ್‌ ಕ್ಲಿನಿಕ್‌)
-ಸಂದರ್ಶಕರ ಮತ್ತು ರೋಗಿಗಳ ದೇಹದ ಉಷ್ಣತೆಯ ಸ್ಕ್ರೀನಿಂಗ್‌
-ಸಾರ್ವಜನಿಕರಿಗೆ ಕೋವಿಡ್‌-19 ಬಗ್ಗೆ ಜಾಗೃತಿ ಮೂಡಿಸಲು ಜಾಗೃತಿ ಶಿಬಿರ ಮತ್ತು ಟಿವಿ ಕಾರ್ಯಕ್ರಮ
-ರೋಗ ನಿರೋಧಕ ಶಕ್ತಿವರ್ಧಕ ಔಷಧಗಳ ಸಂಶೋಧನೆ , ತಯಾರಿ ಪರಿಣಿತರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

ಸಾಧನೆಗಳು
ವಿದ್ಯಾರ್ಥಿ ಶುಶ್ರೂಷಕರ ಸಂಘ ಇವರು ಬೆಂಗಳೂರಿನಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಸ್‌.ಸಿ.ಎಸ್‌. ಕಾಲೇಜು ಆಫ್‌ ನರ್ಸಿಂಗ್‌ ಕಾಲೇಜು ಮಂಗಳೂರು ಇಲ್ಲಿನ ಚತುರ್ಥ ವರ್ಷದ ಬಿ.ಎಸ್ಸಿ ನರ್ಸಿಂಗ್‌ನ ಅಂಜು ಅಬ್ರಹಾಂ ಇವರು ಮಿಸ್‌ ಎಸ್‌.ಎನ್‌.ಎ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಪ್ರಥಮ ವರ್ಷದ ಬಿ.ಎಸ್ಸಿ ನರ್ಸಿಂಗ್‌ನ ವಿಷ್ಣುವಿಜಯಕುಮಾರ್‌ ಇವರು ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ವತಿಯಿಂದ ನಡೆದ ಅಂತರ್‌ಕಾಲೇಜು ಆ್ಯತ್ಲೆಟಿಕ್‌ ಚಾಂಪಿ ಯನ್‌ ಶಿಪ್‌ನಲ್ಲಿ ಕರ್ನಾಟಕ ಆಯುರ್ವೆದ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಿಎಎಂಎಸ್‌ನ 4ನೇ ವರ್ಷದ ವಿದ್ಯಾರ್ಥಿ ಶ್ರವಣ್‌ ರೈ ಜಾವಲಿನ್‌ ಥ್ರೋ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಹೈಜಂಪ್‌ನಲ್ಲಿ ಬಿಎಎಂಎಸ್‌ ದ್ವಿತೀಯ ವರ್ಷದ ವಿದ್ಯಾರ್ಥಿನಿ ದೀಪಾಲಿ ಡಿ.ಗಾಯಕ್‌ವಾಡ್‌ ತೃತೀಯ ಪ್ರಶಸ್ತಿ ಪಡೆದುಕೊಂಡರು.

ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಆಯುರ್ವೇದ ವಿಚಾರಸಂಕಿರಣ”ಕರ್ಮಸಿದ್ಧಿ-2020’ರಲ್ಲಿ ಅತ್ಯುತ್ತಮ ವಿಷಯ ಮಂಡನೆ ಪ್ರಶಸ್ತಿಯನ್ನು ಕರ್ನಾಟಕ ಆಯುರ್ವೇದ ಮೆಡಿಕಲ್‌ ಕಾಲೇಜಿನ ಡಾ| ಕೃಪಾ ಡಿ. ರಿತೇಶ್‌ ಹಾಗೂ ಡಾ| ಅಶ್ವಿ‌ನಿ ಅವರು ಪಡೆದುಕೊಂಡಿದ್ದಾರೆ.

