ದಾರಿ ತೋರಿಸಿದ ದೇವತೆ


Team Udayavani, Mar 21, 2021, 7:47 PM IST

The way

ಹೆಲೋ…ಏನು ಮಾಡಬೇಕೆಂದು ತೋಚುತ್ತಿಲ್ಲ? ನಿನ್ನನ್ನು ಭೇಟಿ ಮಾಡಬೇಕು ಸುನೀತಾ. ಯಾಕೆ ಏನಾಯ್ತು? ನಿನಗೆ ಏನಾದ್ರೂ ತೊಂದರೆ ಆಗಿದ್ದೀಯಾ? ಏನು ಇಲ್ಲ ಅನು. ನೀನು ಎಲ್ಲಿ ಇದ್ದಿಯಾ. ನಾನು ಮನೆಯಲ್ಲಿ ಇದ್ದೀನಿ. ಹೌದಾ… ಆಯ್ತು ನಮ್ಮೂರ ದೇವಸ್ಥಾನದ ಬಳಿ ಬೇಗ ಬಾ ಸರಿನಾ. ನಾನು ಅಲ್ಲಿಗೆ ಬರುತ್ತೀನಿ ಎಂದು ಕಾಲ್‌ ಕಟ್‌ ಮಾಡಿದ್ಲು.

ದೇವಸ್ಥಾನದ ಹತ್ತಿರಕ್ಕೆ ಹೇಳಿದ ಸಮಯಕ್ಕಿಂತ ಹತ್ತು ನಿಮಿಷ ಬೇಗ ಬಂದು ಕಾಯ್ತಾ ಇದ್ದೀನಿ ಸುನೀತಾ.ಯಾಕೆ? ತಡವಾಗಿ ಬಂದೆ. ಸ್ವಲ್ಪ ಕೆಲಸ ಇತ್ತು ಅದಕ್ಕೆ ತಡವಾಯಿತ್ತು. ಸರಿ…ಆವಾಗಲೇ ಕಾಲ್‌ ಮಾಡಿ ಯಾಕೆ ಬರಬೇಕು ಅಂತ ಹೇಳಿದ್ದು ಅದನ್ನು ಮೊದಲು ಹೇಳು ಸುನೀತಾ. ಸ್ವಲ್ಪ ಮನೆಯಲ್ಲಿ ಗಲಾಟೆ ಅಷ್ಟೆ. ಮತ್ತೆ ಇನ್ನೇನು ಇಲ್ಲ ಅನು.

ಹೌದಾ…! ಏನು ಗಲಾಟೆ ಮನೆಯಲ್ಲಿ. ನಾನು ಓದಿದ್ದು ಸಾಕಂತೆ. ಮದುವೆ ಆಗಬೇಕು ಅಂತ ಅಪ್ಪ ಗಲಾಟೆ ಮಾಡುತ್ತಿದ್ದರೆ. ಅದಕ್ಕೆ ನಾನು ಇಲ್ಲ ಅಪ್ಪ ಓದಬೇಕು. ಅದು ನನ್ನ ಕನಸು ಎಂದು ಬಿಡಿಸಿ ಹೇಳಿದ್ದೆ .ಆದರೇ ಅಪ್ಪ ನನ್ನ ಮಾತು ಕೇಳ್ಳೋದ್ದಕ್ಕೆ ತಯಾರಿಲ್ಲ. ಹೆಣ್ಣು ಮಕ್ಕಳು “ಎಷ್ಟೇ ಓದಿದ್ದರೂ ವಲೆ ಊದುವುದು ತಪ್ಪುತ್ತ ಹೇಳು’ ಇಲ್ಲ ಅಲ್ಲವೇ ಅದಕ್ಕೆ ಹೇಳಿದ್ದು ಮದುವೆ ಆಗೂ ಅಂತ ಅಂತ ಅಪ್ಪ ಹೇಳುತ್ತಿದ್ದಾರೆ.

ಇಷ್ಟೊಂದು ನೋವು ಇಟ್ಟುಕೊಂಡು ಯಾಕೆ ನನಗೆ ಹೇಳಿಲ್ಲ ನೀನು. ಕ್ಷಮೆಯಿರಲಿ ಅನು. ನೀನು ನಿನ್ನ ಅಣ್ಣನ ಮದುವೆಯಲ್ಲಿ ಬ್ಯುಸಿ ಅದಕ್ಕೆ ನಾನು ಹೇಳಿಲ್ಲ . ನನ್ನಿಂದ ಯಾಕೆ ಅವಳಿಗೆ ಈ ಸಮಯದಲ್ಲಿ ತೊಂದರೆ ಕೊಡುವುದು ಅಂತ ಸುಮ್ಮನಾದೆ ಅನು.

ಇದ್ರಲ್ಲಿ ತೊಂದರೆ ಏನು ಬಂತು ನಿನ್ನ ಕಷ್ಟ , ನೋವು ಬಂದರೆ ನನಗೆ ಬಂದಾಗೆ ಅಲ್ಲವೇ? ಇನ್ನೂ ಯಾವತ್ತೂ ಕೂಡ ಹೀಗೆ ಮಾಡಬೇಡ…… ಆಯ್ತು ಅನು.

