

Team Udayavani, Apr 3, 2021, 12:58 AM IST
ಹೊಸದಿಲ್ಲಿ: ತಮ್ಮ ಪತಿ ರಾಬರ್ಟ್ ವಾದ್ರಾ ಅವರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಚುನಾವಣ ಪ್ರಚಾರಕ್ಕೆ ಧುಮುಕಿದ್ದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸ್ವತಃ ಐಸೋಲೇಶನ್‌ಗೆ ಒಳಗಾಗಿದ್ದಾರೆ.
ಈ ಕುರಿತ ಮಾಹಿತಿಯಿರುವ ವಿಡಿಯೋ ಸಂದೇಶವೊಂದನ್ನು ತಮ್ಮ ಪಕ್ಷದ ಕಾರ್ಯಕರ್ತರಿಗೆ ಅವರು ರವಾನಿಸಿದ್ದು, “ಅದರಲ್ಲಿ ತಾವು ಸ್ವಯಂ ಐಸೋಲೇಶನ್‌ಗೆ ಒಳಗಾದ ಕಾರಣ, ಶುಕ್ರವಾರ, ಶನಿವಾರ ಹಾಗೂ ರವಿವಾರಗಳಂದು ಕ್ರಮವಾಗಿ ಅಸ್ಸಾಂ, ತಮಿಳುನಾಡು ಹಾಗೂ ಕೇರಳದಲ್ಲಿ ನಡೆಯಬೇಕಿದ್ದ ರ್ಯಾಲಿಗಳಲ್ಲಿ ಭಾಗವಹಿ ಸುತ್ತಿಲ್ಲ’ ಎಂದಿದ್ದಾರೆ. ಅಲ್ಲದೆ, “ತಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲ ಕಡೆ ಗೆಲವು ಸಾಧಿಸಲಿ’ ಎಂದೂ ಹಾರೈಸಿದ್ದಾರೆ.
ಶುಕ್ರವಾರದಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ರಾಬರ್ಟ್ ವಾದ್ರಾ ಅವರು, ತಮಗೆ ಕೊರೊನಾ ಪಾಸಿಟಿವ್ ಆಗಿರುವ ಮಾಹಿತಿಯನ್ನು ಹಂಚಿಕೊಂಡಿದ್ದರು.
Delhi: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾಗುಪ್ತ ಆಯ್ಕೆ… ನಾಳೆ(ಫೆ.20) ಪ್ರಮಾಣವಚನ
ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
Racket: ಕಾರವಾರ ನೌಕಾನೆಲೆಯ ಸೂಕ್ಷ್ಮ ಮಾಹಿತಿ ಪಾಕ್ ಗೆ ನೀಡುತ್ತಿದ್ದ ಮತ್ತೋರ್ವನ ಬಂಧನ
Delhi stampede: ರೈಲ್ವೆ ಇಲಾಖೆಗೆ ದೆಹಲಿ ಹೈ ಕೋರ್ಟ್ ತೀವ್ರ ತರಾಟೆ!
Chhaava ಎಫೆಕ್ಟ್:ಸಂಭಾಜಿ ಮಹಾರಾಜ್ ಕುರಿತು ಆಕ್ಷೇಪಾರ್ಹ ಮಾಹಿತಿ: ವಿಕಿಪಿಡಿಯಾಗೆ ನೋಟಿಸ್
You seem to have an Ad Blocker on.
To continue reading, please turn it off or whitelist Udayavani.