SRK: “ಬಾಲಿವುಡ್ ಹಾಳಾಗಲು ಶಾರುಖ್ ಕಾರಣ”: ವಿವೇಕ್ ಅಗ್ನಿಹೋತ್ರಿ
Team Udayavani, Aug 19, 2023, 6:47 AM IST
ನವದೆಹಲಿ: ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಸಿನಿರಂಗದಲ್ಲಿ ವಿಪರೀತ ರಾಜಕೀಯ ಮಾಡುತ್ತಾರೆ. ಬಾಲಿವುಡ್ ಹಾಳಾಗಲು ಅವರೇ ಕಾರಣವೆಂದು ದಿ -ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನೂ ಕೂಡ ಶಾರುಖ್ ಅವರ ಅಭಿಮಾನಿ.
ಅವರ ವರ್ಚಸ್ಸೇ ಬೇರೆ ಎಂದವರಲ್ಲಿ ನಾನೂ ಒಬ್ಬ, ಆದರೆ ಶಾರುಖ್ ಅವರ ಸಿನಿ ರಾಜಕೀಯವನ್ನು ಒಪ್ಪಲು ಸಾಧ್ಯವೇ ಇಲ್ಲ. ಬಾಲಿವುಡ್ ಎಂದರೆ ಬರೀ ಗ್ಲಾಮರ್, ಸ್ಟಾರ್ಡಂ, ಹೈಪ್, ಪಬ್ಲಿಸಿಟಿ ಎನ್ನುವಂಥಾಗಲು ಅವರೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. ಅಲ್ಲದೇ, ಶಾರುಖ್ ಜನರನ್ನು ಮೂರ್ಖರು ಎನ್ನುವಂತೆ ಭಾವಿಸಿದ್ದಾರೆ. ಆದರೆ ನಾನು ಹಾಗಲ್ಲ. ಅವರ ಸಿನಿಮಾಗಳು ಗೆದ್ದರೆ ಅದು ಅವರದ್ದೇ ಸಿನಿಮಾ, ನನ್ನ ಸಿನಿಮಾಗಳು ಗೆದ್ದರೆ ಅದು ಜನರ ಸಿನಿಮಾ.
ನಾನು ಶಾರುಖ್ ಉತ್ತರ ಮತ್ತು ದಕ್ಷಿಣ ಧ್ರುವಗಳಿದ್ದಂತೆ ಎಂದಿದ್ದಾರೆ. ಇನ್ನು ಮುಂದೆ ಎಂದಾದರೂ ಒಟ್ಟಿಗೆ ಕೆಲಸ ಮಾಡುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ, ನನ್ನ ಸಿನಿಮಾದಲ್ಲಿ ಬರೆಹಗಾರ ಮತ್ತು ನಿರ್ದೇಶಕರೇ ಮುಂಚೂಣಿಯಲ್ಲಿರುತ್ತಾರೆ. ಅದನ್ನು ಅವರು ಒಪ್ಪಿದರೆ ನನಗೆ ಸಮಸ್ಯೆ ಇಲ್ಲ, ಇಲ್ಲದಿದ್ದರೆ ನನ್ನನ್ನು ಮೂಲೆಗುಂಪು ಮಾಡುವ ಯಾರೊಂದಿಗೂ ನಾನು ಕೆಲಸ ಮಾಡಲ್ಲ ಎಂದೂ ಅಗ್ನಿಹೋತ್ರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.