ಲಕ್ಷ್ಮೇಶ್ವರದಲ್ಲಿ ಮೈನವಿರೇಳಿಸಿದ ಟಗರಿನ ಕಾಳಗ
Team Udayavani, Dec 29, 2020, 4:15 PM IST
ಲಕ್ಷ್ಮೇಶ್ವರ: ಪಟ್ಟಣದ ದುಂಡಿಬಸವೇಶ್ವರ ದೇವಸ್ಥಾನದ ರಸ್ತೆಯ ಜಮೀನಿನಲ್ಲಿ ಎರಡು ದಿನ ನಡೆದ ಟಗರಿನ ಕಾಳಗ ಸೋಮವಾರ ಮುಕ್ತಾಯವಾಯಿತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಟಗರುಗಳ ಗುದ್ದಾಟದ ಮೈ ನವಿರೇಳಿಸುವ ದ್ಯಶ್ಯಗಳ ನಡುವೆ ಪಂದ್ಯಾವಳಿ ಯಶಸ್ವಿಯಾಗಿ ನೆರವೇರಿತು.
ಐದು ಹಂತದ ಪಂದ್ಯಾವಳಿಯಲ್ಲಿ ಕ್ರಮವಾಗಿ 30000, 15000, 10000, 8000, 6000 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು. ವಿಜೇತ ತಂಡಗಳಿಗೆ ಪಿಎಸ್‌ಐ ಶಿವಯೋಗಿ ಲೋಹಾರ ಬಹುಮಾನ ವಿತರಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ನಮ್ಮ ಹಿರಿಯರ ಬಳುವಳಿಯಾಗಿವೆ. ಯುವಕರು ದುಶ್ಚಟಗಳಿಂದ ದೂರವಿದ್ದು ಗ್ರಾಮೀಣ ಕ್ರೀಡೆಗಳತ್ತ ಒಲವು ತೋರಬೇಕು.
ದ್ವೇಷ, ತಂಟೆ-ತಕರಾರು ಬಿಟ್ಟು ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು.
ಪ್ರಸ್ತುತ ಕೊರೊನಾ ಸಂಕಷ್ಟದ ಕಾಲದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ ಮಾರ್ಗಸೂಚಿ ಪಾಲಿಸಬೇಕು ಎಂದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ತಾಲೂಕಾಧ್ಯಕ್ಷ ನಾಗೇಶ ಅಮರಾಪುರ, ಆಸ್ಪಾಕ ಬಾಗೋಡಿ,
ಮುಜಾಮಿಲ್ ಬೇಪಾರಿ, ಪ್ರಕಾಶ ಉದ್ದನಗೌಡ್ರ, ಅಪ್ಪು ಉಮಚಗಿ, ಶಂಕರ ಪಾಟೀಲ, ಪ್ರಕಾಶ ಉದ್ದನಗೌಡ್ರ, ಪ್ರವೀಣ ಗಾಣಿಗೇರ, ಕಾರ್ತಿಕ ಗುಡಗೇರಿ, ಸುಲೇಮಾನ ಕೂಬಿಹಾಳ, ದುದ್ದುಸಾಬ ಅಕ್ಕಿ, ಮೈನು ಮನಿಯಾರ, ದ್ಯಾಮಣ್ಣ ಬಾರ್ಕಿ ರಾಮು ನಾಯಕ್, ಬಸವರಾಜ ಅಮರಾಪುರ, ಹನುಮಂತ ದುತ್ತರಗಿ, ತುಳಜಪ್ಪ ಪವಾರ, ಮುತ್ತು ಗಾಣಿಗೇರ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.