ಇವಾಗ ಏನು ಮಾಡಬೇಕು ಅಂತ ಹೇಳು. ನನಗೆ ಏನು ಮಾಡಬೇಕು ಅಂತ ದಿಕ್ಕೆ ತೋಚುತ್ತಿಲ್ಲ. ನೀನು ನನೆY ಸಹಾಯ ಮಾಡುತ್ತೀಯಾ. ಅಂತ ಸುನಿತಾ ಕೇಳಿದ್ದಕ್ಕೆ. ನೀನು ನನ್ನ ಗೆಳತಿ .ಇಷ್ಟೇನಾ ನೀನು ನನ್ನ ಅರ್ಥ ಮಾಡಿಕೊಂಡಿರುವುದುವುದು? ಗೆಳೆತನ ಅಂದರೆ ಬರಿ ಖುಷಿಯಲ್ಲಿ ಇದ್ದಾಗ ಮಾತ್ರ ಜತೆಯಲ್ಲಿ ಇರುವುದು ಅಲ್ಲ. ಕಷ್ಟ, ಸುಖ, ದುಃಖ ಎಲ್ಲದರಲ್ಲೂ ಜತೆಗೆ ಇರುವುದು ನಿಜವಾದ ಗೆಳೆತನ ಸುನಿತಾ. ಹೌದು ನನಗೂ ಗೊತ್ತು.

ನಾನು ಬಂದು ತುಂಬಾ ಸಮಯ ಆಯ್ತು. ತಡವಾಗಿ ಮನೆಗೆ ಹೊದರೆ ಅಪ್ಪ ಕ್ಲಾಸ್‌ ತೆಗೆದುಕೊಳ್ಳುತ್ತಾರೆ. ಇಗಾಗಲೇ ತಡವಾಗಿದೆ. ನಾನು ಇನ್ನೂ ಹೊರಡುತ್ತೇನೆ. ಅನು ನಾನು ಹೇಳಿದ್ದ ವಿಚಾರದ ಬಗ್ಗೆ ಯೋಚನೆ ಮಾಡಿ ಸಂಜೆ ಕಾಲ್‌ ಮಾಡು. ನಿನ್ನ ಕಾಲ್‌ ಗೋಸ್ಕರ ಕಾಯ್ತಾ ಇರ್ತೀನಿ.ಎಂದು ಹೇಳಿ ಮನೆಗೆ ತಲುಪುವ ಹೊತ್ತಿಗೆ ಅಪ್ಪ ಬಾಗಿಲಿನಲ್ಲಿ ಕಾಯ್ತಾ ಕೂತ್ತಿದ್ದರು. ಅಪ್ಪನನ್ನು ನೋಡಿ ಶಾಕ್‌! ಆಯ್ತು ಇವತ್ತು ಏನು ಕಾದಿದೆಯೋ ಹಬ್ಬ ಅಂತ ಮನಸ್ಸಿನಲ್ಲಿ ಹೇಳಿಕೊಂಡು ಬಾಗಿಲಿನ ಹತ್ತಿರ ಬಂದೆ.

ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೆ. ಮದುವೆ ವಯಸ್ಸಿಗೆ ಬಂದಿರೋ ಹೆಣ್ಣು ಮಗಳು ನೀನು ಎಷ್ಟೋತ್ತಿಗೆ ಬರಬೇಕು ಅನ್ನೋದು ಮರೆತು ಬಿಟ್ಟೆ ಹೇಗೆ? ಹುಡುಗರ ಹಾಗೇ ಊರೆಲ್ಲಾ ಸುತ್ತುಕೊಂಡು ಇವಾಗ ಮನೆಗೆ ಬರುತ್ತಿದ್ದೀಯಾ? ನೀನು ನಮ್ಮ ಮರ್ಯಾದೆ ತೆಗೆಯುವುದಕ್ಕೆ ಹುಟ್ಟಿದ್ದು ಅನಿಸುತ್ತದೆ, ಎಂದು ಬಾಗಿಲಲ್ಲಿ ನಿಲ್ಲಿಸಿ ಬೈಯಲು ಪ್ರಾರಂಭ ಮಾಡಿದರು.