ಕೆ.ಎ.ಎಂ.ಸಿ. ಆಸ್ಪತ್ರೆ
ಬೆನ್ನು ನೋವು, ಅಸ್ತಮಾ, ಸಂಧಿವಾತ, ಸೈನಸೈಟಿಸ್‌, ಮಧುಮೇಹ, ಅಧಿಕ ರಕ್ತದೊತ್ತಡ, ಮೂಲವ್ಯಾಧಿ, ಫಿಶರ್‌, ಫಿಸ್ತುಲ, ಥೈರಾಯ್ಡ, ಚರ್ಮರೋಗಗಳು, ಮೂರ್ಛೆರೋಗ, ಮಾನಸಿಕ ಕಾಯಿಲೆಗಳು, ಬೊಜ್ಜು , ಪಾರ್ಶ್ವವಾಯು, ಸ್ಟ್ರೋಕ್‌ ಮತ್ತು ಇತರ ನರಸಂಬಂಧಿ ರೋಗಗಳು, ಸ್ತ್ರೀರೋಗಗಳು, ಬಾಲರೋಗ ಮುಂತಾದ ರೋಗಗಳಿಗೆ ಸರ್ವಾಂಗ ಅಭ್ಯಂಗ, ವಮನ, ವಿರೇಚನ, ನಸ್ಯ, ಬಸ್ತಿ, ರಕ್ತಮೋಕ್ಷಣ, ಕ್ಷಾರಸೂತ್ರ, ಕ್ಷಾರಲೇಪ, ಯೋಗಚಿಕಿತ್ಸೆ, ಶಿರೋಧಾರ ಮತ್ತು ಇನ್ನಿತರ ಶಾಸ್ತ್ರೀಯ ರೀತಿಯ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದು, ನುರಿತ ವೈದ್ಯಕೀಯ ತಜ್ಞರು ಮತ್ತು ದಾದಿಯರ ಸೇವೆ ದಿನದ 24 ಗಂಟೆಯೂ ಲಭ್ಯವಿದೆ. ಸುಸಜ್ಜಿತ ಆಯು ರ್ವೇದ ಪಂಚಕರ್ಮ ವಿಭಾಗ, ಆಯುರ್ವೇದ ಫಾರ್ಮಸಿ, ಕ್ಷಾರಸೂತ್ರ ಥಿಯೇಟರ್‌, ಶಸ್ತ್ರಚಿಕಿತ್ಸಾ ಕೊಠಡಿಗಳು, ಹೆರಿಗೆ ವಿಭಾಗ, ತುರ್ತುಚಿಕಿತ್ಸಾ ವಿಭಾಗ ಮುಂತಾದ ವಿವಿಧ ಸೌಲಭ್ಯ ಹೊಂದಿದೆ.

ಕೆ. ಎ. ಎಂ. ಸಿ. ಆಸ್ಪತ್ರೆ ಪಾಲಿಕ್ಲಿನಿಕ್‌
ಆಧುನಿಕ ವೈದ್ಯ ಪದ್ಧತಿಯ ಚಿಕಿತ್ಸೆಯನ್ನೂ ಜನಸಾಮಾನ್ಯರಿಗೆ ವಿಸ್ತರಿಸುವ ಉದ್ದೇಶದಿಂದ ಅಲೋಪತಿ ವೈದ್ಯ ಪದ್ಧತಿಯ ಎಲ್ಲಾ ವಿಭಾಗಗಳಲ್ಲೂ ನುರಿತ ಅಲೋಪತಿ ವೈದ್ಯರ ಹೊರರೋಗಿ ಮತ್ತು ಒಳರೋಗಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಸಂಜೆ 4 ರಿಂದ ರಾತ್ರಿ 8 ಗಂಟೆ ವರೆಗೆ ಅಲೋಪತಿ ವೈದ್ಯರು ಚಿಕಿತ್ಸೆಗೆ ಲಭ್ಯವಿದ್ದು, ಇತರ ಸಮಯಗಳಲ್ಲೂ ತುರ್ತುಚಿಕಿತ್ಸೆಗೆ ವೈದ್ಯರ ಸೇವೆ ಲಭ್ಯವಿರುತ್ತದೆ.

ತುರ್ತು ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಹೆರಿಗೆ ವಿಭಾಗ, ಕ್ಲಿನಿಕಲ್‌ ಲೆಬೊರೆ ಟೊರಿ, ಡಿಜಿಟಲ್‌ ಎಕ್ಸ್‌ರೇ, ಅಲ್ಟ್ರಾಸೌಂಡ್‌ ಸ್ಕಾನ್‌, ಫಿಸಿಯೋಥೆರಪಿ, ಔಷಧಾಲಯ ಮತ್ತು ತೀವ್ರ ನಿಗಾ ವಿಭಾಗಗಳ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

