Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ
Team Udayavani, May 19, 2024, 1:50 AM IST
ಮಂಗಳೂರು: ಯುವ ಲೇಖಕಿ ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಬೆಂಗಳೂರಿನ ಸ್ವಾಭಿಮಾನಿ ಕರ್ನಾಟಕ ವೇದಿಕೆಯ 2023ನೇ ಸಾಲಿನ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಲಭಿಸಿದೆ.
ಡಾ| ಸಿ. ಸೋಮಶೇಖರ್ ಮತ್ತು ಸರ್ವಮಂಗಳ ದತ್ತಿ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಮೇ 31ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಜರಗಲಿದೆ.
ಡಾ| ಎಚ್.ಎಸ್.ಎಂ. ಪ್ರಕಾಶ್ ಅನುವಾದಿತ ಕೃತಿ “ನಮ್ಮಂಥ ಬಲ್ಲಿದವರು”, ಪ್ರೊ| ಎಚ್.ಟಿ. ಪೋತೆ ಪ್ರವಾಸ ಕಥನ “ಬಾಬಾ ಸಾಹೇಬರ ಲಂಡನ್ ಮನೆಯಲ್ಲಿ’, ಫಾತಿಮಾ ರಲಿಯಾ ಕಥಾ ಸಂಕಲನ “ಒಡೆಯಲಾರದ ಒಡಪು’, ಸಂತೋಷ ನಾಯಕ ಕವನ ಸಂಕಲನ “ಹೊಸ ವಿಳಾಸದ ಹೆಜ್ಜೆಗಳು’ ಆಯ್ಕೆಯಾಗಿವೆ.
ಡಾ| ಸಿ. ಸೋಮಶೇಖರ್ ಮತ್ತು ಸರ್ವಮಂಗಳ ದತ್ತಿ ಪ್ರಶಸ್ತಿಗೆ ಇಂದಿರಾ ಕೃಷ್ಣಪ್ಪ ವ್ಯಕ್ತಿಚಿತ್ರಣ “ಸಾವಿತ್ರಿ ಬಾಪುಲೆ’ ಮತ್ತು ಡಾ| ಎಂ.ಎಸ್. ಮಣಿ ಲೇಖನ ಸಂಕಲನ “ಗವಿಮಾರ್ಗ” ಕೃತಿಗೆ ಲಭಿಸಿದೆ.
ಪ್ರಶಸ್ತಿ ತಲಾ 5 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಕರ್ನಾಟಕ ಲೇಖಕಿ ಸಂಘದ ಅಧ್ಯಕ್ಷ ಎಚ್.ಎಲ್. ಪುಷ್ಪಾ, ಲೇಖಕರಾದ ದ್ವಾರನಕುಂಟೆ ಪಾತಣ್ಣ ಹಾಗೂ ಡಾ| ಸತ್ಯಮಂಗಲ ಮಹಾದೇವ್ ತೀರ್ಪುಗಾರರಾಗಿ ಸಹಕರಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.