ಸೋಂಕು ಪತ್ತೆಗೆ ಸೆನ್ಸಾರ್ ಅಭಿವೃದ್ಧಿ
Team Udayavani, May 10, 2020, 3:31 PM IST
ಅಮೆರಿಕ : ಕೋವಿಡ್-19 ಸೋಂಕು ಹರಡುವಿಕೆ ತಡಗಟ್ಟಲು ಮತ್ತು ಸೋಂಕಿತರನ್ನು ಪತ್ತೆ ಹಚ್ಚಲು ನೆರವಾಗುವಂತಹ ಸೆನ್ಸಾರ್‌ಗಳನ್ನು ಅಭಿವೃದ್ಧಿಪಡಿಸುವಂತೆ ಯುಸ್ ಸೈನ್ಯ ತಂತ್ರಜ್ಞಾನ ಕಂಪನಿಗಳ ಎದುರು ಮನವಿ ಇಟ್ಟಿದ್ದು, ಯೋಜನೆಯ ಒಪ್ಪಂದಕ್ಕೂ ಮುಂದಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಈ ಹಿನ್ನಲೆಯಲ್ಲಿ ಸುಮಾರು 2.5ಕೋಟಿ ಮೊತ್ತವನ್ನು ಈ ಯೋಜನೆಗೆ ಮೀಸಲಿಡಲಾಗಿದೆ. ಲಭ್ಯವಿರುವ ಯಂತ್ರೋಪಕರಣಗಳನ್ನು ಬಳಸಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಸೂಚಿಸಿದೆ. ಯೋಜನೆಗೆ ಸಂಬಂಧಪಟ್ಟಂತೆ ಮಾರ್ಗ ಸೂಚಿಗಳನ್ನು ಈ ವಾರದೊಳಗೆ ಸಲ್ಲಿಸುವಂತೆ ಹೇಳಿದೆ.
ವೇಗವಾಗಿ ಸೋಂಕನ್ನು ಪತ್ತೆ ಹಚ್ಚುವ ಮತ್ತು ಸೋಂಕನ್ನು ದೃಢಪಡಿಸುವ ಅವಶ್ಯಕತೆ ಇದ್ದು, ಅಗತ್ಯವಾಗಿ ಸೋಂಕು ಪ್ರಸರಣ ಮಟ್ಟವನ್ನು ತಡೆಗಟ್ಟಬೇಕಿದೆ. ಅಲ್ಲದೇ ಪ್ರಾರಂಭಿಕ ಮಟ್ಟದಲ್ಲಿಯೇ ಸೋಂಕು ಇರುವುದು ಪತ್ತೆಯಾದರೇ ಹರಡುವಿಕೆಯನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚುವ ಸೋಂಕು ತಂತ್ರಜ್ಞಾನದ ಅವಶ್ಯಕತೆ ಇದೆ ಎಂದು ವೈದ್ಯಕೀಯ ಒಕ್ಕೂಟಕ್ಕೆ ಸೈನ್ಯ ತಿಳಿಸಿದೆ. ಇದರ ಭಾಗವಾಗಿ ಯೋಜನೆ ಜಾರಿಗೆ ಮುಂದಾಗಿದ್ದು, ಸೋಂಕು ಪತ್ತೆ ಹಚ್ಚುವ ಸೆನ್ಸಾರ್‌ಗಳ ತಯಾರಿಕೆ ಶುರುವಾಗಿದೆ. ಇದನ್ನು ಈ ದೇಹದ ಮೇಲೆ ಧರಿಸುವಂತೆ ರೂಪಿಸಲಾಗುತ್ತಿದ್ದು, ವಾಚ್, ಶರ್ಟ್ ಅಥವಾ ಬೆಲ್ಟ್ ಗಳ ಮೇಲೆ ಧರಿಸುವಂತೆ ಸಿದ್ಧಪಡಿಸಲಾಗುತ್ತಿದೆ. ರೋಗ ಲಕ್ಷಣಗಳನ್ನು ಪತ್ತೆ ಹಚ್ಚುವಂತಹ ತಂತ್ರಗಾರಿಕೆಯನ್ನು ಈ ಸೆನ್ಸಾರ್‌ಗಳಲ್ಲಿ ಅಳವಡಿಸಲಾಗುತ್ತದೆ ಎನ್ನಲಾಗುತ್ತಿದೆ. ಸಾರ್ವಜನಿಕ ಸಾರಿಗೆ, ವಿಮಾನ ನಿಲ್ದಾಣಗಳು ಮತ್ತು ಕಟ್ಟಡ ನಿರ್ಮಾಣ ಹಂತದ ಪ್ರದೇಶಗಳಲ್ಲಿ ಹೆಚ್ಚಿನ ಜನ ದಟ್ಟಣೆ ಸೇರಲಿದ್ದು, ಅಂತಹ ಪ್ರದೇಶಗಳಿಗೆ ಇದು ಉಪಯುಕ್ತವಾಗಲಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.