ಗುರು ಪಾದೋದಕ ಇಲ್ಲದೇ ಶಿವಲಿಂಗ ಪೂಜೆಗೆ ಅರ್ಹವಲ್ಲ: ದಿಗ್ಗಾಂವ ಸ್ವಾಮೀಜಿ
Team Udayavani, Sep 11, 2024, 11:53 PM IST
ಚಿತ್ತಾಪುರ: ಶಿವಲಿಂಗದ ಮೇಲೆ ಪಾದಗಳನ್ನು ಇರಿಸಿ ಪೂಜೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯ ಶ್ರೀಗಳು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದು, ಗುರುಗಳ ಪಾದೋದಕವಿಲ್ಲದೇ ಸ್ಥಾಪಿಸಲ್ಪಟ್ಟ ಲಿಂಗವು ಪೂಜಾರ್ಹವಲ್ಲವೆಂದು ವೀರಶೈವ ನವರತ್ನ ಮತ್ತು ವೀರಶೈವ ದಶರತ್ನ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಲಕಂಬ ಗ್ರಾಮದ ಈಶ ಬಸವೇಶ್ವರ ದೇವಾಲಯದ ಶಿವಲಿಂಗ ನೆಲದಲ್ಲಿ ಹುದುಗಿ ಹೋಗಿತ್ತು. ಹೊಸದಾಗಿ ಲಿಂಗ ಸ್ಥಾಪಿಸಿ ಅದಕ್ಕೆ ಪ್ರಾಣ ಪ್ರತಿಷ್ಠೆ ಮಾಡಬೇಕಾದರೆ ಹಲವು ಕ್ರಿಯೆಗಳು ನಡೆಯಬೇಕು. ಗುರುಗಳ ಪಾದೋದಕ ಇಲ್ಲದೇ ಶಿವಲಿಂಗ ಸ್ಥಾಪಿಸಲು, ಪೂಜೆ ಮಾಡಲು ಯೋಗ್ಯವೆನಿಸುವುದಿಲ್ಲ. ಧರ್ಮಗ್ರಂಥಗಳ ಆಧಾರದಲ್ಲಿ ಪ್ರಾಣ ಪ್ರತಿಷ್ಠಾಪನೆ, ಪಾದೋದಕ ಮಾಡಲಾಗಿದೆ. ಆದರೆ ಇದನ್ನೇ ಯಾರೋ ಕಿಡಿಗೇಡಿಗಳು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ. ನನ್ನಿಂದ ಯಾವುದೇ ತಪ್ಪು ನಡೆದಿದ್ದಲ್ಲ; ಧರ್ಮಗ್ರಂಥಗಳ ಪ್ರಕಾರವೇ ಮಾಡಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.