ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ
ಅಕ್ಕಿಗಾಗಿ ನ್ಯಾಯಬೆಲೆ ಅಂಗಡಿಯ ಮುಂದೆ ಗಂಟೆಗಟ್ಟಲೆ ಕಾಯುವ ಸ್ಥಿತಿ!
Team Udayavani, Dec 25, 2021, 6:25 AM IST
ಸಾಂದರ್ಭಿಕ ಚಿತ್ರ
ಬಂಟ್ವಾಳ: ಸರಕಾರ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗಾಗಿ ಉಚಿತ ಅಕ್ಕಿ ವಿತರಣೆ ಮಾಡುತ್ತಿದೆಯಾದರೂ ವಿತರಣೆಯ ಸರ್ವರ್‌ನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸದೆ ಇರುವುದರಿಂದ ಅಕ್ಕಿಗಾಗಿ ನ್ಯಾಯಬೆಲೆ ಅಂಗಡಿಯ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಈ ತಿಂಗಳಲ್ಲಿ ಸರ್ವರ್ ಸಮಸ್ಯೆ ಅತಿಯಾಗಿ ಕಾಡುತ್ತಿದೆ.
ಪಡಿತರ ವಿತರಣೆಯಲ್ಲಿ ಪಾರದರ್ಶಕತೆಯನ್ನು ಸಾಧಿಸುವ ನಿಟ್ಟಿನಲ್ಲಿ ಸರಕಾರ ಬೆರಳಚ್ಚು, ಒಟಿಪಿ ವ್ಯವಸ್ಥೆ ಮಾಡಿದೆ. ಆದರೆ ಸರ್ವರ್ ಸಮಸ್ಯೆಯ ಕಾರಣಕ್ಕೆ ಪಡಿತರ ಪಡೆಯುವವರು ತೊಂದರೆ ಅನುಭವಿಸುವ ಜತೆಗೆ ನ್ಯಾಯಬೆಲೆ ಅಂಗಡಿಯವರಿಗೂ ಸಮಸ್ಯೆಯಾಗುತ್ತಿದೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಕೂಡ ವೇಗವಾಗಿ ಇಲ್ಲದೇ ಇರುವುದರಿಂದ ಪಡಿತರ ವಿತರಣೆಗೆ ಇನ್ನಷ್ಟು ಸಮಸ್ಯೆಯಾಗುತ್ತಿದೆ.
ತಿಂಗಳ 10 ತಾರೀಕಿನ ವೇಳೆಗೆ ನ್ಯಾಯಬೆಲೆ ಅಂಗಡಿಯವರು ವಿತರಣೆ ಪ್ರಾರಂಭಿಸಿ ದರೆ ತಿಂಗಳ ಅಂತ್ಯದೊಳಗೆ ಅದನ್ನು ಪೂರ್ಣ ಗೊಳಿಸ ಬೇಕಾಗುತ್ತದೆ. ಆದರೆ ಸರ್ವರ್ ಸಮಸ್ಯೆಯಿಂದ ವಿತರಣೆ ವಿಳಂಬವಾಗು ವುದು ಒಂದೆಡೆ ಯಾದರೆ, ತಮ್ಮನ್ನು ವಿನಾಃ ಕಾರಣ ಕಾಯಿಸುತ್ತಿದ್ದಾರೆ ಎಂದು ಜನರಿಂದ ಬೈಗುಳ ತಿನ್ನಬೇಕಾದ ಪರಿಸ್ಥಿತಿ ಇದೆ.
ಹೆಚ್ಚಾಗಿ ಪೇಟೆ ಪ್ರದೇಶದಲ್ಲಿಯೇ ಇರುವ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡಿತರ ಸಾಮಗ್ರಿ ಕೊಂಡು ಹೋಗು ವುದಕ್ಕಾಗಿ ಗ್ರಾಮಾಂತರ ಪ್ರದೇಶದವರು ಆಟೋ ರಿಕ್ಷಾ ಮಾಡಿ ಕೊಂಡೇ ಹೋಗುತ್ತಾರೆ. ಆದರೆ ಅಲ್ಲಿಗೆ ಹೋದಾಗ ಸರ್ವರ್‌ಸ್ಲೋ ಇದೆ ಮತ್ತೆ ಬನ್ನಿ, ನಾಳೆಬನ್ನಿ ಎಂಬ ಉತ್ತರ ಬರುತ್ತದೆ. ಇದರಿಂದ ಎರಡೆರಡು ಬಾರಿ ಬಾಡಿಗೆ ಕೊಡಬೇಕಾದ ಸ್ಥಿತಿ ಇರುತ್ತದೆ. ಪಡಿತರ ತರುವುದಕ್ಕಾಗಿಯೇ ಎರಡು ದಿನ ರಜೆ ಮಾಡು ವುದರಿಂದ ಎರಡು ದಿನದ ಕೂಲಿಯೂ ನಷ್ಟವಾಗುತ್ತದೆ. ಹೀಗಿರುವಾಗ ಸರಕಾರದ ಉಚಿತ ಅಕ್ಕಿಯೂ ದುಬಾರಿಯಾಗಿ ಪರಿಣಮಿಸಿದೆ.
