Post: ಪೋಸ್ಟಲ್ಲಿ 2 ಸಾವಿರ ನೋಟು ಕಳುಹಿಸಿ
ನಿಮ್ಮ ಬಳಿ 2 ಸಾವಿರ ರೂ. ನೋಟುಗಳಿದ್ದರೆ, ಅವುಗಳನ್ನು ಕಳುಹಿಸಲು 2 ವಿಶೇಷ ವ್ಯವಸ್ಥೆ
Team Udayavani, Nov 2, 2023, 8:34 PM IST
ನಿಮ್ಮಲ್ಲಿ ಇನ್ನೂ 2 ಸಾವಿರ ರೂ. ಮುಖಬೆಲೆಯ ನೋಟುಗಳಿವೆಯೇ? ಅವುಗಳನ್ನು ಠೇವಣಿಯಿಡಲು ಬೆಂಗಳೂರಿನ ಆರ್‌ಬಿಐ ಕಚೇರಿವರೆಗೆ ಬರುವುದೇ ದೊಡ್ಡ ತಲೆನೋವಾಗಿದೆಯೇ? ಅದಕ್ಕಾಗಿ 2 ಅವಕಾಶಗಳನ್ನು ಕಲ್ಪಿಸಿದೆ. ನಿಮ್ಮ ಬಳಿ 2 ಸಾವಿರ ರೂ. ನೋಟುಗಳಿದ್ದರೆ, ಅವುಗಳನ್ನು ಕಳುಹಿಸಲು 2 ವಿಶೇಷ ವ್ಯವಸ್ಥೆಗಳಿವೆ
ಇನ್ಶೂರ್ಡ್ ಪೋಸ್ಟ್ ಮೂಲಕ ಕಳುಹಿಸಿ
– ನೀವು ಇರುವ ಸ್ಥಳದಿಂದಲೇ ವಿಮೆಯಿರುವ ಅಂಚೆಯ(ಇನ್ಶೂರ್ಡ್ ಪೋಸ್ಟ್) ಮೂಲಕ ಆರ್‌ಬಿಐನ ಪ್ರಾದೇಶಿಕ ಕಚೇರಿಗೆ ಕಳುಹಿಸಿ.
– ಅದಕ್ಕಾಗಿ ನಿಮ್ಮಲ್ಲಿರುವ ನೋಟುಗಳು, ನಿಮ್ಮ ವಿವರ (ಬ್ಯಾಂಕ್ ಶಾಖೆ, ಖಾತೆ ಸಂಖ್ಯೆ, ಹೆಸರು) ಗಳನ್ನು ನಮೂದಿಸಬೇಕು.
– ಆರ್‌ಬಿಐ ಪ್ರಾದೇಶಿಕ ಕಚೇರಿಗೆ ನೀವು ಕಳುಹಿಸಿದ ಕವರ್ ತಲುಪಿದ ಕೂಡಲೇ ನಿಮ್ಮ ಖಾತೆಗೆ ಮೊತ್ತ ಜಮೆ
– ಕರ್ನಾಟಕದಲ್ಲಿರುವ ಜನರು ಬೆಂಗಳೂರಿನಲ್ಲಿರುವ ಆರ್‌ಬಿಐ ಕಚೇರಿಗೆ ಕಳುಹಿಸಲು ಅವಕಾಶ
ಆರ್‌ಬಿಐ ಟಿಎಲ್‌ಆರ್ ವ್ಯವಸ್ಥೆ
– ಸಾರ್ವಜನಿಕರಿಗೆ ಟಿಎಲ್‌ಆರ್(ಟ್ರಿಪಲ್ ಲಾಕ್ ರಿಸೆಪ್ರಾಕಲ್) ವ್ಯವಸ್ಥೆ ಮೂಲಕ ಕಳುಹಿಸಲು ಅವಕಾಶ
– ಟಿಎಲ್‌ಆರ್ ಅರ್ಜಿಯನ್ನು ತುಂಬಿ ಮುಚ್ಚಿದ ಲಕೋಟೆಯಲ್ಲಿ ನೋಟುಗಳನ್ನು ಆರ್‌ಬಿಐ ಪ್ರದೇಶಿಕ ಕಚೇರಿಯಲ್ಲಿರುವ ಕೌಂಟರ್ ಸಮೀಪದ ಪೆಟ್ಟಿಗೆಯಲ್ಲಿ ಹಾಕಿ.
– ಪ್ರಾದೇಶಿಕ ಕಚೇರಿ ವತಿಯಿಂದ ನೀವು ಕಳುಹಿಸಿರುವ ಮೊತ್ತವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ.
ಕರ್ನಾಟಕದವರು ಬೆಂಗಳೂರಿಗೆ ಕಳುಹಿಸಿ
ಬ್ಯಾಂಕುಗಳಲ್ಲಿ 2 ಸಾವಿರ ರೂ. ನೋಟುಗಳ ವಿನಿಮಯ, ಠೇವಣಿಗೆ ಆರ್‌ಬಿಐ ನೀಡಿದ್ದ ಗಡುವು ಅ.7ಕ್ಕೆ ಮುಗಿದಿತ್ತು. ಅ.8ರಿಂದ ಬೆಂಗಳೂರು ಸೇರಿದಂತೆ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಮಾತ್ರ ಈ ನೋಟುಗಳ ವಿನಿಮಯ ಮತ್ತು ಠೇವಣಿಗೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ನಾಗರಿಕರು ತಮ್ಮಲ್ಲಿರುವ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು: ದಿ ಆಫೀಸರ್ ಇನ್-ಚಾರ್ಜ್, ಕನ್ಸೂéಮರ್ ಎಜುಕೇಷನ್ ಆ್ಯಂಡ್ ಪ್ರೊಟೆಕ್ಷನ್ ಸೆಲ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 10/3/8, ನೃಪತುಂಗ ರಸ್ತೆ, ಬೆಂಗಳೂರು- 560001.
ಸರತಿಯಲ್ಲಿ ನಿಂತಿದ್ದವರ ವಿಚಾರಣೆ!
2 ಸಾವಿರ ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆಂದು ಭುವನೇಶ್ವರದ ಆರ್‌ಬಿಐ ಕೌಂಟರ್ ಮುಂದೆ ಸರತಿಯಲ್ಲಿ ನಿಂತಿದ್ದವರನ್ನು ಒಡಿಶಾ ಪೊಲೀಸರ ಆರ್ಥಿಕ ಅಪರಾಧಗಳ ಘಟಕ(ಇಒಡಬ್ಲ್ಯು) ವಿಚಾರಣೆ ನಡೆಸಿದ್ದಾರೆ. ಸರತಿಯಲ್ಲಿ ನಿಂತವರು ಇತರರ ಏಜೆಂಟ್‌ಗಳಾಗಿ ಅಲ್ಲಿಗೆ ಬಂದಿದ್ದರೇ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗಿದೆ. ಕೆಲವರು ದಿನಗೂಲಿ ಆಧಾರದಲ್ಲಿ 2 ಸಾವಿರ ರೂ. ನೋಟುಗಳ ವಿನಿಮಯದಲ್ಲಿ ತೊಡಗಿದ್ದಾರೆ. ಆರ್‌ಬಿಐ ಕೌಂಟರ್‌ನಲ್ಲಿ 20 ಸಾವಿರ ರೂ. ಮೊತ್ತದ ನೋಟುಗಳನ್ನು ವಿನಿಮಯ ಮಾಡಿಕೊಂಡರೆ, ಅಂಥವರಿಗೆ ದಿನಕ್ಕೆ 300 ರೂ. ಪಾವತಿಸಲಾಗುತ್ತದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.