![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jun 29, 2021, 8:44 PM IST
ಬೆಂಗಳೂರು: ರಾಜ್ಯದ ಕಾರ್ಮಿಕ ವರ್ಗಕ್ಕೆ ಸರ್ಕಾರ ಭರ್ಜರಿ ಉಡುಗೊರೆ ನೀಡಿದ್ದು, ಕಲ್ಯಾಣ ಯೋಜನೆಗಳಡಿ ನೀಡಲಾಗುವ ಧನ ಸಹಾಯದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಟಾರ್ ತಿಳಿಸಿದ್ದಾರೆ.
ಸಹಾಯಧನ ಪರಿಷ್ಕರಣೆ ಸಂಬಂಧ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ 90ನೇ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಇಲಾಖೆ ಜಾರಿ ಮಾಡಿದೆ. ಸಹಾಯಧನ ಪರಿಷ್ಕರಣೆ ಜೊತೆಗೆ ಇದೇ ಮೊದಲ ಬಾರಿಗೆ ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆಯನ್ನು ಘೋಷಿಸಲಾಗಿದೆ.
ಪ್ರಸ್ತುತ ಜಾರಿಯಲ್ಲಿ ಇರುವ ಶೈಕ್ಷಣಿಕ ಪೋ›ತ್ಸಾಹ ಧನ ಸಹಾಯ ಪಡೆಯಲು ಇದ್ದ ವೇತನ ಮಿತಿ 15,000 ರೂ. ನಿಂದ 21,000 ರೂ. ಏರಿಕೆ ಮಾಡಲಾಗಿದೆ. ಇದರಿಂದ ಈ ಯೋಜನೆ ಇನ್ನಷ್ಟು ಕಾರ್ಮಿಕರನ್ನು ತಲುಪಲಿದೆ. ಈಗಿರುವ ಕಾರ್ಮಿಕ ವೈದ್ಯಕೀಯ ನೆರವು ಮೊತ್ತವನ್ನು 10,000 ರೂ. ನಿಂದ 25,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಕಾರ್ಮಿಕರ ಅಪಘಾತ ಧನ ಸಹಾಯವನ್ನು 3,000 ರೂ. ನಿಂದ 10,000 ರೂ.ಗೆ ಏರಿಕೆ ಮಾಡಲಾಗಿದೆ.
ಶೈಕ್ಷಣಿಕ ಪೋ›ತ್ಸಾಹ ಯೋಜನೆಯಡಿ ಇಲಾಖೆಯು 8ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ, ಡಿಪ್ಲೋಮಾ, ಐಟಿಐ ಕೋರ್ಸ್, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಒಂದು ಕುಟುಂಬ ಓರ್ವ ವಿದ್ಯಾರ್ಥಿಗೆ ವಾರ್ಷಿಕ ಧನ ಸಹಾಯ ನೀಡುವ ಯೋಜನೆಯ ಮಾಸಿಕ ಆದಾಯ ಮಿತಿಯನ್ನು ಏರಿಕೆ ಮಾಡಿ ಹೆಚ್ಚಿನ ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ :Online ಬೆಟ್ಟಿಂಗ್ ನಿಷೇಧ ವಿಚಾರ : ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್ ಅಸಮಧಾನ
ಮೃತ ಕಾರ್ಮಿಕನ ಅಂತ್ಯ ಸಂಸ್ಕಾರಕ್ಕಿದ್ದ ಧನ ಸಹಾಯವನ್ನೂ ಏರಿಕೆ ಮಾಡಲಾಗಿದ್ದು, 5,000 ರೂ. ಇದ್ದ ಧನ ಸಹಾಯವನ್ನು ದ್ವಿಗುಣ ಗೊಳಿಸಿ 10,000 ರೂ.ಗೆ ನಿಗಧಿಪಡಿಸಲಾಗಿದೆ. ವಾರ್ಷಿಕವಾಗಿ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಟ್ರೇಡ್ ಯೂನಿಯನ್ ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಧನ ಸಹಾಯದಲ್ಲಿ ಭಾರೀ ಏರಿಕೆ ಮಾಡಲಾಗಿದ್ದು, ಈ ಧನ ಸಹಾಯವನ್ನು 30,000 ರೂ ನಿಂದ 1 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಸಂಘಟಿತ ಮಹಿಳಾ ಕಾರ್ಮಿಕರಿಗೆ ಮೊದಲ ಎರಡು ಮಕ್ಕಳಿಗೆ ತಲಾ 10,000 ರೂ. ಹೆರಿಗೆ ಭತ್ಯೆ ನೀಡುವಂತಹ ಮಹತ್ವ ನಿರ್ಧಾರವನ್ನೂ ಇಲಾಖೆ ಕೈಗೊಂಡಿದ್ದು, ವಾರ್ಷಿಕ ಕ್ರೀಡಾಕೂಟ ಧನ ಸಹಾಯವನ್ನು 50,000 ರೂ. ನಿಂದ 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಈ ಯೋಜನೆಗಳ ಜಾರಿಯನ್ನು ಸರ್ಕಾರದ ಯಾವುದೇ ಅನುದಾನ ಬಳಕೆ ಇಲ್ಲದೆ ಕಾರ್ಮಿಕ ಕಲ್ಯಾಣ ಮಂಡಳಿ ಸಂಪನ್ಮೂಲದಿಂದಲೇ ಭರಿಸಲಾಗುವುದು ಎಂದು ತಿಳಿಸಿರುವ ಸಚಿವ ಶಿವರಾಂ ಹೆಬ್ಟಾರ್ ಈ ಸಹಾಯಧನ ಪರಿಷ್ಕರಣೆಯಿಂದ ಸಂಘಟಿತ ಕಾರ್ಮಿಕ ವಲಯಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು.
ಕಾರ್ಮಿಕ ಕಲ್ಯಾಣ ಯೋಜನೆಗಳ ದರ ಪರಿಷ್ಕರಣೆ ಕಾರ್ಮಿಕ ಸಂಘಟನೆಗಳ ಬಹು ದಿನಗಳ ಬೇಡಿಕೆಯಾಗಿತ್ತು ಮತ್ತು ಕಳೆದ ಐದಾರು ವರ್ಷಗಳಿಂದ ದರ ಪರಿಷ್ಕರಣೆ ಕಾರ್ಯ ನಡೆದಿರಲಿಲ್ಲ. ಹೀಗಾಗಿ ಸಂಕಷ್ಟ ದ ಸಂದರ್ಭ ಮತ್ತು ಬೆಲೆಗಳಲ್ಲಿ ಆಗಿರುವ ಏರುಪೇರುಗಳನ್ನು ಪರಿಗಣಿಸಿ ಕಾರ್ಮಿಕರ ಹಿತವನ್ನೇ ಪ್ರಮುಖ ಗುರಿಯಾಗಿಸಿಕೊಂಡು ದರ ಪರಿಷ್ಕರಣೆ ಮಾಡಲಾಗಿದೆ. ಹೆಚ್ಚಿನ ಕಾರ್ಮಿಕರು ಈ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬುದೇ ಸರ್ಕಾರದ ಉದ್ದೇಶ
-ಶಿವರಾಂ ಹೆಬ್ಟಾರ್, ಕಾರ್ಮಿಕರ ಸಚಿವರು
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
You seem to have an Ad Blocker on.
To continue reading, please turn it off or whitelist Udayavani.