ಸುಗಂಧ ಸೌಂದರ್ಯ : ಸೀಸನ್ ಗೆ ತಕ್ಕಂತೆ ಪರ್ಫ್ಯೂಮ್
Team Udayavani, Jul 15, 2020, 11:27 AM IST
ಪರ್ಫ್ಯೂಮ್ ಎಂದಾಕ್ಷಣ ಪರಿಮಳವೊಂದು ಘಮ್ಮನೆ ಮೂಗಿಗೆ ಬಡಿದಂತಾಗುತ್ತದೆ ಅಲ್ಲವೇ? ಮೊದಲೆಲ್ಲಾ ಪರ್ಫ್ಯೂಮ್ ಹಾಕುವುದನ್ನು ಶೋಕಿ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗ ಅದು ಎಲ್ಲರೂ ಬಳಸುವ ಸೌಂದರ್ಯ ಸಾಧನಗಳಲ್ಲಿ ಒಂದು ಎನ್ನುವಂತಾಗಿದೆ.
ವ್ಯಕ್ತಿತ್ವದ ಗುರುತು ಕೆಲವರು ವರ್ಷಾನುಗಟ್ಟಲೆ ಒಂದೇ ಬ್ರಾಂಡ್ ಅಥವಾ ಸುಗಂಧವುಳ್ಳ ಪರ್ಫ್ಯೂಮ್ ಬಳಸುತ್ತಾರೆ.
ಹಾಗಿ¨ªಾಗ, ಜನ ಅವರನ್ನು ಅವರ ಪರಿಮಳದಿಂದಲೇ ಗುರುತು ಹಿಡಿಯಬಲ್ಲರು. ಇನ್ನೂ ಕೆಲವರು ಸೀಸನ್‌ಗೆ ತಕ್ಕಂತೆ,
ಉಟ್ಟ ಉಡುಗೆ ಹಾಗೂ ಅವರವರ ಮೂಡ್‌ಗೆ ತಕ್ಕಂತೆ, ಭಿನ್ನ ಭಿನ್ನ ಪ್ರಕಾರದ ಪರ್ಫ್ಯೂಮ್ ಬಳಸುತ್ತಾರೆ.
ಹಣ್ಣಿನ ಸಿಪ್ಪೆಯ ಸುಗಂಧ
ಮೊದಲೆಲ್ಲ ಬರೀ ಹೂವುಗಳ ಸುಗಂಧದಿಂದ ಪರ್ಫ್ಯೂಮ್ ತಯಾರಿಸಲಾಗುತ್ತಿತ್ತು. ಆದರೀಗ, ಸ್ಪೋರ್ಟಿ, ಫ್ರೂಟಿ, ಫ್ರೋರಲ್, ಮಿಸ್ಟ್, ಮೆಂಥಾಲ್, ಮಸ್ಕ್, ಸಿಟ್ರಸ್… ಹೀಗೆ ಹತ್ತು ಹಲವು ಬಗೆಯ ಪರ್ಫ್ಯೂಮ್‌ಗಳು ಚಾಲ್ತಿಯಲ್ಲಿವೆ. ವರ್ಷಗಳು ಕಳೆದಂತೆ ಪ್ರಯೋಗಗಳೂ ಹೆಚ್ಚಾಗುತ್ತಿವೆ. ಲಿಂಬೆ ಹಣ್ಣಿನ ಸಿಪ್ಪೆ, ಕಿತ್ತಳೆ ಹಣ್ಣಿನ ಸಿಪ್ಪೆ, ಸ್ಟ್ರಾಬೆರಿ, ರಸ್ ಬೆರಿ, ಅನಾನಸ್ ಮುಂತಾದ ಹಣ್ಣುಗಳಿಂದಲೂ ಪರ್ಫ್ಯೂಮ್ ತಯಾರಿಸಲಾಗುತ್ತಿದೆ. ಮಾವು, ಹಲಸು, ಕಲ್ಲಂಗಡಿ ಮುಂತಾದ ಹಣ್ಣಿನ ಸುವಾಸನೆಯನ್ನೂ “ಫ್ರೂಟಿ ಪರ್ಫ್ಯೂಮ್’ ಹೆಸರಲ್ಲಿ ಮೈಗೆ ಪೂಸಿಕೊಳ್ಳಬಹುದು! ಇನ್ನು, ಗುಲಾಬಿ, ಲ್ಯಾವೆಂಡರ್, ಮಲ್ಲಿಗೆ, ಸಂಪಿಗೆ ಪರಿಮಳವನ್ನು ಇಷ್ಟಪಡದವರುಂಟೇ?
