ಭದ್ರತಾ ಉಪಕರಣ ಮಳಿಗೆ: ಮುನ್ನೆಚ್ಚರಿಕೆಗಳೇನು?

ಬದುಕು ಬದಲಾಗಿದೆ ನಾವೂ ಬದಲಾಗೋಣ

Team Udayavani, Jun 13, 2020, 5:44 AM IST

ಭದ್ರತಾ ಉಪಕರಣ ಮಳಿಗೆ: ಮುನ್ನೆಚ್ಚರಿಕೆಗಳೇನು?

ಜನಜೀವನ ಹಿಂದಿನಂತಿಲ್ಲ. ಅದಕ್ಕೆ ತಕ್ಕಂತೆ ಕೆಲವೊಂದು ಅಗತ್ಯತೆಗಳೂ ಹೆಚ್ಚಾಗಿವೆ.ಮಳೆಗಾಲ ಬೇರೆ ಆರಂಭಗೊಂಡಿರುವುದರಿಂದ ನಮ್ಮ ಮನೆ, ಸಂಸ್ಥೆ, ಕೈಗಾರಿಕೆಗಳಲ್ಲಿರುವ ಅಲರಾಂನಿಂದ ಸಿಸಿ ಕೆಮರಾ ವರೆಗಿನ ವಿವಿಧ ರೀತಿಯ ಭದ್ರತಾ ಉಪಕರಣಗಳ ಪರಿಶೀಲನೆ, ಹೊಸತಾಗಿ ಅಳವಡಿಕೆಯತ್ತ ಗಮನ ಹರಿಸುವುದು ಅಗತ್ಯವಾಗಿದೆ. ಕೋವಿಡ್-19 ಕಾಣಿಸಿದ ಬಳಿಕ ಹೆಚ್ಚಿನ ಅಂಗಡಿ, ಸಾರ್ವಜನಿಕ ಪ್ರದೇಶಗಳಲ್ಲಿ, ಸಂಸ್ಥೆಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಎಂಬುದು ಕಡ್ಡಾಯವಾಗಿದೆ. ಅದರಲ್ಲಿಯೂ ಈಗ ಸಾಕಷ್ಟು ಸುಧಾರಣೆಗಳಾಗಿವೆ.ಸ್ವಯಂಚಾಲಿತ ಥರ್ಮಲ್‌ ಸ್ಕ್ರೀನಿಂಗ್‌ ಸಹಿತ ವೀಡಿಯೋ ದಾಖಲೀಕರಣ ವ್ಯವಸ್ಥೆಯೂ ಬಂದಿದೆ. ಇಂತಹ ಉಪಕರಣಗಳ ಖರೀದಿಗಾಗಿ ಭದ್ರತಾ ಸಾಮಗ್ರಿಗಳ ಮಳಿಗೆಗಳಿಗೆ ಹೋಗುವಾಗ ನಾವು ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಲಾಕ್‌ಡೌನ್‌ ತೆರವು ಆಗುತ್ತಿದ್ದಂತೆ ಮಳೆಗಾಲವೂ ಆರಂಭಗೊಂಡಿದೆ. ಈ ಸಮಯದಲ್ಲಿ ಸಂಸ್ಥೆ, ಮನೆಗಳಲ್ಲಿರುವ ಭದ್ರತಾ ಸಲಕರಣೆಗಳ ದುರಸ್ತಿ ಅಥವಾ ಹೊಸತಾಗಿ ಜೋಡಿಸುವ ಕಾರ್ಯವೂ ನಡೆಯುತ್ತಿದೆ. ಇಂತಹ ವಸ್ತುಗಳ ಖರೀದಿ ಸಂದರ್ಭ ಏನೇನು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲಿದೆ ಮಾಹಿತಿ.

ಅಂಗಡಿಗಳಿಗೆ ಬರುವ ಗ್ರಾಹಕರು ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಬೇಕು. ಅದಕ್ಕೆಂದು ಅಂಗಡಿಗಳ ಒಳಗೆ ಆಸನಗಳನ್ನು ನಿರ್ದಿಷ್ಟ ಅಂತರದಲ್ಲಿ ಇರಿಸಲಾಗಿದೆ. ಸ್ಯಾನಿಟೈಸರ್‌ ಬಳಸುವುದು ಎಲ್ಲರಿಗೂ ಕಡ್ಡಾಯ ಮಾಡಲಾಗಿದೆ.