ಅಷ್ಟರಲ್ಲಿ ಅವಳ ಗೆಳತಿ ಅನು ಅವಳ ಮನೆಗೆ ಬಂದು ಸರ್‌ ಅವಳು ನಮ್ಮ ಮನೆಗೆ ಬಂದಿದ್ಲು ಅಂತ ಹೇಳಿ ಸಮಾಧಾನ ಮಾಡಿದ್ಲುನೀನು ನನ್ನ ಗೆಳತಿ ಅಲ್ಲ? ನನ್ನ ಪಾಲಿಗೆ ನೀನು ದೇವರು, ಇದು ನನ್ನ ಕರ್ತವ್ಯ ಸುನಿ ಎಂದು ಹೇಳಿ ಹೊರಟು ಹೋದಳು. ಮಾರನೆದಿನ ಗಟ್ಟಿ ನಿರ್ಧಾರ ಮಾಡಿ ಅಪ್ಪ ನಾನು ಮದುವೆ ಆಗೋದಿಲ್ಲ. ನಾನು ಕೆಲಸಕ್ಕೆ ಹೋಗುತ್ತೀನಿ ಅಂತ ಹೇಳಿ ಅಪ್ಪನಿಗೆ ಮಾತನಾಡುವುದಕ್ಕೆ ಅವಕಾಶವನ್ನು ಕೊಡದೆ ಹೊರಟ್ಟು ಹೋದಳು. ಅನು ನನಗೆ ಪರಿಚಯ ಇರುವ ವ್ಯಕ್ತಿಯ ಕಂಪೆನಿಯಲ್ಲಿ ಕೆಲಸ ಖಾಲಿ ಇದೆ ಅಂತ ಹೇಳಿದ್ರೂ. ಬಾ ಅಲ್ಲಿಗೆ ಹೋಗಿ ಕೇಳಿದ್ದರೆ ನಮಗೆ ಕೆಲಸ ಸಿಗಬಹುದು ನೋಡೋಣ ಎಂದು ಹೊರಟರು.

ಕಂಪೆ‌ನಿಯ ಮ್ಯಾನೇಜರ್‌ ಸುನಿತಾಗೆ ಸಂದರ್ಶನ ಮಾಡಿದ್ದರೂ. ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳು ಕೊಟ್ಟಳು. ಬಹಳ ಬುದ್ಧಿವಂತೆ ಅನಿಸುತ್ತೆ ಎಂದು ಮ್ಯಾನೇಜರ್‌ ಮನಸ್ಸಿಲ್ಲೇ ಅಂದುಕೊಂಡರೂ…. ನಾಳೆಯಿಂದ ನೀನು ಕೆಲಸಕ್ಕೆ ಬರಬಹುದು ಎಂದು ಹೇಳಿದ್ರೂ. ಸುನಿತಾ ಗಿಂತಲೂ ಹೆಚ್ಚು ಅನುನೇ ಖುಷಿ ಪಟ್ಟುಳು. ನನ್ನ ಗೆಳತಿಗೆ ಇಂತಹ ಒಂದು ದೊಡ್ಡ ಕಂಪೆನಿಗಳಲ್ಲಿ ಕೆಲಸ ಸಿಗುವುದು ಕನಸು ಆಗಿತ್ತು ಆದರೆ ಇವತ್ತು ನನಸು ಆಯ್ತು ಅಷ್ಟೇ ಸಾಕು ನನಗೆ. ನನ್ನ ತಂದೆಯ ಜವಾಬ್ದಾರಿಯನ್ನು ತೆಗೆದು ಕೊಂಡು ತನ್ನ ತಾಯಿ ಬದುಕಿರುವಾಗಲೇ ತನ್ನ ತಂಗಿಯ ಮದುವೆಯನ್ನು ಮಾಡಿದಳು.

ತಾನು ಕೂಡ ಅಪ್ಪ ತೋರಿಸಿದ ಹುಡುಗನ ಜತೆ ವಿವಾಹವಾದಳು. ಅಪ್ಪನಿಗೆ ಕೊನೆಯದಾಗಿ ಏನೋ ಹೇಳಬೇಕೆಂದು ಬರುತ್ತಾಳೆ. ನೋಡು ಅಪ್ಪ ನೀನು ಅಂದುಕೊಂಡಂತೆ ನಾವು ಇಬ್ರೂ ವಿವಾಹ ಆದ್ವೀ ನೀನನ್ನು ಗೊಳಾಡಿಸಿದ್ದೇನೆ ಅಪ್ಪ ಆದರೆ ನಮ್ಮ ವಿವಾಹ ಮಾಡಿ ನೀನ್ನನ್ನು ಸಾಲಗಾರನನ್ನಾಗಿ ಮಾಡಿ ಹೋಗಲು ನನ್ನ ಮನಸ್ಸು ಒಪ್ಪಲಿಲ್ಲ ಅಪ್ಪ. ಅದಕ್ಕೆ ನೀನು ಏನೇ ಹೇಳಿದರೂ ನನ್ನ ಒಳ್ಳೆಯದಕ್ಕೆ ಅಂತ ಗೊತ್ತಿದ್ದರೂ ನಾನು ಕೆಲವೊಂದು ಸಾರಿ ನಿಮ್ಮ ಮಾತುಗಳನ್ನು ನಿರಾಕರಿಸಿದೆ ಅದಕ್ಕೆ ನನ್ನ ಕ್ಷಮೆಯಿರಲಿ ಅಪ್ಪ.


ನಿಸರ್ಗ ಸಿ.ಎ., ಚೀರನಹಳ್ಳಿ 

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.