ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂದು ಶಿವಣ್ಣ ಹೇಳಿದ್ಯಾಕೆ?
Team Udayavani, Jul 4, 2020, 8:58 AM IST
ಜುಲೈ 12 ರಂದು ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ 58ನೇ ಹುಟ್ಟುಹಬ್ಬವಿದ್ದು, ಅವರ ಅಭಿಮಾನಿಗಳ ಪಾಲಿಗೆ ಅದು ದೊಡ್ಡಹಬ್ಬ. ಅದಕ್ಕಾಗಿ ಅಭಿಮಾನಿಗಳು ಸಹ ತಯಾರಿ ನಡೆಸುತ್ತಿದ್ದರು. ಈ ನಡುವೆ ಶಿವಣ್ಣ ಈ ಬಾರಿ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಟ್ವೀಟರ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, “ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ಬರ್ತ್ ಡೇ ದಿನ ನಾನು ಮನೆಯಲ್ಲಿ ಇರೋದಿಲ್ಲ. ನಿಮ್ಗೆಲ್ಲ ಬೇಜಾರಾಗುತ್ತೆ ಅಂತ ಗೊತ್ತು. ಅದಕ್ಕಿಂತ ಹೆಚ್ಚು ಬೇಜಾರು ನನಗೆ ಆಗುತ್ತೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಆದರೆ, ಬರ್ತ್ ಡೇ ಆಚರಿಸಿದ್ದಲ್ಲಿ ಅದನ್ನ ಪಾಲಿಸೋದು ಕಷ್ಟ. ಕೋವಿಡ್ 19 ಕಳೆದ ಮೇಲೆ ಎಲ್ಲರೂ ಒಂದು ಕಡೆ ಮೀಟ್ ಮಾಡೋಣ. ಆದಷ್ಟು ಬೇಗ ಕೋವಿಡ್ 19ನಿಂದ ಹೊರಬರೋಣ. ಭಯಪಡಬೇಡಿ, ಧೈರ್ಯವಾಗಿರಿ. ನಿಯಮಗಳನ್ನ ಪಾಲಿಸೋಣ’ವೆಂದು ಹೇಳಿದ್ದಾರೆ.
Stay home stay safe everyone. pic.twitter.com/IqnfeLk6uA
— DrShivaRajkumar (@NimmaShivanna) July 3, 2020
ಇನ್ನು ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಚಿತ್ರತಂಡ, ಇಷ್ಟು ದಿನ ಕೋವಿಡ್ ಮಹಾಮಾರಿಯಿಂದ ಏನೂ ಅಪ್ಡೆಟ್ ಕೊಡಲಿಲ್ಲ. ಭಜರಂಗಿ ಅಂದ್ರೇನೆ ದುಷ್ಟ ಶಕ್ತಿಗಳ ಹುಟ್ಟಡಗಿಸೋ ಹೆಸರು. ಕೆಟ್ಟದ್ದನ್ನೆಲ್ಲಾ ಸಂಹಾರ ಮಾಡಿ ಹೊಸ ಶಕ್ತಿಯೊಂದಿಗೆ ಬರುತ್ತಿದ್ದೇವೆ. ಫಸ್ಟ್ ಲುಕ್ ಎಲ್ಲಾ ಆಯ್ತು.ಇವಾಗ ಹೊಸ ಸರ್‌ಪ್ರೈಸ್… ಎಲ್ಲಾ ಶಿವಣ್ಣನ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದಂದು… ಎಂದು ಟ್ವೀಟ್ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.