ಯಶಸ್ವಿಯಾಗಿ ತೃತೀಯ ವರ್ಷಕ್ಕೆ ಪದಾರ್ಪಣೆಗೈದ ಸೇವಾಸಂಸ್ಥೆ “ಯುವಶಕ್ತಿ ಸೇವಾಪಥ”
Team Udayavani, Jan 2, 2024, 6:11 PM IST
ಮಂಗಳೂರು: ಸೇವಾಸಂಸ್ಥೆ ಯುವಶಕ್ತಿ ಸೇವಾಪಥ ತೃತೀಯ ವರ್ಷಕ್ಕೆ ಯಶಸ್ವಿಯಾಗಿ ಪದಾರ್ಪಣೆಗೈದಿದೆ.
ಅಶಕ್ತರಿಗೆ ನೆರಳಾಗುವ ವೃಕ್ಷದಂತೆ ಕಳೆದ ಎರಡು ವರ್ಷಗಳಲ್ಲಿ 45 ಲಕ್ಷಕ್ಕೂ ಅಧಿಕ ಸೇವಾಧನವನ್ನು ಸಮಾಜಕ್ಕೆ ಅರ್ಪಿಸಿದೆ.
ಧಾರ್ಮಿಕ ಕ್ಷೇತ್ರಗಳ ಸೇವಾನಿಧಿ ಯೋಜನೆ,ತುರ್ತು ಅಪಘಾತ, ನಿಧಿ,ಕಾರ್ಯಕರ್ತರಿಗೆ ಕ್ಷೇಮನಿಧಿ,ಹಾಗೂ ಮಹಾಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವ ಪ್ರಯತ್ನ ಮಾಡುತ್ತಿದೆ.
ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು 5 ಜನ ಫಲಾನುಭವಿಗಳಿಗೆ ಕೂದಲ ಕುಲಾವಿ(ವಿಗ್) ಹಸ್ತಾಂತರಿಸಲಾಗಿದೆ.
ಯುವಶಕ್ತಿ ರಕ್ತನಿಧಿ 10,000 ಯುನಿಟ್ ರಕ್ತ ಪೂರೈಕೆಯ ಸಮೀಪದಲ್ಲಿದ್ದು ಕೆಲವೇ ದಿನಗಳಲ್ಲಿ ಹತ್ತು ಸಾವಿರದ ಗಡಿ ದಾಟಲಿದೆ.
ತೃತೀಯ ವರ್ಷಕ್ಕೆ ಪಾದಾರ್ಪಣೆಯ ಸಂಭ್ರಮವನ್ನು ವಿವಿಧ ಭಾಗಗಳಲ್ಲಿ ಸೇವಾಭಿಯಾನದ ಮೂಲಕ ವಿಶೇಷವಾಗಿ ಆಚರಿಸಲಾಗಿದೆ.
ಸೇವಾಪಥ ಆರಂಭಗೊಂಡ ಭೂಕೈಲಾಸ ಕಾರಿಂಜ ,ಕದ್ರಿ ಕ್ಷೇತ್ರ,ಶ್ರೀ ಕಡೇಶಿವಾಲಯ ದೇಗುಲಗಳಲ್ಲಿ ವಿಶೇಷ ಪೂಜೆಯ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು
ವಿಶೇಷ ಸೇವಾಭಿಯಾನ ನಡೆದಿದ್ದು ವೃದ್ದಾಶ್ರಮ/ಮಕ್ಕಳ ಆಶ್ರಮಗಳಿಗೆ ಆಹಾರ ಪೂರೈಕೆ,ಅಯ್ಯಪ್ಪಾ ವೃತಾಧಾರಿಗಳಿಗೆ ಫಲಾಹಾರ/ಭೋಜನ,ಸಿಗ್ನಲ್ ನಲ್ಲಿರುವ ಪೊಲೀಸರಿಗೆ,ರೈಲ್ವೇ ಸಿಬ್ಬಂದಿಗಳಿಗೆ,ಭದ್ರತಾ ಸಿಬ್ಬಂದಿಗಳಿಗೆ,ಆಸ್ಪತ್ರೆಯ ಸಿಬ್ಬಂದಿಗಳಿಗೆ, ಭಿಕ್ಷುಕರಿಗೆ ಕಾರ್ಮಿಕ ವರ್ಗಕ್ಕೆ ತಂಪುಪಾನೀಯ /ಹಣ್ಣು,ರಸ್ತೆ ಬದಿಯ ನಿರ್ಗತಿಕರಿಗೆ ಆಹಾರ,ಚಳಿಗೆ ಬೆಡ್ ಶೀಟ್,ಕುಕ್ಕೆ ಸುಬ್ರಹ್ಮಣ್ಯದ ಆನೆಗೆ ಹಣ್ಣು ತರಕಾರಿ ,ನೆಟ್ಲ ಕ್ಷೇತ್ರದ ಬಸವನಿಗೆ ಬಾಳೆಗೊನೆ,ಹುರುಳಿ ಸಮರ್ಪಿಸಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಮಂಗಳೂರು,ಪುತ್ತೂರು,ಬೆಂಗಳೂರು,ಮಡಿಕೇರಿ,ಮೂಡಬಿದ್ರೆ,ಬಂಟ್ವಾಳ,ಸುತ್ತಮುತ್ತಲಿನ 26 ಕೇಂದ್ರಗಳಲ್ಲಿ ಸೇವಾಭಿಯಾನ ಯಶಸ್ವಿಯಾಗಿ ನಡೆದಿದ್ದು, ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ಅಭಿಯಾನ ನಡೆಸಲಾಗಿದೆ.
ಫೆಬ್ರವರಿ 2024 ರಲ್ಲಿ ತೃತೀಯ ವಾರ್ಷಿಕ ಸಂಭ್ರಮ ನಡೆಯಲಿದ್ದು ಇನ್ನಷ್ಟು ಸೇವಾಚಟುವಟಿಕೆಗಳಿಗೆ ಆ ವಾರ್ಷಿಕ ಸಂಭ್ರಮ ಸಾಕ್ಷಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.