ಇಂಥ ಹೆಚ್ಚಿನ ಮಳಿಗೆಗಳಲ್ಲಿ ಸ್ವಯಂ ಚಾಲಿತ ಥರ್ಮಲ್‌ ಸ್ಕ್ರೀನಿಂಗ್‌ ಸಾಧನ ಇದ್ದು, ಇದು ವ್ಯಕ್ತಿಯ ದೇಹದ ಉಷ್ಣಾಂಶವನ್ನು ನಿಖರವಾಗಿ ಗ್ರಹಿಸುವುದಲ್ಲದೆ ಚಿತ್ರವನ್ನೂ ಸಂಗ್ರಹಿಸುತ್ತದೆ. ಇದರಿಂದ ತಾಪಮಾನದ ಜತೆ ಅಗತ್ಯವಾದಲ್ಲಿ ಮುಂದಕ್ಕೆ ವ್ಯಕ್ತಿಯ ಗುರುತನ್ನೂ ಪತ್ತೆ ಹಚ್ಚಲು ಸಾಧ್ಯ.

ಗ್ರಾಹಕರು ತಮಗೆ ಬೇಕಾದ ವಸ್ತುಗಳ ಕುರಿತು ಫೋನ್‌ನಲ್ಲಿಯೇ ಮಾಹಿತಿ ಪಡೆಯಬಹುದಾಗಿದೆ. ಕೆಲವೆಡೆ ಮನೆ ಮತ್ತು ಸಂಸ್ಥೆಗಳಿಗೆ ಹೋಗಿ ಡೆಮೊ ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮತ್ತು ಅದನ್ನು ಅಳವಡಿಸುವ ವೇಳೆ ಅವರೂ ಸರಕಾರದ ಮಾರ್ಗಸೂಚಿ ಪಾಲಿಸುವರು.

ಭದ್ರತಾ ಉಪಕರಣಗಳ ಅಂಗಡಿಗೆ ಕೂಡ ಹಿರಿಯರು ಮತ್ತು ಮಕ್ಕಳು ಹೋಗದಿರುವುದು ಉತ್ತಮ. ಹಿರಿಯರು ಅಗತ್ಯವೆನಿಸಿದರೆ ಫೋನ್‌ ಮೂಲಕ ವ್ಯವಹರಿಸಬಹುದು. ಜ್ವರ, ಕೆಮ್ಮು, ಶೀತ ಇತ್ಯಾದಿ ಲಕ್ಷಣಗಳಿರುವ ವ್ಯಕ್ತಿಗಳು ಬಂದಲ್ಲಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಂಡು ವ್ಯವಹರಿಸಲಾಗುತ್ತಿದೆ.

ಭದ್ರತಾ ಉಪಕರಣಗಳ ಮಳಿಗೆಗಳಲ್ಲಿ ಕೂಡ ಡಿಜಿಟಲ್‌ ಹಣ ವರ್ಗಾವಣೆ ವ್ಯವಸ್ಥೆ ಬಳಕೆಯಲ್ಲಿದೆ. ಗ್ರಾಹಕರು ಕೂಡ ಕ್ರೆಡಿಟ್‌ ಕಾರ್ಡ್‌, ಕ್ಯೂಆರ್‌ ಕೋಡ್‌ ಬಳಸಿ ಹಣ ಪಾವತಿಸುವಂತೆ ಸೂಚಿಸಲಾಗುತ್ತದೆ. ಇದರಿಂದ ಪರಸ್ಪರ ಸ್ಪರ್ಶ ಬಹುತೇಕ ಕಡಿಮೆಯಾಗುತ್ತದೆ.

ಸಿಸಿ ಕೆಮರಾ ಸಹಿತ ವಿವಿಧ ಉಪಕರಣ ಗುಣಮಟ್ಟ ಪರೀಕ್ಷಿಸುವ ವೇಳೆ ಬರಿ ಕೈಯಿಂದ ಮುಟ್ಟದೆ, ಗ್ಲೌಸ್‌ ಧರಿಸಿ ಪರಿಶೀಲಿಸಿ. ಚಯರ್‌, ಮೇಜು, ಗೋಡೆ, ಇತ್ಯಾದಿಗಳನ್ನು ಮುಟ್ಟದೆ ಇರುವುದು ಒಳ್ಳೆಯದು. ಒಂದು ವೇಳೆ ಸ್ಪರ್ಶಿಸಿದರೂ ಕೂಡಲೇ ಸ್ಯಾನಿಟೈಸರ್‌ ಬಳಸಿ.

ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್‌ ಮಾಡಿ.
9148594259

ಟಾಪ್ ನ್ಯೂಸ್

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.