ಇದನ್ನೂ ಓದಿ:ರಾಜಸ್ಥಾನ: ಭಾರತೀಯ ವಾಯುಸೇನೆಯ ಮಿಗ್- 21 ವಿಮಾನ ಪತನ, ಪೈಲಟ್ ಸಾವು
ಪ್ರತ್ಯೇಕಗೊಳಿಸುವ ಪ್ರಸ್ತಾವನೆ
ಹೆಚ್ಚಿನ ಇಲಾಖೆಗಳ ಸೌಲಭ್ಯಗಳು ಬಿಪಿಎಲ್ ಕಾರ್ಡ್ ಮೂಲಕವೇ ಸಿಗುವುದರಿಂದ ಅವುಗಳು ಇಲ್ಲಿಂದಲೇ ಮಾಹಿತಿ ಪಡೆಯುವುದರಿಂದ, ಇ-ಕೆವೈಸಿಯೂ ಇರುವುದರಿಂದ ಸರ್ವರ್ ಸ್ಲೋ ಎಂಬ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಕೆಲ ವೊಂದು ಆಯ್ಕೆಗಳನ್ನು ಇಲ್ಲಿಂದ ತೆಗೆದು ಸರ್ವರ್ ವೇಗವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರ ಮಧ್ಯೆ ಪಡಿತರ ವಿತರಣೆಗಾಗಿಯೇ ಪ್ರತ್ಯೇಕ ಸರ್ವರ್‌ನ ಬೇಡಿಕೆಯೂ ಇದ್ದು, ಅದಕ್ಕಾಗಿ ಪ್ರಸ್ತಾವನೆಯನ್ನೂ ಸಿದ್ಧಗೊಳಿಸಲಾಗಿದೆ.
ದ.ಕ. – ಉಡುಪಿ ಎಷ್ಟೆಷ್ಟು.?
ದ.ಕ. ಜಿಲ್ಲೆಯಲ್ಲಿ ಒಟ್ಟು 456 ನ್ಯಾಯಬೆಲೆ ಅಂಗಡಿಗಳಿದ್ದು, ಬಿಪಿಎಲ್ ಹಾಗೂ ಅಂತ್ಯೋದಯದ ಪಡಿತರ ಚೀಟಿಯವರು ಸೇರಿ ಒಟ್ಟು 2,71,206 ಕಾರ್ಡ್ ಹೊಂದಿರುವವರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 295 ನ್ಯಾಯಬೆಲೆ ಅಂಗಡಿಗಳಿದ್ದು, 1,90,000 ಬಿಪಿಎಲ್ ಹಾಗೂ ಅಂತ್ಯೋದಯದ ಪಡಿತರ ಚೀಟಿದಾರರಿದ್ದಾರೆ.
ಲೋಡ್ ಹೆಚ್ಚಾಗಿ ಸಮಸ್ಯೆ
ಹಾಲಿ ಇರುವ ಸರ್ವರ್‌ಗೆ ಲೋಡ್ ಜಾಸ್ತಿಯಾಗಿ ಈ ರೀತಿಯ ತೊಂದರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅದರಲ್ಲಿರುವ ಕೆಲವೊಂದು ಆಯ್ಕೆಗಳನ್ನು ತೆಗೆದು ಹಾಕುವ ಕಾರ್ಯ ಮಾಡಿದ್ದು, ಶೀಘ್ರವೇ ಈ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಇದೆ.
ಮಧುಸೂಧನ್ ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದ.ಕ. ವಿವಿಧ ಇಲಾಖೆಗಳ ಸೌಲಭ್ಯಗಳು ಬಿಪಿಎಲ್ ಕಾರ್ಡ್ ಮೂಲಕ ಸಿಗುತ್ತಿದ್ದು, ಅದರ ಮಾಹಿತಿ ಸರ್ವರ್ ಮೂಲಕ ಪಡೆಯುವುದರಿಂದ ತಾಂತ್ರಿಕ ತೊಂದರೆಯಿಂದ ರೇಶನ್ ವಿತರಣೆಯ ಕಾರ್ಯ ವಿಳಂಬವಾಗುತ್ತದೆ. ರಾಜ್ಯಮಟ್ಟದಲ್ಲೇ ಈ ಸಮಸ್ಯೆ ಇರುವ ಕಾರಣ ಪಡಿತರ ವಿತರಣೆಗಾಗಿ ಪ್ರತ್ಯೇಕ ಸರ್ವರ್ ಕುರಿತು ಪ್ರಸ್ತಾವನೆ ಇದೆ.
-ಮಹಮ್ಮದ್ ಇಸಾಕ್
ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಡುಪಿ
-ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.