ಸೆ.29-ಅ.9: ದಸರಾ ಫಲಪುಷ್ಪ ಪ್ರದರ್ಶನ
Team Udayavani, Sep 27, 2019, 5:32 AM IST
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಸೆ.29ರಿಂದ ಅ.9ರ ವರೆಗೆ ಆಯೋಜಿಸಿರುವ “ದಸರಾ ಫಲಪುಷ್ಪ ಪ್ರದರ್ಶನ’ದಲ್ಲಿ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರ 100ನೇ ಜನ್ಮ ಶತಾಬ್ಧ ಸಂಬಂಧದ ಪ್ರದರ್ಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗಾಜಿನ ಮನೆಯಲ್ಲಿ ಹೂವುಗಳಿಂದಲೇ ಜಯಚಾಮರಾಜ ಒಡೆಯರ್ ಪ್ರತಿಮೆ ಮತ್ತು ಗೋಪುರವನ್ನು ನಿರ್ಮಿಸಲಾಗುತ್ತಿದೆ.
ನೆಲಮಟ್ಟದಿಂದ 50 ಅಡಿ ಉದ್ದ, 27 ಅಡಿ ಎತ್ತರವಿರುವ ಮಹಾರಾಜರ ಪ್ರತಿಕೃತಿಯನ್ನು ರಚಿಸಲಾಗುತ್ತಿದ್ದು, 12 ಅಡಿ ವ್ಯಾಸದ ವೃತ್ತ ನಿರ್ಮಿಸಲಾಗುತ್ತಿದೆ. ವಿವಿಧ ಬಣ್ಣದ ಗುಲಾಬಿ ಹೂವುಗಳಿಂದ ಈ ಮಾದರಿಯನ್ನು ಅಲಂಕರಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ರುದ್ರೇಶ್ ತಿಳಿಸಿದರು.
ಚಲನಚಿತ್ರ ನಟರಾದ ಸೃಜನ್ ಲೋಕೇಶ್, ಅಜಯ್ ರಾವ್, ಆದಿತ್ಯ, ರಾಜ್ ವರ್ಧನ್, ಬಾಲು ನಾಗೇಂದ್ರ, ಚೇತನ್ ಚಂದ್ರ, ನಟಿ ಹರಿಪ್ರಿಯಾ ಮತ್ತು ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರು ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ವಯಸ್ಕರಿಗೆ 30 ರೂ., ಮಕ್ಕಳಿಗೆ 15 ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು, ಮಕ್ಕಳ ಆಕರ್ಷಣೆಗಾಗಿ 8 ರಿಂದ 9 ಅಡಿ ಎತ್ತರದ ಎರಡು ಡೊನಾಲ್ಡ್ ಡಕ್ ಪ್ರತಿಕೃತಿ, 15 ಅಡಿ ಎತ್ತರದ ಚಂದ್ರಯಾನ ಪ್ರತಿಕೃತಿ, ಏರ್ ಶೋ ಮಾದರಿಯನ್ನು ನಿರ್ಮಿಸಲಾಗುತ್ತಿದೆ ಎಂದವರು ಫಲಪುಷ್ಪ ಪ್ರದರ್ಶನದ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.