KSRTC: ವಿಪಕ್ಷಗಳಿಂದ ಶಕ್ತಿ ಯೋಜನೆ ಹಾಳು ಮಾಡುವ ಕಾರ್ಯ: ರಾಮಲಿಂಗಾರೆಡ್ಡಿ
Team Udayavani, Aug 23, 2023, 9:24 PM IST
ದಾವಣಗೆರೆ: ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗೆ ನಷ್ಟ ಆಗುವುದಿಲ್ಲ. ಒಂದರೆಡು ಮಾರ್ಗದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆಗಿರಬಹುದು. ವಿಪಕ್ಷಗಳು ಅದನ್ನೇ ದೊಡ್ಡದ್ದಾಗಿ ಮಾಡುವ ಮೂಲಕ ಶಕ್ತಿ ಯೋಜನೆಯನ್ನೇ ಹಾಳು ಮಾಡುವ ಕೆಲಸ ಮಾಡುತ್ತಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ದೂರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಶಕ್ತಿ ಯೋಜನೆ ಆರಂಭದ ನಂತರ 43 ಕೋಟಿಯಷ್ಟು ಮಹಿಳೆಯರು ಪ್ರಯಾಣಿಸಿದ್ದಾರೆ. ಸಾವಿರಾರು ಕೋಟಿ ಮೊತ್ತದ ಟಿಕೆಟ್ ವಿತರಣೆ ಮಾಡಲಾಗಿದೆ. ಮಹಿಳೆಯರಿಂದಲೇ ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯದಲ್ಲಿ ದಿನಕ್ಕೆ 1.56 ಲಕ್ಷದಷ್ಟು ಶೆಡ್ನೂಲ್ ಇದೆ. ಅದರಲ್ಲಿ ಒಂದೆರಡು ಮಾರ್ಗದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆಗಿರಬಹುದು. ವಿಪಕ್ಷಗಳು ಅದನ್ನೇ ದೊಡ್ಡದಾಗಿ ಮಾಡುವ ಮೂಲಕ ಶಕ್ತಿ ಯೋಜನೆಯನ್ನೇ ಮುರಿಯುವ ಕೆಲಸ ಮಾಡುತ್ತಿವೆ. ಶಕ್ತಿ ಯೋಜನೆ ಪ್ರಾರಂಭದಲ್ಲಿ ಬಸ್‌ಗಳಿಗೆ ಡೀಸೆಲ್‌ಗೂ ಇಲ್ಲದಂತಾಗಿ, ಎಲ್ಲೆಂದರಲ್ಲಿ ಬಸ್ ನಿಲ್ಲಲಿವೆ ಎಂದು ಟೀಕೆ ಮಾಡಿದರು.
ಯೋಜನೆಯ ಯಶಸ್ಸಿನಿಂದ ಹತಾಶರಾಗಿ ವಿಪಕ್ಷಗಳಿಗೆ ಬೇಕಾದಂತಹ ಸಾಮಾಜಿಕ ಜಾಲತಾಣಗಳ ಮೂಲಕ ಶಕ್ತಿ ಯೋಜನೆಯ ವಿರುದ್ಧ ಅಪಪ್ರಚಾರ ನಡೆಸಿದರು. ಶಕ್ತಿ ಯೋಜನೆಯಡಿ ಜೂನ್‌ನಲ್ಲಿ ಶೇ.80ರಷ್ಟು ಹಣ ಸಂದಾಯವಾಗಿದೆ. ಜುಲೈನಲ್ಲಿ 293 ಕೋಟಿ ಬಂದಿದೆ. ಇನ್ನೂ ಹಣ ಬರಬೇಕಿದೆ. ನಾಲ್ಕು ವಿಭಾಗದಿಂದ ಡೇಟಾ ನೀಡಿದ ತಕ್ಷಣವೇ ಹಣ ಬಿಡುಗಡೆ ಆಗುತ್ತದೆ. ಶಕ್ತಿ ಯೋಜನೆಗಾಗಿಯೇ 1700 ಕೋಟಿ ಮೀಸಲಿಡಲಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.