ಅಪಘಾತಕ್ಕೆ ಬಾಯ್ದೆರೆದಂತಿದೆ ಮುಚ್ಚದ ಚರಂಡಿ
ನಾವುಂದ ಅಂಡರ್‌ಪಾಸ್‌ನ ಸರ್ವಿಸ್ ರಸ್ತೆ
Team Udayavani, Feb 17, 2022, 5:05 AM IST
ಮರವಂತೆ: ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ನಾವುಂದ ಅಂಡರ್‌ಪಾಸ್ ಬಳಿಯ ಎರಡೂ ಕಡೆಗಳ ಸರ್ವಿಸ್ ರಸ್ತೆಯ ಹಲವೆಡೆಗಳಲ್ಲಿ ಚರಂಡಿಯನ್ನು ಮುಚ್ಚದೆ ಹಾಗೇ ಬಿಟ್ಟಿದ್ದು, ಇದು ಅಪಘಾತವನ್ನು ಆಹ್ವಾನಿಸುವಂತಿದೆ.
ಕುಂದಾಪುರ – ಬೈಂದೂರು ಹೆದ್ದಾರಿಯ ಅರೆಬರೆ ಕಾಮಗಾರಿಯ ಅವ್ಯವಸ್ಥೆಯು ಸಾರ್ವಜನಿಕರಿಗೆ ನಿತ್ಯ ಮುಗಿಯದ ಗೋಳಾಗಿ ಪರಿಣಮಿ ಸಿದೆ. ಸಂಗಮ್ ಬಳಿಯಿಂದ ಆರಂಭಿಸಿ, ತಲ್ಲೂರು, ಹೆಮ್ಮಾಡಿಯಾಗಿ ಬೈಂದೂರು, ಶಿರೂರುವರೆಗಿನ ಅಧ್ವಾನ ಮಾರಕವಾದಂತಿದೆ.
ಅಪಘಾತ ತಾಣ
ಹೆದ್ದಾರಿ ಹಾದು ಹೋಗುವ ನಾವುಂದ ದಲ್ಲಿ ಅಂಡರ್‌ಪಾಸ್ ನಿರ್ಮಿಸಿದ್ದು, ಎರಡೂ ಕಡೆಗಳಲ್ಲಿಯೂ ಸರ್ವಿಸ್ ರಸ್ತೆ ಆಗಿದೆ. ಆದರೆ ಚರಂಡಿ ಕಾಮಗಾರಿ ಮಾತ್ರ ಅರೆಬರೆಯಾಗಿದೆ. ಎರಡೂ ಕಡೆಯ ಸರ್ವಿಸ್ ರಸ್ತೆಗಳಲ್ಲಿಯೂ ಚರಂಡಿ ನಿರ್ಮಿಸಿದ್ದು, ಆದರೆ ಚರಂಡಿಯನ್ನು ಸರಿಯಾಗಿ ಮುಚ್ಚದೇ, 4-5 ಕಡೆಗಳಲ್ಲಿ ಹಾಗೇ ಬಾಕಿ ಬಿಟ್ಟಿದ್ದು, ಇಲ್ಲಿ ರಾತ್ರಿ ವೇಳೆ ತಿಳಿಯದೇ ಬೈಕ್ ಸವಾರರು ಬಿದ್ದ ನಿದರ್ಶನವು ಇದೆ. ಅದರಲ್ಲೂ ಪ್ರಮುಖವಾಗಿ ಅಂಡರ್‌ಪಾಸ್ ಬಳಿಯ ಪೆಟ್ರೋಲ್ ಬಂಕ್ ಬಳಿಯ ಚರಂಡಿ ಮುಚ್ಚದೆ ಇರುವುದು, ಅಪಾಯವನ್ನು ಆಹ್ವಾನಿಸುವಂತಿದೆ. ಇನ್ನು ಉರ್ದು ಶಾಲೆಗೆ ಹೋಗುವಲ್ಲಿಯೂ ಸಹ ಚರಂಡಿ ಮುಚ್ಚದೇ ಅಪಘಾತಕ್ಕೆ ರಹದಾರಿಯಾದಂತಿದೆ.
ಮನವಿಗೆ ಸ್ಪಂದನೆಯೇ ಇಲ್ಲ
ಈ ಚರಂಡಿಯನ್ನು ಮುಚ್ಚದೆ ಇರುವ ಬಗ್ಗೆ ನಾವುಂದ ಗ್ರಾಮ ಪಂಚಾಯತ್‌ನಿಂದ ಅನೇಕ ಬಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿಯ ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಈ ಬಗ್ಗೆ ಯಾರೂ ಸಹ ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನೇ ಮಾಡಿಲ್ಲ. ಸಾರ್ವಜನಿಕರಿಂದಲೂ ಅನೇಕ ಬಾರಿ ಈ ಬಗ್ಗೆ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ.
ಮುಚ್ಚಲು ಆಗ್ರಹ
ನಾವುಂದ ಅಂಡರ್‌ಪಾಸ್ ಬಳಿಯ ಎರಡೂ ಬದಿಯ ಸರ್ವಿಸ್ ರಸ್ತೆಗೆ ತಾಗಿಕೊಂಡಿರುವ ಚರಂಡಿಯನ್ನು ಮುಚ್ಚದೇ ಸಮಸ್ಯೆಯಾಗುತ್ತಿದ್ದು, ಗೊತ್ತಿಲ್ಲದೆ ಬಿದ್ದರೆ ಪ್ರಾಣ ಭೀತಿಯು ಎದುರಾಗಬಹುದು. ಆದ್ದರಿಂದ ಕೂಡಲೇ ತೆರೆದ ಚರಂಡಿಯನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅನೇಕ ಬಾರಿ ಮನವಿ
ನಾವು ಗ್ರಾಮ ಪಂಚಾಯತ್ ವತಿಯಿಂದ ಚರಂಡಿ ಮುಚ್ಚದೇ ಬಾಕಿ ಇರುವ ಕಡೆಗಳಲ್ಲ ಮುಚ್ಚುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಇದಲ್ಲದೆ ಪಂಚಾಯತ್ ವ್ಯಾಪ್ತಿಯಲ್ಲಿ ಹೆದ್ದಾರಿಯ ಅನೇಕ ಸಮಸ್ಯೆ ಬಗೆಹರಿಸುವಂತೆಯೂ ಸಂಬಂಧಪಟ್ಟವರಿಗೂ ಗಮನಕ್ಕೆ ತರಲಾಗಿದೆ. ಈಗ ಮತ್ತೆ ಈ ಬಗ್ಗೆ ಪಂಚಾಯತ್‌ನಿಂದ ಮನವಿ ಸಲ್ಲಿಸಲಾಗುವುದು.
-ಜಾನಕಿ ಮೊಗವೀರ, ಅಧ್ಯಕ್ಷರು,
ನಾವುಂದ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.