ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗದು ಇಎಸ್ ಝೆಡ್!
Team Udayavani, Aug 10, 2020, 11:39 AM IST
ಪರಿಸರ ಸೂಕ್ಷ್ಮ ವಲಯದ (ಇಎಸ್ ಝೆಡ್) ವ್ಯಾಪ್ತಿಯಲ್ಲಿ ಜಾರಿಗೊಳ್ಳುವ ರೈಲ್ವೇ ಯೋಜನೆಗಳು, 20,000 ಚದರಡಿಯ ವ್ಯಾಪ್ತಿಯಲ್ಲಿನ ಸಣ್ಣ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳು ಹಾಗೂ 25 ಮೆ. ವ್ಯಾಟ್ ಸಾಮರ್ಥಯದ ಜಲವಿದ್ಯುದಾಗಾರಗಳನ್ನು ನಿರ್ಮಿಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿ(ಎನ್‌ಬಿಡಬ್ಲ್ಯೂ ಎಲ್)ಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲವೆಂದು ಕೇಂದ್ರ ಪರಿಸರ ಸಚಿವಾಲಯ ಪ್ರಕಟಿಸಿದೆ. ಈ ಕುರಿತಂತೆ, ಜುಲೈ 16 ಹಾಗೂ 24ರಂದು ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವಾಲಯ ಪತ್ರ ಬರೆದಿದೆ.
ಹಿಂದಿನ ನಿಯಮವೇನಿತ್ತು?
2011ರಲ್ಲಿ ಕೇಂದ್ರ ಪರಿಸರ ಇಲಾಖೆಯಿಂದ ಪ್ರಕಟವಾಗಿದ್ದ ನಿಯಮಾವಳಿಗಳ ಪ್ರಕಾರ, ಇಎಸ್ ಝೆಡ್ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಬಫರ್ ವಲಯಗಳೆಂದು ಗುರುತಿಸಲಾಗಿತ್ತು. ಆ ವಲಯಗಳಲ್ಲೂ ವನ್ಯಜೀವಿಗಳ ಸಂರಕ್ಷಣೆಗೆ ಒತ್ತು ಕೊಡಬೇಕೆಂದು ಸೂಚಿಸಲಾಗಿತ್ತು. ಅದಕ್ಕೂ ಮುನ್ನ 2002ರಲ್ಲಿ ಪ್ರಕಟಿಸಲಾಗಿದ್ದ ವನ್ಯಜೀವಿ ಸಂರಕ್ಷಣ ನಿಯಮಾಳಿಗಳಲ್ಲಿಯೂ ಇಎಸ್ ಝೆಡ್ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಬಫರ್ ವಲಯವೆಂದು ಗುರುತಿಸುವಂತೆ ಸೂಚಿಸಲಾಗಿತ್ತು. 2006ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿ, 2002ರ ವನ್ಯಜೀವಿ ಸಂರಕ್ಷಣ ನಿಯಮಾವಳಿಗಳನ್ನು ಎಲ್ಲಾ ರಾಜ್ಯಗಳೂ, ಕೇಂದ್ರಾಡಳಿತ ಪ್ರದೇಶಗಳು ಕಡ್ಡಾಯವಾಗಿ ಅನುಸರಿಸಬೇಕೆಂದು ಸೂಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.