ಲೆಬನಾನ್ ಆಸ್ಪತ್ರೆಯಲ್ಲಿ ಆಮ್ಲಜನಕವೂ ಇಲ್ಲ, ಅರಿವಳಿಕೆಯೂ ಇಲ್ಲ !
Team Udayavani, Jun 20, 2020, 10:25 AM IST
ಬೀರತ್: ಕೋವಿಡ್‌ನಿಂದಾಗಿ ಹಲವು ದೇಶಗಳ ವೈದ್ಯಕೀಯ ಪರಿಸ್ಥಿತಿ ಬಿಗಡಾಯಿಸಿದೆ. ಲೆಬನಾನ್‌ನಲ್ಲಂತೂ ಮತ್ತಷ್ಟು ಬಿಗಡಾಯಿಸಿದ್ದು, ಆಮ್ಲಜನಕವೂ ಇಲ್ಲ, ರೋಗಿಗಳಿಗೆ ಬೇಕಾದ ಅರಿವಳಿಕೆಯೂ ಇಲ್ಲ ಎನ್ನುವಂತಾಗಿದೆ.
ಇಡೀ ಲೆಬನಾನ್‌ಗೆ ಎರಡು ಕಂಪೆನಿಗಳು ಆಮ್ಲಜನಕವನ್ನು ಪೂರೈಸುತ್ತವೆ. ಅವುಗಳು ಆಮ್ಲಜನಕ ನೀಡಿ, ಅದರ ಬದಲಿಗೆ ಡಾಲರ್ ಲೆಕ್ಕದಲ್ಲಿ ನಗದು ಪಡೆಯುತ್ತವೆ. ಆದರೆ ಅವುಗಳ ಪೂರೈಕೆಯಲ್ಲಿ ಏರುಪೇರಾಗಿದೆ. ಹಾಗೆಯೇ ಲೆಬನಾನ್ ಆಸ್ಪತ್ರೆಗೆ ಅನೆಸ್ತೆಟಿಕ್ ಗ್ಯಾಸ್ ಪೂರೈಸುವ ಕಂಪೆನಿಗೆ ನೈಟ್ರಾಸ್ ಆಕ್ಸೆ„ಡ್ ಸರಿಯಾಗಿ ಪೂರೈಕೆಯಾಗದಿರುವುದರಿಂದ ಅರಿವಳಿಕೆ ಉತ್ಪಾದನೆಗೂ ಸಮಸ್ಯೆಯಾಗಿದೆ.
ಅಲ್ಲಿನ ಕೇಂದ್ರೀಯ ಬ್ಯಾಂಕ್ ಹಣ ನೀಡಿಕೆಗೆ ಒಪ್ಪದ ಕಾರಣ ವೈದ್ಯಕೀಯ ಸಲಕರಣೆಗಳು, ಔಷಧ ಇತ್ಯಾದಿಗಳನ್ನು ಆಮದು ಮಾಡಿಕೊಳ್ಳುವ ಕಂಪೆನಿಗಳಿಗೆ ಸಮಸ್ಯೆಯಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ಲೆಬನಾನ್‌ನ ಎಲ್ಲ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ದಾಖಲು ಮಾಡುವುದನ್ನೇ ಕೈಬಿಟ್ಟಿವೆ. ಅಲ್ಲಿ 136 ಖಾಸಗಿ ಆಸ್ಪತ್ರೆಗಳಿದ್ದು, ಇದರಿಂದಾಗಿ ರೋಗಿಗಳು ಸಮಸ್ಯೆಗೊಳಗಾಗಿದ್ದಾರೆ. ಇದರೊಂದಿಗೆ ಖಾಸಗಿ ಆಸ್ಪತ್ರೆಗೆ ಸರಕಾರದ ವತಿಯಿಂದ ತಂದು ದಾಖಲಿಸಿದ ರೋಗಿಗಳ ವೆಚ್ಚಗಳನ್ನೂ ಸರಿಯಾಗಿ ನೀಡಲಾಗುತ್ತಿಲ್ಲ.
ಖಾಸಗಿ ಆಸ್ಪತ್ರೆಗಳಿಗೆ ಸರಕಾರ ಸುಮಾರು 9,880 ಕೋಟಿ ರೂ.ಗಳಷ್ಟು ಹಣವನ್ನು ಬಾಕಿ ಇರಿಸಿಕೊಂಡಿವೆ. 2011ರಿಂದ ಬಿಲ್‌ಗಳು ಬಾಕಿ ಇವೆ. ಸರಕಾರ ಆಮದು ಮಾಡಿದ ಔಷಧದ ಬಿಲ್ಲನ್ನೂ ಪಾವತಿಸಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಮೂಲಗಳು ಹೇಳಿವೆ. ಆದ್ದರಿಂದ ಯುದ್ಧದಿಂದ ತತ್ತರಿಸಿದ ಲೆಬನಾನ್‌ನಲ್ಲಿ ಇದೀಗ ಕೋವಿಡ್ ತಾಂಡವವಾಡುವ ಭೀತಿಯೂ ಕಾಣಿಸಿಕೊಂಡಿದೆ. ಇದೇ ವೇಳೆ ಸರಕಾರ-ಖಾಸಗಿ ಆಸ್ಪತ್ರೆಗಳ ನಡುವಿನ ಪ್ರಕರಣ ಕಾರಣ ರೋಗಿಗಳು ಉತ್ತಮ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.