ವಿಶೇಷತೆಗಳು
-ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ಹಲವಾರು ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗುತ್ತಿದೆ.
-ಮಾನಸಿಕ ಒತ್ತಡ ನಿರ್ವಹಣೆಗಾಗಿ ಮಾನಸಿಕ ಸಮಾಲೋಚನೆ, ಮಸಾಜ್‌ ಮತ್ತು ಆಕ್ಯುಪಂಕ್ಚರ್‌ ಚಿಕಿತ್ಸೆ  , ಆಹಾರ ಸಮಾಲೋಚನೆ
-ನಿದ್ರಾಹೀನತೆಗಾಗಿ – ಶಿರೋಧಾರ, ಶಿರೋಪಿಚ್ಚು, ತೈಲಧಾರ, ಕ್ಷೀರಧಾರ ಚಿಕಿತ್ಸೆ
-ರೋಗ ನಿರೋಧಕ ಶಕ್ತಿ ವರ್ಧನೆಗೆ ರಸಾಯನ ಚಿಕಿತ್ಸೆ
-ಬೊಜ್ಜು ಕರಗಿಸಲು ಹಾಗೂ ತೂಕ ಇಳಿಕೆಗಾಗಿ- ಉಧ್ವರ್ತನ, ಸ್ನೇಹಪಾನ ಮುಂತಾದ ಚಿಕಿತ್ಸೆ
-ಮಕ್ಕಳ ಕಲಿಕಾ ಮತ್ತು ಇನ್ನಿತರ ಮಾನಸಿಕ ಸಮಸ್ಯೆಗಳಿಗೆ ಹಾಗೂ ಬುದ್ಧಿಮತ್ತೆ ಹೆಚ್ಚಳಕ್ಕಾಗಿ ಮಕ್ಕಳ ಮಾನಸಿಕ ಸಮಾಲೋಚನಾ ಕ್ಲಿನಿಕ್‌
-ಕಣ್ಣು, ಕಿವಿ, ಮೂಗು, ಗಂಟಲು ರೋಗಗಳಿಗೆ ಅಕ್ಷಿತರ್ಪಣ, ಕರ್ಣಪೂರಣ, ನಸ್ಯ ಮುಂತಾದ ಚಿಕಿತ್ಸೆಗಳು
-ರಕ್ತಶುದ್ಧಿಗಾಗಿ – ಹಿಜಾಮಚಿಕಿತ್ಸೆ
-ಕಾಲೋಚಿತ ನಿರ್ವಿಶೀಕರಣಕ್ಕಾಗಿ (seasonal bio purification) ವಸಂತಋತುವಿನಲ್ಲಿ ವಮನ ಚಿಕಿತ್ಸೆ ಮುಂತಾದ ಆಯುರ್ವೇದ ಚಿಕಿತ್ಸೆಗಳು
-ದೈಹಿಕ ಕ್ಷಮತೆ ಮತ್ತು ಮಾನಸಿಕ ಸ್ವಸ್ಥತೆಗಾಗಿ ಯೋಗ ಮತ್ತು ಪ್ರಾಣಾಯಾಮ
-ವಾರ್ಧಕ್ಯ ಸಮಸ್ಯೆಗಳಿಗೆ – ಪುನರುಜ್ಜೀವನ ಚಿಕಿತ್ಸೆ
-ಬಂಜೆತನ ನಿವಾರಣೆಗೆ ಸೂಕ್ತ ಚಿಕಿತ್ಸೆ
-ಮೂಲವ್ಯಾಧಿ, ಫಿಶರ್‌, ಫಿಸ್ತುಲಾಗಳಿಗೆ ಕ್ಷಾರಸೂತ್ರ ಚಿಕಿತ್ಸೆ
-ಸೌಂದರ್ಯ ವರ್ಧಕ ಮತ್ತು ನವ ಯೌವ್ವನಕ್ಕಾಗಿ ಸೂಕ್ತ ಚಿಕಿತ್ಸೆಗಳು
-ನರದೌರ್ಬಲ್ಯ ಮತ್ತು ನರ ಸಂಬಂಧಿ ರೋಗಗಳಿಗೆ ಸೂಕ್ತ ಚಿಕಿತ್ಸೆಗಳು
-ವೆರಿಕೋಸ್‌ ವೆಯ್ನ (varicose vein) ಗಾಗಿ ರಕ್ತಮೋಕ್ಷಣ ಚಿಕಿತ್ಸೆ
-ನೋವಿನ ನಿರ್ವಹಣೆಗೆ ಫಿಸಿಯೋಥೆರಪಿ ಚಿಕಿತ್ಸೆ

ಹೆಚ್ಚಿನ ಮಾಹಿತಿಗಾಗಿ
ಎಸ್‌.ಸಿ.ಎಸ್‌. ಸಮೂಹ ಸಂಸ್ಥೆಗಳು, ಕೆ.ಇ.ಸಿ.ಟಿ. ಟವರ್ಸ್‌, ಅಶೋಕನಗರ, ಮಂಗಳೂರು – 575 006
ಫೋನ್‌: 0824  2454127, 2453582, 2454137 ಮೊಬೈಲ್‌ : 7760607707, 8296170707
ಇಮೈಲ್‌: [email protected] [email protected] Website: www.kectmangalore.com

ಟಾಪ್ ನ್ಯೂಸ್

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ

Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

puttige-6-

Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ

Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.