ಮಳೆಯಿಂದ ರಕ್ಷಿಸಲು ಶ್ವಾನಗಳಿಗೆ ಆಶ್ರಯ ಗೂಡು
Team Udayavani, Jun 21, 2020, 6:27 AM IST
ಮಹಾನಗರ: ಮಳೆಗಾಲದಲ್ಲಿ ಶ್ವಾನ ಮರಿಗಳನ್ನು ಮಳೆ, ಚಳಿಯಿಂದ ರಕ್ಷಿಸಿ ಬೆಚ್ಚನೆಯ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ಎನಿಮಲ್ ಕೇರ್ ಟ್ರಸ್ಟ್ ಮಹತ್ವದ ಕಾರ್ಯವೊಂದಕ್ಕೆ ಮುಂದಾಗಿದೆ. ಪ್ರಾಣಿಗಳ ಸಮುದಾಯ ಆಶ್ರಯ ಯೋಜನೆ ಹೆಸರಿನಲ್ಲಿ ಬೀದಿ ಬದಿಯ ಶ್ವಾನಗಳಿಗೆ ಗೂಡು ಕಟ್ಟಿಕೊಡಲಾಗುತ್ತಿದೆ.
ಶಕ್ತಿನಗರದಲ್ಲಿರುವ ಎನಿಮಲ್ ಕೇರ್ ಟ್ರಸ್ಟ್ ಬೀದಿಬದಿಯಲ್ಲಿರುವ ಶ್ವಾನ, ಬೆಕ್ಕು ಮುಂತಾದ ಪ್ರಾಣಿಗಳನ್ನು ರಕ್ಷಿಸುವಲ್ಲಿ ತೊಡಗಿಸಿಕೊಂಡಿದೆ. ಯಾರೋ ಬಿಟ್ಟು ಹೋದ ಮರಿಗಳನ್ನು ತಂದು ಸಲಹುವ ಕೆಲಸವನ್ನು ನಡೆಸುತ್ತಿದೆ. ಇದೀಗ ಮಳೆಗಾಲ ದಲ್ಲಿ ಬೀದಿ ಬದಿ, ಚರಂಡಿ, ಮೋರಿ ಮುಂತಾದೆಡೆ ಆಶ್ರಯವಿಲ್ಲದೆ ನರಳುತ್ತಿರುವ ಶ್ವಾನ ಮರಿ ಮತ್ತು ಗರ್ಭಿಣಿ ಶ್ವಾನಗಳಿಗೆ ಬೆಚ್ಚನೆಯ ಗೂಡು ಕಟ್ಟಿಕೊಡಲು ಟ್ರಸ್ಟ್ ಮುಂದಾಗಿದೆ. ಈಗಾಗಲೇ ದೇರೆಬೈಲ್‌ನ ಪ್ರಶಾಂತ ನಗರ ಮತ್ತು ಮೂಡುಶೆಡ್ಡೆಯಲ್ಲಿ ಗೂಡು ನಿರ್ಮಾಣ ಮಾಡಲಾಗಿದೆ.
ಸ್ಥಳೀಯರಿಂದಲೇ ಆಹಾರ
ಯಾವುದೇ ಶ್ವಾನ ಮರಿಗಳು, ಗರ್ಭಿಣಿ ಶ್ವಾನಗಳು ಕಂಡು ಬಂದಲ್ಲಿ ಅವುಗಳಿಗೆ ಅಲ್ಲೇ ಗೂಡುಗಳನ್ನು ಕಟ್ಟಿ ಆಶ್ರಯ ಕಲ್ಪಿಸುವುದು ಟ್ರಸ್ಟ್ ಉದ್ದೇಶ. ಗೂಡಿನಲ್ಲಿರುವ ಶ್ವಾನಗಳಿಗೆ ಅನ್ನಾಹಾರ ನೀಡಲು ಸನಿಹದ ಮನೆ ಅಥವಾ ಅಂಗಡಿಗಳಲ್ಲಿ ಟ್ರಸ್ಟ್ ಮನವಿ ಮಾಡಲಿದೆ.
ಪ್ರತಿ ಗೂಡಿಗೆ 2,500 ರೂ. ವೆಚ್ಚ
ಪ್ರತಿ ಗೂಡಿಗೆ ಕನಿಷ್ಠ 2,500 ರೂ. ವೆಚ್ಚ ತಗಲುತ್ತದೆ. ದಾನಿಗಳ ನೆರವಿನೊಂದಿಗೆ ಟ್ರಸ್ಟ್ ಸದಸ್ಯರು ಗೂಡನ್ನು ನಿರ್ಮಿಸುತ್ತಿದ್ದಾರೆ ಎಂದು ಟ್ರಸ್ಟಿ ಸುಮಾ ನಾಯಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.