ಅಕ್ರಮವಾಗಿ ಭಾರತಕ್ಕೆ ಬಂದ ಪಾಕ್ ಪ್ರಜೆ ಸೀಮಾ ಹೈದರ್ ಈಗ ಗರ್ಭಿಣಿ !
Team Udayavani, Jan 3, 2024, 12:20 AM IST
ಲಕ್ನೋ: ಭಾರತಕ್ಕೆ ಆಕ್ರಮವಾಗಿ ಬಂದಿರುವ ಪಾಕಿಸ್ಥಾನಿ ಪ್ರಜೆ ಸೀಮಾ ಹೈದರ್, ಆಕೆಯ ಭಾರತದ ಪತಿ ಸಚಿನ್ ಮೀನಾ ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. “ನಾನು ಗರ್ಭಿಣಿಯಾಗಿ ದ್ದೇನೆ. 2024 ನಮಗೆ ಫಲಪ್ರದವಾಗಲಿದೆ ಎಂದು ಆಶಿಸುತ್ತೇನೆ’ ಎಂದು ಸೀಮಾ ಹೈದರ್ ಹೇಳಿದ್ದಾರೆ.
2019ರಲ್ಲಿ ಪಬ್ಜಿ ಮೂಲಕ ಸೀಮಾಗೆ ಮೊದಲ ಬಾರಿಗೆ ಲಕ್ನೋದ ಸಚಿನ್ ಮೀನಾ ಪರಿಚಯವಾಯಿತು. ಆ ಸಮಯದಲ್ಲೇ ಪಾಕ್ ಪತಿಯೊಂದಿಗೆ ಸೀಮಾಗೆ 4 ಮಕ್ಕಳಿದ್ದರು. 2023ರ ಮಾರ್ಚ್ನಲ್ಲಿ ನೇಪಾಲದಲ್ಲಿ ಸಚಿನ್ ಮತ್ತು ಸೀಮಾ ಭೇಟಿಯಾಗಿ, ಪಶುಪತಿನಾಥ ದೇಗುಲದಲ್ಲಿ ಮದುವೆಯಾದರು. ಅನಂತರ ನೇಪಾಲದ ಮೂಲಕ ಅಕ್ರಮವಾಗಿ ನಾಲ್ವರು ಮಕ್ಕಳೊಂದಿಗೆ ಸೀಮಾ ಭಾರತ ಪ್ರವೇಶಿದರು. ಕಳೆದ ಮೇಯಲ್ಲಿ ನೋಯ್ಡಾದಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ಅನಂತರ ಬಿಡುಗಡೆಗೊಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.