Sirsi: ಬರಗಾಲ ಕುರಿತು ಶಾಸಕ ಭೀಮಣ್ಣ ನಾಯ್ಕ ಸಭೆ
ಜನ, ಜಾನುವಾರುಗಳಿಗೆ ಏನೂ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಸೂಚನೆ
Team Udayavani, Nov 16, 2023, 5:01 PM IST
ಶಿರಸಿ: ತಾಲೂಕಿನಲ್ಲಿ ಜನ ಜಾನುವಾರುಗಳಿಗೆ ಯಾವುದೇ ರೀತಿಯಲ್ಲೂ ಕುಡಿಯುವ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು, ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ಗುರುವಾರ ನಗರದ ಮಿನಿ ವಿಧಾನ ಸೌಧಲ್ಲಿ ಬರದ ನಿರ್ವಹಣಾ ಸಿದ್ಧತೆ ಹಿನ್ನಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಶಿರಸಿಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಯಾವುದೇ ಸಮಸ್ಯೆ ಆಗಬಾರದು. ಜೆಜೆಎಂಎಲ್ 116 ಕಾಮಗಾರಿಗಳು ಕೂಡ ಬೇಗ ಸರಿ ಮಾಡಿಕೊಡಬೇಕು. ಪ್ರತಿ ಯೋಜನೆಯಲ್ಲೂ ಒಂದು ಹೆಚ್ಚುವರಿ ನೀರಿನ ಮೂಲ ಮಾಡಬೇಕಿದೆ ಎಂದರು.
ಅಭಿಯಂತ ಅರುಣಕುಮಾರ ಮಾತನಾಡಿ, 48 ಪೂರ್ಣವಾಗಿದೆ. ಮೂರು ಹಸ್ತಾಂತರ ಆಗಬೇಕು. ಇನ್ನೂ 22 ಕಾಮಗಾರಿ ಆಗಬೇಕಿದೆ ಎಂದರು. ತಾಲೂಕು ಪಂಚಾಯತ್ ಇಓ ಸತೀಶ ಹೆಗಡೆ 205 ಮಜರೆಯಲ್ಲಿ ನೀರಿನ ಕೊರತೆ ಆಗುವ ಸಾಧ್ಯತೆ ಇದೆ. ಹೊಸ ಬೋರ್ ವೆಲ್ ಪ್ರಸ್ತಾಪ ಕೂಡ ಪಡೆದುಕೊಂಡು ಗುರುತು ಹಾಕುತ್ತಿದ್ದೇವೆ ಎಂದರು.
ಇದನ್ನೂ ಓದಿ: Dog bite: ತಿಂಗಳಲ್ಲೇ 500ಕ್ಕೂ ಹೆಚ್ಚು ಮಂದಿಗೆ ನಾಯಿ ಕಡಿತ
ಪೌರಾಯುಕ್ತ ಕಾಂತರಾಜ, 26 ರಲ್ಲಿ 15 ಬೋರವೆಲ್ ಸರಿ ಇದೆ. 11 ದುರಸ್ತಿ ಮಾಡುತ್ತಿದ್ದೇವೆ. ಡಿಸೆಂಬರ್ ತನಕ ನಿತ್ಯ ನೀರು ಕೊಡಲಿದ್ದೇವೆ. ಫೆಬ್ರುವರಿಯಲ್ಲಿ ದಿನ ಬಿಟ್ಟು ದಿನ ಕೊಡುವುದಾಗಿ ಹೇಳಿದಾಗ ಪ್ರತಿಕ್ರಿಯೆ ನೀಡಿದ ಭೀಮಣ್ಣ, ನಿತ್ಯ ನೀರು ಕೊಡಬೇಕು ಎಂದರು.
ಮಾರಿಗದ್ದೆ ಹಾಗೂ ಕೆಂಗ್ರೆಯಿಂದ ನಗರಕ್ಕೆ ಡಿಸೆಂಬರ್ ತನಕ ನೀರು ಸಾಕಾಗಬಹುದು, 20 ಬೋರ್ ವೆಲ್ ಹೆಚ್ಚುವರಿ ಬೇಕಿದ್ದು, 70 ಲ.ರೂ.ಬೇಕಾಗಬಹುದು ಎಂದು ಮಾಹಿತಿ ನಗರಸಭೆ ಅಧಿಕಾರಿಗಳು ತಿಳಿಸಿದರು.
ಹಣದ ಕೊರತೆ ಆಗುವದಿಲ್ಲ. ಆದರೆ, ಜಲಮೂಲ ನೋಡಿ ಪ್ರಸ್ತಾವನೆ, ಬಾಕಿ ಉಳಿದ ಕಾಮಗಾರಿ ಪೂರ್ಣ ಮಾಡಬೇಕು ಎಂದು ಭೀಮಣ್ಣ ಸೂಚಿಸಿದರು. ತಹಸೀಲ್ದಾರ ಶ್ರೀಧರ ಮುಂದಲಮನಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.