ಮಸಾಲ ಪರ್ಫ್ಯೂಮ್
ಸಿನಮನ್ ಅಂದರೆ ದಾಲ್ಚಿನಿ ಸುಗಂಧದ ಪರ್ಫ್ಯೂಮ್, ಪೆಪ್ಪರ್‌ಇನ್ಫ್ಯೂಸ್ಡ್ ಇನ್‌ವುಡ್, ಕೇಸರಿ, ಹುಣಸೆಹಣ್ಣು, ಶುಂಠಿ, ಚಕ್ಕೆ, ಲವಂಗ ಮುಂತಾದ ಮಸಾಲ ಪದಾರ್ಥಗಳೂ ಈಗ ಸುಗಂಧದ್ರವ್ಯ ತಯಾರಿಕೆಯಲ್ಲಿ ಬಳಸಲ್ಪಡುತ್ತಿವೆ. ತೆಂಗಿನ
ಸುಗಂಧ, ಶ್ರೀಗಂಧ, ಚಂದನದಂಥ ಕ್ಲಾಸಿಕ್ ಆಯ್ಕೆಗಳು ಇದ್ದೇ ಇವೆ. ಮೂಗು, ಮನಸ್ಸು ಎರಡಕ್ಕೂ ಹಿತ ನೀಲಗಿರಿ ಎಣ್ಣೆ, ರೋಸ್ ಮೇರಿ, ಗ್ರೇಪ್ ಫ್ರೂಟ್, ಪೆಪ್ಪರ್ ಮಿಂಟ್, ಟೀ ಟ್ರೀ, ಸ್ಪಿಯರ್ ಮಿಂಟ್, ಲ್ಯಾಂಗ್ – ಲ್ಯಾಂಗ್ , ಹೋಹೋಬ
ಮುಂತಾದ ಸುಗಂಧಗಳು ಎಸ್ಸೆನ್ಶಿಯಲ್ ಆಯಿಲ್‌ಗಳ ಸಾಲಿಗೆ ಸೇರುತ್ತವೆ. ಒತ್ತಡದಿಂದ ಉಂಟಾಗುವ ಗಾಬರಿ, ನಿದ್ರಾಹೀನತೆ,
ಸುಸ್ತು, ಬಳಲಿಕೆಯನ್ನು ಇವು ಕಡಿಮೆ ಮಾಡಬಲ್ಲವು. ಇಂಥ ಸುಗಂಧಗಳನ್ನು ಮಾರುವ ಅಂಗಡಿ ಗಳಲ್ಲಿ ಅದಕ್ಕಾಗಿಯೇ
ಟೆಸ್ಟರ್‌ಗಳನ್ನು ಇರಿಸಲಾಗುತ್ತದೆ. ಕಾಗದದ ಚೂರಿನ ಮೇಲೆ ಪರ್ಫ್ಯೂಮ್ ಸಿಂಪಡಿಸಿ ಮೂಸಿ ನೋಡಿ, ಅದು ಬೇಕೋ ಬೇಡವೋ
ಅಂತ ಗ್ರಾಹಕರು ನಿರ್ಧರಿಸುತ್ತಾರೆ.
ಸುಗಂಧದ ಥೆರಪಿ
ಕೆಲವರಿಗೆ ಕೆಲವು ಸುಗಂಧಗಳು ತಲೆನೋವು ತರಿಸಬಹುದು. ಅದೇ ಸುಗಂಧ ಬೇರೆಯವರಿಗೆ ಇಷ್ಟ ಆಗಬಹುದು. ಕೆಲವರು ಸ್ಟ್ರಾಂಗ್ ಪರ್ಫ್ಯೂಮ್ ಇಷ್ಟಪಟ್ಟರೆ, ಕೆಲವರಿಗೆ ಮೈಲ್ಡ್ ಪರ್ಫ್ಯೂಮ್ ಇಷ್ಟವಾಗುತ್ತದೆ. ಹಾಗಾಗಿ ಅರೋಮಾ ಥೆರಪಿಗಾಗಿ
ಸುಗಂಧಗಳನ್ನು ಬಳಸಲಾಗುತ್ತದೆ. ಯಾರಿಗೆ ಯಾವ ಸುಗಂಧ ಒಳ್ಳೆಯದು, ಯಾವುದು ಕೆಟ್ಟದ್ದು ಅಥವಾ ಒಳ್ಳೆಯದ್ದಲ್ಲ ಅಂತ
ಪರೀಕ್ಷೆ ಮಾಡಿ ನೋಡುತ್ತಾರೆ. ಯಾವ ಮಾತ್ರೆ, ಮುಲಾಮಿನಿಂದಲೂ ಗುಣವಾಗದ ತಲೆನೋವು ಕೆಲವೊಮ್ಮೆ ಉತ್ತಮ ಸುಗಂಧ ಬಳಸುವುದರಿಂದ ಮಾಯವಾಗುತ್ತದೆ! ಪರ್ಫ್ಯೂಮ್ ಬಳಕೆಯಿಂದ ಕೆಲವರಿಗೆ ಆಗಿರುವ ಲಾಭಗಳಲ್ಲಿ ಇದೂ ಒಂದು.
– ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.