ನಾವು ಮರೆತ ಆಟ ಲಗೋರಿ, ಆಡೋಕ್ಕೆ ಮಜಾರೀ…
Team Udayavani, Jul 14, 2020, 2:39 PM IST
ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ಆಟಗಳಲ್ಲಿ ಲಗೋರಿಯೂ ಒಂದು. 4 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಹುಡುಗರು ಈ ಆಟವನ್ನು ಆಡಬಹುದು. ಈ ಆಟಕ್ಕೆ ಸಮಯದ ಮಿತಿ ಇಲ್ಲ. ಎಷ್ಟು ಹೊತ್ತು ಬೇಕಾದರೂ ಆಡಬಹುದು. ಕರ್ನಾಟಕದಲ್ಲಿ ಲಗೋರಿ, ಡಿಕೋರಿ ಎಂಬುದಾಗಿ, ಆಂಧ್ರಪ್ರದೇಶದಲ್ಲಿ ಲಿಂಗೋಚ್, ತಮಿಳುನಾಡಿನಲ್ಲಿ ಅಡಿಕ ಆಟಂ ಮತ್ತು ಮಹಾರಾಷ್ಟ್ರದಲ್ಲಿ ಲಿಂಗೋರಚ್ಯ ಎಂದು ಈ ಆಟಕ್ಕೆ ಹೆಸರಿದೆ.
ಆಟದ ಸಾಮಗ್ರಿಗಳು: ಈ ಆಟವನ್ನು ಆಡಲು ಬೇಕಾಗಿರುವುದು ಒಂದು ಸಮತಟ್ಟಾದ ಮೈದಾನ ಹಾಗೂ 7 ಅಥವಾ 5 ಲಗೋರಿ ಕಾಯಿಗಳು. ಈಗ ಲಗೋರಿ ಕಾಯಿಗಳು ಕಣ್ಮರೆಯಾಗಿದ್ದು, ಅದರ ಬದಲು 7 ಸಮತಟ್ಟಾದ ಚಪ್ಪಟೆ ಆಕಾರದ ಕಲ್ಲುಗಳನ್ನು ಬಳಸಲಾಗುತ್ತದೆ. ಲಗೋರಿಯನ್ನು ಉರುಳಿಸಲು ಒಂಡು ರಬ್ಬರ್ ಚೆಂಡು ಬೇಕು.
ಆಡುವ ವಿಧಾನ
ಎರಡು ತಂಡಗಳನ್ನು ಹುಡುಗರು ರಚಿಸಿಕೊಳ್ಳುತ್ತಾರೆ. ಪ್ರತಿ ತಂಡಕ್ಕೂ ಒಬ್ಬ ನಾಯಕನಿರುತ್ತಾರೆ. ತಂಡದ ನಾಯಕರಿಬ್ಬರು ಸೇರಿ ಟಾಸ್ ಹಾಕಿ, ಯಾರು ಮೊದಲು ಲಗೋರಿ ಉರುಳಿಸಬಹುದು ಎಂದು ನಿರ್ಧರಿಸು ತ್ತಾರೆ. ನಂತರ ನೆಲದಲ್ಲಿ ವೃತ್ತಾಕಾರದ ಗೆರೆ ಕೊರೆದು ಅದರಲ್ಲಿ 7 ಲಗೋರಿ ಕಾಯಿ ಅಥವಾ ಕಲ್ಲಿನ ಸಣ್ಣ ಚಪ್ಪಡಿಗಳನ್ನು ಒಂದರ ಮೇಲೊಂದರಂತೆ ಜೋಡಿಸುತ್ತಾರೆ. ಹೀಗೆ ಜೋಡಿಸಿದ ಕಲ್ಲಿನಿಂದ ಸ್ವಲ್ಪ ದೂರದಲ್ಲಿ ಒಂದು ಗೆರೆಯನ್ನು ಎಳೆಯಬೇಕು. ಆ ಸ್ಥಳದಲ್ಲಿ ನಿಂತು ಚೆಂಡಿನಿಂದ ಲಗೋರಿ
ಕಾಯಿಗಳಿಗೆ ಹೊಡೆಯಬೇಕು.
ಪ್ರತಿಯೊಬ್ಬ ಆಟಗಾರನಿಗೂ ಲಗೋರಿ ಉರುಳಿಸಲು 3 ಅವಕಾಶವಿರುತ್ತದೆ. ಈ 3 ಎಸೆತದಲ್ಲಿ ಲಗೋರಿ ಉರುಳಿಸಲು ವಿಫಲವಾದರೆ, ಅದೇ ತಂಡದ ಮತ್ತೂಬ್ಬನಿಗೆ ಆಡುವ ಅವಕಾಶ. ಲಗೋರಿ ಬೀಳಿಸಲು ಚೆಂಡನ್ನು ಎಸೆದಾಗ ಆ ಚೆಂಡು ಲಗೋರಿ ಉರುಳಿಸದೇ ನೆಲದಿಂದ ಪುಟಿದಾಗ, ಎದುರಾಳಿ ತಂಡದವರು ಅದನ್ನು ಕ್ಯಾಚ್ ಹಿಡಿದರೆ, ಆಗ ಚೆಂಡನ್ನು ಎಸೆದ ಆಟಗಾರ ಆಟದಿಂದ ಹೊರಕ್ಕೆ. ಆಗಲೂ ಅದೇ ತಂಡದ ಮುಂದಿನವನಿಗೆ ಆಡುವ ಅವಕಾಶ ಸಿಗುತ್ತದೆ. ಎದುರಾಳಿ ತಂಡದವರು ಎಸೆದ ಚೆಂಡನ್ನು ಬೆನ್ನಿಗೆ ತಾಗಿಸಿಕೊಳ್ಳದೇ ಲಗೋರಿಗಳನ್ನು ಮತ್ತೆ ಒಂದರ ಮೋಲೊಂದರಂತೆ ಜೋಡಿಸಿದರೆ, ಅವರಿಗೆ 1 ಅಂಕ. ಹೀಗೆ ಆಟ ಮುಂದುವರಿಯುತ್ತದೆ. ದೈಹಿಕ ವ್ಯಾಯಾಮ ಹಾಗೂ ಏಕಾಗ್ರತೆ ಹೆಚ್ಚಿಸಲು ಸಹಾಯವಾಗಿದ್ದ ಈ ಕ್ರೀಡೆ, ಇತ್ತೀಚೆಗೆ
ಮರೆಯಾಗುತ್ತಿದೆ.
ಪ್ರಕಾಶ್.ಕೆ. ನಾಡಿಗ್, ಶಿವಮೊಗ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.