![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 14, 2020, 7:43 PM IST
ಲೇಡೀಸ್ ಆ್ಯಂಡ್ ಜಂಟಲ್‌ಮೆನ್ ಪ್ಲೀಸ್ ವೆಲ್‌ಕಂ ಆನ್ ದಿ ಸ್ಟೇಜ್… ಹೀಗೆ ಹೇಳುತ್ತಿದ್ದಂತೆ ಪ್ರೇಕ್ಷಕರ ಸಾಲಿನಿಂದ ಜೋರಾದ ಚಪ್ಪಾಳೆಯ ಸದ್ದು. ಇದೀಗ ಗಾಯಕ-ಗೀತರಚನೆಕಾರ ಶಿಮೋನ್ ಅವರು ನಿಮ್ಮನ್ನು ರಂಜಿಸಲಿದ್ದಾರೆ ಎಂದು ಹೇಳಿ ನಿರೂಪಕ ವೇದಿಕೆ ತೊರೆಯುತ್ತಾನೆ.
ಅಲ್ಲಿಗೆ ಶಿಮೋನ್ ಅಂದರೆ ಯಾರಿರಬಹುದು? ಎಂತಹ ಹಾಡುಗಳನ್ನು ಹಾಡಿರಬಹುದೆಂದು ನೀವು ಜಾಸ್ತಿ ತಲೆ ಕೆಡಿಸಿಕೊಳ್ಳುವುದೇ ಬೇಡ. ಶಿಮೋನ್ ಎಂದರೆ ಅದೊಂದು ರೊಬೋಟ್. ಶೃತಿ, ತಾಳ, ಲಯಬದ್ಧವಾಗಿ ಹಾಡಿ ಎಲ್ಲರನ್ನೂ ಮನರಂಜಿಸಬಲ್ಲ ಸಾಮರ್ಥ್ಯ ಇದಕ್ಕಿದೆ.
50 ಸಾವಿರ ಹಾಡು ಗೊತ್ತು…
ಇದನ್ನು ಮೊದಲ ಬಾರಿಗೆ 2017ರಲ್ಲಿ ಸಾರ್ವಜನಿಕರಿಗೆ ಪರಿಚಯಿಸಲಾಯಿತು ಮತ್ತು ಅಂದಿನಿಂದ ನೃತ್ಯ, ಹಾಡುಗಾರಿಕೆ, ಸಾಹಿತ್ಯ ಬರೆಯಲು ಮತ್ತು ಮಧುರ ಗೀತೆಗಳನ್ನು ಕಲಿಯುವ ಮೂಲಕ ತಮ್ಮ ಕಾರ್ಯವನ್ನು ಮೆರುಗುಗೊಳಿಸುತ್ತಾ ಬಂದಿದೆ.
ಇದನ್ನು ಜಾರ್ಜಿಯಾ ಟೆಕ್ ರೊಬೊಟಿಕ್ ಸಂಗೀತಗಾರರ ಗುಂಪು ರಚಿಸಿದೆ. ಈ ರೋಬೋಟ್ ತಾಂತ್ರಿಕವಾಗಿ ಉನ್ನತ ಮಟ್ಟದ್ದಲ್ಲಿದ್ದು ಹೊಸ ಸ್ತರದ ಸಂಗೀತ ಚಿಂತನೆಗಳನ್ನು ತಾನಾಗಿಯೇ ಅಳವಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ಹಿಪ್ ಹಾಪ್ ಹಾಡು ಮತ್ತು ರಾಕ್ ಸಿಂಗಿಂಗ್‌ನಂತಹ ಮಾದರಿಯ 50,000 ಹಾಡುಗಳನ್ನು ಮಾರ್ಧನಿಸಬಲ್ಲದು. ಗೀತರಚನೆ ವಿಭಾಗದಲ್ಲಿ ಶಿಮೊನ್‌ಗೆ ಸಾಹಿತ್ಯವನ್ನು ಹೊಂದಿಸಲು ಅನುಕೂಲವಾಗುವಂತೆ ಅವರ ಸೃಷ್ಟಿಕರ್ತ ಜಾರ್ಜಿಯಾ ಟೆಕ್ ಪ್ರೊಫೆಸರ್ ಗಿಲ್ ವೈನ್ಬರ್ಗ್ ಒಂದು ಥೀಮ್ ಅನ್ನು ನೀಡುತ್ತಾರೆ. ಆ ಥೀಮ್‌ನ ಆಧಾರದಲ್ಲಿ ಸಾಹಿತ್ಯವನ್ನು ಬರೆಯಲು ಈ ರೋಬೋಟ್ ಶಕ್ತವಾಗಿದೆ.
ಜಾರ್ಜಿಯಾ ಟೆಕ್ ತಂಡದ ಪ್ರಕಾರ, ಶಿಮೊನ್ ರೊಬೋಟ್ ಮತ್ತು ಮಾನವ ಸಂಗೀತಗಾರರ ನಡುವೆ ಹೆಚ್ಚಿನ ಸಹಯೋಗವನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಇದರಿಂದ ಸಂಗೀತ ಕ್ಷೇತ್ರದಲ್ಲಿ ಅನನ್ಯ ಕ್ರಾಂತಿ ಸಾಧ್ಯವೆಂದು ಹೇಳಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.